Latestಕ್ರೈಂದೇಶ-ವಿದೇಶ

ಪಾಕಿಸ್ತಾನ ಸೇನೆಯಿಂದ ಅಪ್ರಚೋದಿತ ಗುಂಡಿನ ದಾಳಿಗೆ 13 ಭಾರತೀಯ ನಾಗರಿಕರು ಸಾವು..! ನೂರಾರು ಗಡಿ ನಿವಾಸಿಗಳು ಭೂಗತ ಬಂಕರ್‌ ಗಳಲ್ಲಿ ವಾಸ..!

1k

ನ್ಯೂಸ್ ನಾಟೌಟ್: ಗಡಿ ನಿಯಂತ್ರಣ ರೇಖೆ ಮತ್ತು ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಗಳಲ್ಲಿ ಫಿರಂಗಿ ದಾಳಿ ಹಾಗೂ ಗುಂಡಿನ ಚಕಮಕಿಯ ನಡುವೆ ನಾಲ್ವರು ಮಕ್ಕಳು ಮತ್ತು ಒಬ್ಬರು ಯೋಧರು ಸೇರಿದಂತೆ ಕನಿಷ್ಠ 15 ಜನರು ಮೃತಪಟ್ಟು 43 ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನ ಪಡೆಗಳು ಕದನ ವಿರಾಮ ಉಲ್ಲಂಘಿಸುತ್ತಿರುವ ಬಗ್ಗೆ ಭಾರತೀಯ ಸೇನೆಯು ಸಮಾನ ಪ್ರಮಾಣದಲ್ಲಿ ಶೆಲ್ ದಾಳಿ ಮಾಡಿ ಪ್ರತಿಕ್ರಿಯಿಸುತ್ತಿದೆ.

ಪಾಕಿಸ್ತಾನದ ಅನಿಯಂತ್ರಿತ ಶೆಲ್ ದಾಳಿಯು ಗುರುದ್ವಾರ ಸೇರಿದಂತೆ ಮನೆಗಳು, ವಾಹನಗಳು ಮತ್ತು ವಿವಿಧ ಕಟ್ಟಡಗಳನ್ನು ನಾಶಪಡಿಸಿದೆ. ಗಡಿ ನಿವಾಸಿಗಳಲ್ಲಿ ಭೀತಿ ಹೆಚ್ಚಾಗಿದ್ದು, ನೂರಾರು ನಿವಾಸಿಗಳು ಭೂಗತ ಬಂಕರ್‌ ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ, ಅಥವಾ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ಜಮ್ಮು ಪ್ರದೇಶದ ರಾಜೌರಿ ಮತ್ತು ಉತ್ತರ ಕಾಶ್ಮೀರದ ಬಾರಾಮುಲ್ಲಾ ಮತ್ತು ಕುಪ್ವಾರಾ ಸೇರಿದಂತೆ ತೀವ್ರ ಹಾನಿಗೊಳಗಾದ ಜಿಲ್ಲೆ ಪೂಂಚ್ ಗಳಲ್ಲಿ 13 ಮಂದಿ ಮೃತಪಟ್ಟು 42 ಮಂದಿ ಗಾಯಗೊಂಡಿದ್ದಾರೆ. ಶೆಲ್ ದಾಳಿಯ ಸಮಯದಲ್ಲಿ ಭಾರತೀಯ ಸೇನಾ ಸೈನಿಕನೊಬ್ಬರು ಹುತಾತ್ಮರಾಗಿದ್ದಾರೆ. ಯೋಧರನ್ನು 5 ಫೀಲ್ಡ್ ರೆಜಿಮೆಂಟ್‌ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಬಾಲಕೋಟ್, ಮೆಂಧರ್, ಮಂಕೋಟ್, ಕೃಷ್ಣ ಘಾಟಿ, ಗುಲ್ಪುರ್, ಕೆರ್ನಿ ಮತ್ತು ಪೂಂಚ್ ಜಿಲ್ಲಾ ಕೇಂದ್ರಗಳು ಸೇರಿದಂತೆ ಪೂಂಚ್‌ನ ಎಲ್‌ಒಸಿ ಉದ್ದಕ್ಕೂ ಶೆಲ್ ದಾಳಿ ವರದಿಯಾಗಿದ್ದು, ಇದರ ಪರಿಣಾಮವಾಗಿ ಡಜನ್ ಗಟ್ಟಲೆ ಮನೆಗಳು ಮತ್ತು ವಾಹನಗಳು ಹಾನಿಗೊಳಗಾದವು.  

ಈ ಬಾರಿ ಆರ್‌ ಸಿಬಿ ಟ್ರೋಫಿ ಗೆಲ್ಲದಿದ್ರೆ ಪತ್ನಿಗೆ ಡಿವೋರ್ಸ್‌ ಕೊಡುವುದಾಗಿ ಪತ್ನಿ ಮುಂದೆಯೇ ಅಭಿಮಾನಿಯಿಂದ ಚಾಲೆಂಜ್..! ಇಲ್ಲಿದೆ ವಿಡಿಯೋ

 

See also  ಮಡಿಕೇರಿ:ಸ್ನಾನಕ್ಕೆಂದು ಹೋದವ ನೀರಲ್ಲಿ ಮುಳುಗಿ ಸಾವು,ಹೊಟ್ಟೆ ಪಾಡಿಗೆ ಬಂದಾತ ಹೆಣವಾದ!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget