Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪಾಕ್ ನೆಲದಲ್ಲೇ ಜೈಶ್ ಉಗ್ರ ಮೌಲಾನಾ ಅಬ್ದುಲ್ ಅಜೀಜ್ ನಿಗೂಢ ಸಾವು..! ಭಾರತದಿಂದ ಕಾಶ್ಮೀರವನ್ನು ಕಸಿದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದ ಕೆಲವೇ ದಿನಗಳಲ್ಲಿ ಮೃತ್ಯು..!

744

ನ್ಯೂಸ್ ನಾಟೌಟ್: ಪಾಕಿಸ್ತಾನದಲ್ಲಿ ಭಾರತದ ಮತ್ತೊಬ್ಬ ಶತ್ರುವಿನ ಆಟ ಮುಗಿದಿದೆ. ಜೈಶ್-ಎ-ಮೊಹಮ್ಮದ್‌ನ ಹಿರಿಯ ಕಮಾಂಡರ್ ಮೌಲಾನಾ ಅಬ್ದುಲ್ ಅಜೀಜ್ (Maulana Abdul Aziz)ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈ ನಿಗೂಢ ಸಾವು ಗುಪ್ತಚರ ವಲಯಗಳಿಂದ ಭಯೋತ್ಪಾದಕ ಜಾಲದವರೆಗೆ ಸಂಚಲನ ಮೂಡಿಸಿದೆ.

ಕಳೆದ ತಿಂಗಳು ಜೈಶ್ ರ್ಯಾಲಿಯಲ್ಲಿ ಭಾರತದ ವಿರುದ್ಧ ವಿಷ ಕಾರಿದ್ದ, ಭಾರತವೂ ಯುಎಸ್ ಎಸ್ ಆರ್ ನಂತೆಯೇ ಸ್ಥಿತಿಯನ್ನು ಅನುಭವಿಸುತ್ತದೆ ಎಂದು ವೇದಿಕೆಯಿಂದಲೇ ಬಹಿರಂಗವಾಗಿ ಬೆದರಿಕೆ ಹಾಕಿದ್ದ. ಕಳೆದ ತಿಂಗಳು ನಡೆದ ರ್ಯಾಲಿಯಲ್ಲಿ, ಭಾರತದಿಂದ ಕಾಶ್ಮೀರವನ್ನು ಕಸಿದುಕೊಳ್ಳುವುದಾಗಿ ಕೂಡ ಬೆದರಿಕೆ ಹಾಕಿದ್ದ. ಜೈಶ್ ಮತ್ತು ಪಾಕಿಸ್ತಾನ ಸರ್ಕಾರ ಈ ಸಾವಿನ ಬಗ್ಗೆ ಮೌನ ವಹಿಸಿವೆ. ಜೈಶ್ ಜೊತೆ ಸಂಬಂಧ ಹೊಂದಿರುವ ಸಾಮಾಜಿಕ ಮಾಧ್ಯಮ ಖಾತೆಗಳು ಅವನ ಸಾವು ಮತ್ತು ಅಂತ್ಯಕ್ರಿಯೆಯನ್ನು ದೃಢಪಡಿಸಿವೆ.

ಅಬ್ದುಲ್ ಅಜೀಜ್ ಜೈಶ್-ಎ-ಮೊಹಮ್ಮದ್‌ನ ಪಂಜಾಬ್ ಪ್ರಾಂತ್ಯದಲ್ಲಿ ಮತ್ತು ವಿಶೇಷವಾಗಿ ಬಹಾವಲ್ಪುರ್, ರಾವಲ್ಪಿಂಡಿಯಂತಹ ಪ್ರದೇಶಗಳಲ್ಲಿ ಭಾರತದ ವಿರುದ್ಧ ಯುವಕರನ್ನು ಮೂಲಭೂತವಾದಕ್ಕೆ ಪ್ರಚೋದಿಸುತ್ತಿದ್ದ ಆರೋಪ ಇವನ ಮೇಲಿತ್ತು.

ಆತನ ಸಾವು ಜೈಶ್‌ ಗೆ, ವಿಶೇಷವಾಗಿ ಸ್ಥಳೀಯ ನೇಮಕಾತಿ ಮತ್ತು ಬ್ರೈನ್‌ವಾಶ್ ಜಾಲಕ್ಕೆ ದೊಡ್ಡ ಹೊಡೆತವಾಗಿದೆ. ಜೈಶ್‌ ಗೆ ಸಂಬಂಧಿಸಿದ ಖಾತೆಗಳು ಆತನನ್ನು ಬಹಾವಲ್‌ ಪುರದಲ್ಲಿ ಸಮಾಧಿ ಮಾಡಲಾಗಿದೆ ಎಂದು ಹೇಳಿವೆ.ಆಗಾಗ ಭಾರತದ ವಿರುದ್ಧ ವಿಷ ಕಾರುತ್ತಿದ್ದ. ಕೆಲವು ಸಮಯದಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಕೊಲ್ಲುವ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗೆ, ಭಾರತದ ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 15 ಭಯೋತ್ಪಾದಕರನ್ನು ಪಾಕಿಸ್ತಾನದಲ್ಲಿ ಕೊಲ್ಲಲಾಗಿದೆ.

ಅರುಣ್ ಕುಮಾರ್ ಪುತ್ತಿಲಗೆ ಎರಡನೇ ಬಾರಿಗೆ ನೋಟಿಸ್​..! ದಕ್ಷಿಣ ಕನ್ನಡ ಪೊಲೀಸರ ವಿರುದ್ಧವೇ ದೂರು ನೀಡಿದ ಕೇಂದ್ರ ಸಚಿವೆ..!

See also  ಆ್ಯಪಲ್, ಫೇಸ್‌ಬುಕ್, ಗೂಗಲ್ ನ 16 ಶತಕೋಟಿ ಪಾಸ್‌ ವರ್ಡ್ ಗಳ ಸೋರಿಕೆ..! ಸಂದೇಶಗಳಲ್ಲಿ ಬಂದ ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಫೇಸ್ ಬುಕ್ ವಾರ್ನಿಂಗ್..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget