Latest

ಮಸೀದಿಯಲ್ಲಿ ಪ್ರಾರ್ಥನೆ ವೇಳೆಯಲ್ಲೇ ಬಾಂಬ್ ಸ್ಫೋಟ! 5 ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ!

903

ನ್ಯೂಸ್‌ ನಾಟೌಟ್: ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ವೇಳೆಯಲ್ಲಿಯೇ ಒಳಗಡೆ ಬಾಂಬ್ ಸ್ಫೋಟಗೊಂಡು ಐವರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದಿದೆ.ನೌಶೇರಾ ಜಿಲ್ಲೆಯ ಅಕೋರಾ ಖಟ್ಟಕ್ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ್ದು,ಭಯದ ವಾತಾವರಣವನ್ನು ಸೃಷ್ಟಿಸಿದೆ.

ಗಾಯಗೊಂಡವರಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ-ಸಾಮಿ (ಜೆಯುಐ-ಎಸ್) ನಾಯಕ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಕೂಡ ಸೇರಿದ್ದಾರೆ. ಸ್ಫೋಟ ಸಂಭವಿಸಿದಾಗ ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಾ ಮುಂದಿನ ಸಾಲಿನಲ್ಲಿದ್ದರು. 

ಅಫ್ಘಾನ್ ತಾಲಿಬಾನ್‌ನೊಂದಿಗೆ ಮೌಲಾನಾ ಹಮಿದುಲ್ ಹಕ್ ಹಕ್ಕಾನಿ ಸಂಪರ್ಕ ಹೊಂದಿದ್ದಾರೆ. ಇಲ್ಲಿಯವರೆಗೆ ದಾಳಿಯ ಹೊಣೆಯನ್ನು ಯಾವುದೇ ಗುಂಪು ತಕ್ಷಣ ವಹಿಸಿಕೊಂಡಿಲ್ಲ. ಭಾನುವಾರದಿಂದ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭವಾಗುವ ಮೊದಲೇ ಬಾಂಬ್ ದಾಳಿ ನಡೆದಿದೆ.

 

 

See also  ಚಿಕ್ಕಮಗಳೂರು: ತಂದೆಯಿಂದ 7 ವರ್ಷದ ಮಗಳ ಮೇಲೆ ಅತ್ಯಾಚಾರ..! ಬಾಲಕಿ ಆಪ್ತ ಸಮಾಲೋಚನೆಯ ವೇಳೆ ಹೇಳಿದ್ದೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget