Latestದೇಶ-ವಿದೇಶವೈರಲ್ ನ್ಯೂಸ್

ಪಾಕಿಸ್ತಾನಕ್ಕೆ 5ನೇ ತಲೆಮಾರಿನ ಫೈಟರ್ ಜೆಟ್‌ ಪೂರೈಸಲು ಚೀನಾದ ಜೊತೆ ದೊಡ್ಡ ಒಪ್ಪಂದ..! 6 ತಿಂಗಳಿನಿಂದ ಚೀನಾದಲ್ಲಿ ತರಬೇತಿ ಪಡೆಯುತ್ತಿರುವ ಪಾಕ್ ಸೈನಿಕರು..!

205

ನ್ಯೂಸ್ ನಾಟೌಟ್: ಭಾರತವು ತನ್ನದೇ ಆದ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ದೇಶವು ಪಾಕಿಸ್ತಾನಕ್ಕೆ 40 ಜೆ-35 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ (Stealth Fighter Jets) ಪೂರೈಸಲಿದೆ ಎಂದು ವರದಿಯಾಗಿದೆ. ಈ ಮೂಲಕ ಸ್ಟೆಲ್ತ್‌ ತಂತ್ರಜ್ಞಾನ ನಿರ್ವಹಿಸುವ ಕೆಲವೇ ದೇಶಗಳ ಗುಂಪಿಗೆ ಸೇರಲು ಪಾಕ್‌ ಸಜ್ಜಾಗಿದೆ.

5ನೇ ತಲೆಮಾರಿನ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಕೆಲ ದಿನಗಳ ಹಿಂದೆಯಷ್ಟೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅನುಮೋದನೆ ನೀಡಿದ್ದರು. ಭಾರತ ನಿರ್ಮಿಸುತ್ತಿರುವ ಅವಳಿ-ಎಂಜಿನ್ ಹೊಂದಿರುವ 5ನೇ ತಲೆಮಾರಿನ ಮಿಲಿಟರಿ ವಿಮಾನವಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರಿ ಸ್ವಾಮ್ಯದ ಏರೋನಾಟಿಕಲ್ ಅಭಿವೃದ್ಧಿ ಸಂಸ್ಥೆ ಕಾರ್ಯಗತಗೊಳಿಸುತ್ತದೆ. ಆದರೆ, ಸ್ಟೆಲ್ತ್ ವಿಮಾನ – ಅಡ್ವಾನ್ಡ್‌ ಮೀಡಿಯಂ ಕಾಂಬ್ಯಾಟ್ ಏರ್‌ ಕ್ರಾಫ್ಟ್ (AMCA) ಅನ್ನು ವಾಯುಪಡೆಗೆ ಸೇರಿಸಿಕೊಳ್ಳಲು ಕನಿಷ್ಠ 1 ದಶಕಗಳ ಕಾಲ ಸಮಯ ಬೇಕಾಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಎಎಂಸಿಎ 2035ರ ವೇಳೆಗೆ ಭಾರತ ಸ್ಟೆಲ್ತ್‌ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆ ಪೂರ್ಣಗೊಳ್ಳಲಿದೆ.

ಈ ಹೊತ್ತಿನಲ್ಲೇ ಚೀನಾ (China), ಪಾಕಿಸ್ತಾನಕ್ಕೆ (Pakistan) 40 ಸ್ಟೆಲ್ತ್‌ ಫೈಟರ್‌ ಜೆಟ್‌ಗಳನ್ನು ಪೂರೈಸಲು ಮುಂದಾಗಿದೆ ಎಂಬ ವರದಿ ಹೊರಬಿದ್ದಿದೆ. ಈ ಕುರಿತು ಮಾಜಿ ಐಎಎಫ್ ಫೈಟರ್ ಪೈಲಟ್ ಮತ್ತು ರಕ್ಷಣಾ ವಿಶ್ಲೇಷಕ ಗ್ರೂಪ್ ಕ್ಯಾಪ್ಟನ್ ಅಜಯ್ ಅಹ್ಲಾವತ್ (ನಿವೃತ್ತ) ಮಾತನಾಡಿದ್ದು, ಚೀನಾದಲ್ಲಿ ಪಾಕಿಸ್ತಾನಿ ಫೈಟರ್‌ ಪೈಲಟ್‌ಗಳಿಗೆ ಈಗಾಗಲೇ ಸ್ಟೆಲ್ತ್‌ ಜೆಟ್‌ಗಳ ತರಬೇತಿ ನೀಡುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಪಾಕಿಸ್ತಾನ ಈ ಜೆಟ್‌ ಸ್ವೀಕರಿಸೋದಲ್ಲಿ ಅಚ್ಚರಿ ಏನಿಲ್ಲ. ಈಗಾಗಲೇ ಪಾಕಿಸ್ತಾನದ ಫೈಟರ್‌ ಪೈಲಟ್‌ಗಳ ಒಂದು ಟೀಂ 6 ತಿಂಗಳಿಗಿಂತ ಹೆಚ್ಚು ಸಮಯದಿಂದ ಚೀನಾದಲ್ಲಿದೆ. ಸ್ಟೆಲ್ತ್‌ ಜೆಟ್‌ ಅನ್ನು ಸೇನೆಗೆ ಸೇರ್ಪಡೆಗೊಳಿಸುವುದಕ್ಕೂ ಮುನ್ನವೇ ತರಬೇತಿ ಪಡೆದುಕೊಳ್ಳಾಗುತ್ತಿದೆ. ಚೀನಾ FC-31 ಆವೃತ್ತಿಯ ಜೆಟ್‌ ನೀಡುತ್ತದೆ. ಇದು ಜೆ-35ನ ರೂಪಾಂತರವಾಗಿದೆ ಎಂದು ತಿಳಿಸಿದ್ದಾರೆ.

ಉಡುಪಿ: ಕುಂದಾಪುರದ ಉಪನ್ಯಾಸ ಕಾರ್ಯಕ್ರಮದ ಬಗ್ಗೆ ಚಕ್ರವರ್ತಿ ಸೂಲಿಬೆಲೆಗೆ ನೋಟಿಸ್ ಜಾರಿ..! ಪತ್ರದಲ್ಲೇನಿದೆ..?

See also  ದನ ಕಟ್ಟಿ ಹಾಕಲು ಹೋದ ವ್ಯಕ್ತಿ ಮೇಲೆ ಕಾಡು ಹಂದಿ ಮಾರಣಾಂತಿಕ ದಾಳಿ, ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು, ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳು..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget