ದೇಶ-ಪ್ರಪಂಚ

ಪಾಕಿಸ್ತಾನದ ಕ್ರಿಕೆಟ್‌ ಸ್ಟೇಡಿಯಂ ಈಗ ಕುಂಬಳಕಾಯಿ, ಮೆಣಸು ಬೆಳೆಯುವ ತೋಟ..!

ಕರಾಚಿ: ಪಾಕಿಸ್ತಾನದ ಕ್ರಿಕೆಟ್‌ ಗುಣಮಟ್ಟದಿಂದ ಕೂಡಿಲ್ಲ ಅನ್ನುವ ಟೀಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟಗಾರರು ವಿಫಲವಾಗುತ್ತಿರುವುದಕ್ಕೆ ತಳ ಮಟ್ಟದಲ್ಲಿ ಕ್ರಿಕೆಟ್‌ ಮೂಲಭೂತ ವ್ಯವಸ್ಥೆ ಸರಿ ಇಲ್ಲದಿರುವುದೇ ಕಾರಣ ಎಂದು ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಕ್ರಿಕೆಟ್‌ಗೆಂದು ಕೋಟ್ಯಂತರ ರೂ. ಖರ್ಚು ನಿರ್ಮಿಸಲಾಗಿದ್ದ ಸ್ಟೇಡಿಯಂನಲ್ಲಿ ತರಕಾರಿ ಬೆಳೆಯಲಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಖಾನೇವಾಲ್ ಸ್ಟೇಡಿಯಂ ದೇಶಿಯ ಪಂದ್ಯಗಳನ್ನಾಡುವುದಕ್ಕಾಗಿಯೇ ಕೋಟ್ಯಂತರ ರೂ. ಖರ್ಚು ಮಾಡಿ ರೂಪಿಸಲಾಗಿದೆ. ಅತ್ಯಾಧುನಿಕ ಮೂಲಭೂತ ಸೌಕರ್ಯವನ್ನು ಅಲ್ಲಿ ಒದಗಿಸಿಕೊಡಲಾಗಿತ್ತು. ಪ್ರಾಕ್ಟೀಸ್ ಏರಿಯಾ ಮತ್ತು ಪೆವಿಲಿಯನ್ ಸೇರಿದಂತೆ ಎಲ್ಲವೂ ಕ್ರಿಕೆಟಿಗರಿಗಾಗಿ ಅಚ್ಚುಕಟ್ಟಾಗಿ ನಿರ್ಮಿಸಲಾಗಿತ್ತು. ಆದರೆ ಈಗ ಅಲ್ಲಿ ಕ್ರಿಕೆಟಿಗರೇ ಇಲ್ಲ. ಯಾರು ಹೇಳುವವರು ಕೇಳುವವರೇ ಇಲ್ಲವಾಗಿದೆ. ಹೀಗಾಗಿ ಖಾಲಿ ಇರುವ ಜಾಗದಲ್ಲಿ ಹತ್ತಿರದ ರೈತರು ಬಂದು ಕುಂಬಳಕಾಯಿ, ಮೆಣಸು ಸೇರಿದಂತೆ ಫಲವತ್ತಾದ ತರಕಾರಿ ಬೆಳೆದಿದ್ದಾರೆ. ಕ್ರಿಕೆಟ್‌ ಕ್ರೀಡಾಂಗಣವಿದು ಗುರುತು ಸಿಗದಷ್ಟು ಬದಲಾಗಿ ಹೋಗಿದೆ. ಅಲ್ಲಿನ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Related posts

6 ಜನರನ್ನು ಮದುವೆಯಾಗಿ ಹಣ, ಚಿನ್ನ ಕದ್ದಿದ್ದ ಆಕೆ 7ನೇ ಮದುವೆಗೆ ತಯಾರಿಯಲ್ಲಿದ್ದಾಗ ಬಂಧನ..! ಪೋಷಕರಂತೆ ನಟಿಸಿದಾಕೆಯೂ ಅರೆಸ್ಟ್..!

‘ನನ್ನ ಬ್ಯಾಗ್​ನಲ್ಲಿ ಬಾಂಬ್​ ಇದೆ’ ಎಂದ ಪ್ರಯಾಣಿಕ..! ತುರ್ತು ಭೂಸ್ಪರ್ಶ ಮಾಡಿದ ವಿಮಾನ! ಆತ ಸುಳ್ಳು ಹೇಳಲು ಕಾರಣವೇನು? ತನಿಖೆಯಿಂದ ಬಯಲಾಯ್ತು ರಹಸ್ಯ!

ಹಾರಾಡುತ್ತಿದ್ದ ವಿಮಾನದೊಳಗೆ ಮಹಿಳೆಯ ಮೇಲೆ ಟೈಟ್ ಮ್ಯಾನ್‌ ಮೂತ್ರ ವಿಸರ್ಜನೆ..! ಏರ್ ಇಂಡಿಯಾ ವಿಮಾನದಲ್ಲಿ ಏನಿದು ಅಸಹ್ಯ..?