ಕರಾವಳಿಪುತ್ತೂರು

ಪುತ್ತೂರು: ಕಾಂಗ್ರೆಸ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದಿರಾ? ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರಿಗೆ ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದ್ಯಾಕೆ?

273

ನ್ಯೂಸ್ ನಾಟೌಟ್ : ಇಂದು ಮತದಾನ ನಡೆಯುತ್ತಿದ್ದು,ಮತದಾರ ಪ್ರಭುಗಳು ಮತಗಟ್ಟೆಗಳತ್ತ ತೆರಳುತ್ತಿದ್ದಾರೆ.ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು,ಯಾರು ಅಧಿಕಾರದ ಗದ್ದುಗೆಯನ್ನು ಪಡೆಯಲಿದ್ದಾರೆ ಎನ್ನುವ ಪ್ರಶ್ನೆ ಕಾಡಿದೆ. ಪ್ರತಿದಿನವೂ ರೋಚಕ ಸುದ್ದಿಗಳು ಪುತ್ತೂರು ಕ್ಷೇತ್ರದಿಂದ ವರದಿಯಾಗುತ್ತಿದ್ದವು.

ಇದೀಗ ಪುತ್ತೂರು 209 ಕ್ಷೇತ್ರ ವ್ಯಾಪ್ತಿಯ ಮೇಗಿನಪೇಟೆ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ಮುಂದೆ ಕಾಂಗ್ರೆಸ್ ಜತೆಗೆ ಒಪ್ಪಂದಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಮಾಡಿದ್ದು ಮಾತಿನ ಚಕಮಕಿಗೆ ಕಾರಣವಾಗಿದೆ ಎನ್ನಲಾಗಿದೆ. ವಿಟ್ಲ ಮೇಗಿನಪೇಟೆ ಮತಗಟ್ಟೆಗೆ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದ ಸಂದರ್ಭದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದರು.

ಈ ಸಂದರ್ಭ ಬೂತ್ ನ ಹೊರಗಡೆ ಕುಳಿತ್ತಿದ್ದ ಬಿಜೆಪಿ ಕಾರ್ಯಕರ್ತರು ನೀವಿಬ್ಬರೂ ಒಂದೆಯೇ ಒಟ್ಟೋಟ್ಟಾಗಿ ಬರುತ್ತಿದ್ದೀರಿ? ನಿಮ್ಮೊಳಗಡೆ ಹೊಂದಾಣಿಕೆಯೇ ಎಂದು ಅರುಣ್ ಪುತ್ತಿಲ ಬೆಂಬಲಿಗರಿಗೆ ಪ್ರಶ್ನಿಸಿದರು. ಈ ಸಂದರ್ಭ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆಯಿತು.ಯಾರೂ ಏನು ಎಂಬುದು ಮೇ೧೩ರಂದು ಗೊತ್ತಾಲಿದೆ. ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದನ್ನು ಮಹಾಲಿಂಗೇಶ್ವರನ ಮುಂದೆ ಬಂದು ಹೇಳಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಪುತ್ತಿಲ ಬೆಂಬಲಿಗರನ್ನು ಬೆಜೆಪಿ ಬೆಂಬಲಿಗರು ನೂಕಾಟ ತಳ್ಳಾಟ ಮಾಡಿದ ಘಟನೆ ನಡೆದಿದೆ ಎಂದು ವರದಿಯಾಗಿದೆ.

See also  ತುಳುನಾಡಿನ ಜಾರಂದಾಯ ನೇಮೋತ್ಸವದಲ್ಲಿ ದೈವದ ಅಭಯ ಪಡೆದ ತಮಿಳು ನಟ ವಿಶಾಲ್, 3 ಗಂಟೆಗಳ ಕಾಲ ನೇಮೋತ್ಸವ ವೀಕ್ಷಿಸಿದ ನಟ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget