ದೇಶ-ಪ್ರಪಂಚ

ಅಮ್ಮನ ನೆನಪಾಗಿ ಕಣ್ಣೀರಿಟ್ಟ ಸೆರೆಸಿಕ್ಕ ಪಾಕಿಸ್ತಾನಿ ಉಗ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಭಾರತೀಯ ಸೇನಾ ಪಡೆಯು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸೆರೆ ಸಿಕ್ಕ ಹದಿವಯಸ್ಸಿನ ಭಯೋತ್ಪಾದಕನು ಈಗ ಅಮ್ಮನ ನೆನಪಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ಬಾಬರ್ ಎಂಬ ಉಗ್ರ ತನ್ನ ತಾಯಿಯ ಬಳಿಗೆ ವಾಪಸ್ ಕರೆದೊಯ್ಯುವಂತೆ ಭಾರತಕ್ಕೆ ತನ್ನನ್ನು ಕಳಿಸಿದವರಿಗೆ ಮನವಿ ಮಾಡಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿದೆ.

ಸೆರೆಸಿಕ್ಕವ ಹೇಳಿದ್ದೇನು?

ಕಾಶ್ಮೀರ ಪರಿಸ್ಥಿತಿ ಬಗ್ಗೆ ಪಾಕಿಸ್ತಾನದ ಸೇನೆ, ಎಲ್‌ಇಟಿ ಹಾಗೂ ಐಎಸ್ಐ ಸುಳ್ಳು ಮಾಹಿತಿಯನ್ನು ಹರಡುತ್ತಿರುವುದಾಗಿ ಬಾಬರ್ ಹೇಳಿರುವುದು ಈ ವಿಡಿಯೊದಲ್ಲಿದೆ. ಹಣಕಾಸಿನ ಸಮಸ್ಯೆಯಿಂದಾಗಿ ಶಾಲೆಯನ್ನು ತೊರೆದು ಭಯೋತ್ಪಾದಕರ ಸಹವಾಸಕ್ಕೆ ಬಂದಿದ್ದಾಗಿ ಹೇಳಿದ್ದಾನೆ. ನನ್ನನ್ನು ಭಾರತಕ್ಕೆ ಕಳುಹಿಸಿದ್ದರೋ ಅದೇ ರೀತಿ ವಾಪಸ್ ನನ್ನ ತಾಯಿಯ ಬಳಿಗೆ ಕರೆದೊಯ್ಯಬೇಕು ಎಂದು ಲಷ್ಕರ್ ಎ ತಯಬಾ ಏರಿಯಾ ಕಮಾಂಡರ್, ಐಎಸ್ಐ ಹಾಗೂ ಪಾಕಿಸ್ತಾನದ ಸೇನೆಗೆ ಮನವಿ ಮಾಡುತ್ತಿದ್ದೇನೆ ಎಂದು ಭಯೋತ್ಪಾದಕ ಅಲಿ ಬಾಬರ್ ಪಾಕಿಸ್ತಾನಕ್ಕೆ ಮನವಿ ಮಾಡಿರುವ ವಿಡಿಯೊ ಸಂದೇಶವನ್ನು ಬುಧವಾರ ಭಾರತೀಯ ಸೇನೆ ಬಿಡುಗಡೆ ಮಾಡಿದೆ.

Related posts

ಚುನಾವಣೆ ಗೆಲ್ಲಲು ಫಕೀರ್​​ನಿಂದ ಚಪ್ಪಲಿ ಆಶೀರ್ವಾದ ಪಡೆದ ಕಾಂಗ್ರೆಸ್​​ ಅಭ್ಯರ್ಥಿ..!ಏನಿದು ಚಪ್ಪಲಿ ಆಶೀರ್ವಾದ?ಯಾರಿದು ಫಕೀರ್?

ನಟಿ ತಮನ್ನಾ ಸ್ಟೆಪ್ಸ್ ಹಾಕಿದ ‘ಕಾವಾಲಯ್ಯ’ ಹಾಡಿಗೆ ಭರ್ಜರಿ ಡಾನ್ಸ್ ಮಾಡಿದ ಪೊಲೀಸ್ ಅಧಿಕಾರಿ..! ,’ವಾವ್ ಸರ್ ನಿಮ್ಮ ಡ್ಯಾನ್ಸ್ ಅದ್ಭುತ’ವೆಂದ ನೆಟ್ಟಿಗರು..!

ವಸತಿ ಕಟ್ಟಡದಲ್ಲಿ ಅಗ್ನಿ ದುರಂತ,ಮಲಯಾಳಿ ದಂಪತಿ ಸಹಿತ ೧೬ ಮಂದಿ ದಾರುಣ ಸಾವು,ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಸಿಬ್ಬಂದಿ ಕೂಡ ದುರಂತಕ್ಕೆ ಬಲಿ