ಕರಾವಳಿಕ್ರೈಂಸುಳ್ಯ

ಸುಳ್ಯ: ತಡರಾತ್ರಿ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಕಾರು..! ಅಂಗಡಿ ಇಲ್ಲದಿದ್ದರೆ ಸಂಭವಿಸುತ್ತಿತ್ತು ಭಾರಿ ಅನಾಹುತ, ಜಸ್ಟ್ ಮಿಸ್..!

ನ್ಯೂಸ್ ನಾಟೌಟ್: ಕಾರೊಂದು ನಿಯಂತ್ರಣ ತಪ್ಪಿ ಶುಕ್ರವಾರ ತಡರಾತ್ರಿ ಅಂಗಡಿಯೊಂದಕ್ಕೆ ಡಿಕ್ಕಿಯಾಗಿರುವ ಘಟನೆ ಸುಳ್ಯದ ಪಾಲಡ್ಕ ಎಂಬಲ್ಲಿಂದ ವರದಿಯಾಗಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ಬಂದು ಹನೀಫ್ ಎಂಬುವವರ ಅಂಗಡಿಗೆ ಗುದ್ದಿದೆ. ಪರಿಣಾಮ ಅಂಗಡಿಗೆ ಭಾರಿ ಹಾನಿಯಾಗಿದೆ. ಈ ಅಂಗಡಿ ತಡೆಗೋಡೆಯಂತೆ ಇರದಿರುತ್ತಿದ್ದರೆ ಕಾರು ನೇರವಾಗಿ ಪಯಸ್ವಿನಿ ನದಿಗೆ ಬಿದ್ದು ಭಾರಿ ಅನಾಹುತ ಸಂಭವಿಸುತ್ತಿತ್ತು. ಆದರೆ ಸ್ವಲ್ಪದರಲ್ಲೇ ದೊಡ್ಡ ದುರಂತವೊಂದು ತಪ್ಪಿದೆ. ಕಾರು ಜಖಂಗೊಂಡಿದೆ.

Related posts

ದೈವಾರಾಧನೆಗೆ ಅಪಮಾನ;ಹೋರಾಟಕ್ಕೆ ಹಿಂದೂ ಸಂಘಟನೆಯೂ ಎಂಟ್ರಿ..! ಸಿನಿಮಾಗಳಲ್ಲಿ ದೈವರಾಧನೆ ಪ್ರದರ್ಶಿಸದಂತೆ ರಿಷಬ್ ಶೆಟ್ಟಿಗೂ ಎಚ್ಚರಿಕೆ..!

ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್‌ನಲ್ಲಿ 123 ಹುದ್ದೆಗೆ ಅರ್ಜಿ ಆಹ್ವಾನ, ಕ್ಲರ್ಕ್, ಕಂಪ್ಯೂಟರ್ ಪ್ರೊಗ್ರಾಮರ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ

ಟಿಬೆಟ್-ನೇಪಾಳ ಗಡಿಯಲ್ಲಿ ಸರಣಿ ಭೂಕಂಪ, 30ಕ್ಕೂ ಹೆಚ್ಚು ಜನ ಸಾವು..! ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಕಂಪನ..!