ದೇಶ-ಪ್ರಪಂಚ

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಕೈಕೊಟ್ಟು, ಪಾಕ್ ನಟಿ ಜತೆ ವಿವಾಹ..!ಮೂರನೇ ಮದುವೆಯಾದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್‌ನನ್ನು ಎರಡನೇ ಮದುವೆಯಾದ ನಟಿ ಯಾರು?

ನ್ಯೂಸ್‌ ನಾಟೌಟ್‌ : ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ‘ತಲಾಖ್’ ನೀಡಿರುವ ಪಾಕಿಸ್ತಾನಿ ಕ್ರಿಕೆಟಿಗ ಶೊಯೆಬ್ ಮಲ್ಲಿಕ್ ಇದೀಗ ನಟಿ ಸನಾ ಜಾವೆದ್ ರನ್ನು ವಿವಾಹವಾಗಿದ್ದಾರೆ ಅನ್ನೋ ಫೋಟೋಗಳು ಭಾರಿ ವೈರಲಾಗುತ್ತಿವೆ.ಹೌದು.. ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಮೂರನೇ ಮದುವೆಯಾಗಿದ್ದು, ನಟಿ ಸನಾ ಜಾವೇದ್ ಅವರನ್ನು ಶನಿವಾರದಂದು ಆತ್ಮೀಯ ಸಮಾರಂಭದಲ್ಲಿ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಘೋಷಿಸಿದ್ದಾರೆ.

41 ವರ್ಷದ ಕ್ರಿಕೆಟಿಗ ಮಲ್ಲಿಕ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಪ್ರಕಟಣೆಯ ನಂತರ, ಸನಾ ಜಾವೇದ್ ತನ್ನ Instagram ಬಯೋವನ್ನು “ಸನಾ ಶೋಯೆಬ್ ಮಲಿಕ್” ಎಂದು ಬದಲಾಯಿಸಿಕೊಳ್ಳುವ ಮೂಲಕ ಮದುವೆ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.  

ಇನ್ನು ಸನಾಗೆ ಇದು ಎರಡನೇ ಮದುವೆ ಎನ್ನಲಾಗಿದೆ.41 ವರ್ಷದ ಶೋಯೆಬ್ ಮಲಿಕ್ ಅವರನ್ನು ವಿವಾಹ ಆಗಿರುವ ಸನಾ ಜಾವೇದ್ ಅವರಿಗೆ ಕೂಡ ಇದು ಎರಡನೇ ಮದುವೆ.ಸನಾ ಈ ಹಿಂದೆ ಪಾಕಿಸ್ತಾನಿ ಗಾಯಕ ಉಮರ್ ಜಸ್ವಾಲ್ ಅವರನ್ನು ವಿವಾಹ ಆಗಿದ್ದು, ಸದ್ಯ ಸನಾ ಮತ್ತು ಉಮರ್ ತಮ್ಮ ಹಳೆಯ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಿಂದ ಡಿಲೀಟ್ ಮಾಡಿದ್ದಾರೆ. ಸನಾ ಅವರ ಮೊದಲ ಮದುವೆ 2020 ರಲ್ಲಿ ನಡೆದಿದ್ದರೆ, ಈಗ ಅವರ ಎರಡನೇ ಮದುವೆ 2024 ರಲ್ಲಿ ಆಗಿದೆ.

https://www.instagram.com/p/C2T6_lbI3RJ/?utm_source=ig_embed&ig_rid=9f04ba65-6d3c-4a09-89c8-33d7a0c90f11&img_index=1

https://www.instagram.com/p/C2T6_lbI3RJ/?utm_source=ig_embed&ig_rid=9f04ba65-6d3c-4a09-89c8-33d7a0c90f11&img_index=1

Related posts

ವರದಕ್ಷಿಣೆ ಬೇಡಿಕೆ ಇಟ್ಟ ವರನಿಗೆ ಕಾದಿತ್ತು ಬಿಗ್ ಶಾಕ್!ರೊಚ್ಚಿಗೆದ್ದು ವಧು ಕಡೆಯವರು ಮಾಡಿದ್ದೇನು ಗೊತ್ತಾ?

ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್‌ ಬೆದರಿಕೆ..! ಮಕ್ಕಳನ್ನು ಸ್ಥಳಾಂತರಗೊಳಿಸಿದ ಪೊಲೀಸರು

52 ಸಾವಿರ ರೂ. ಡೆಪಾಸಿಟ್ ಮಾಡುವಾಗ ಮಹಾಎಡವಟ್ಟು, ಬಟನ್ ಒತ್ತದೇ ವಾಪಸ್ ಬಂದ ಗ್ರಾಹಕನಿಗೆ ಗ್ರಹಚಾರ ಕಾದಿತ್ತು..!