ನ್ಯೂಸ್ ನಾಟೌಟ್: ಪಾಕಿಸ್ತಾನಿ ಮಹಿಳೆ ಮಿನಾಲ್ ಖಾನ್ ಎಂಬವರನ್ನು ಆನ್ ಲೈನ್ ನಲ್ಲಿ ಮದುವೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜವಾನ್ ಮುನೀರ್ ಅಹ್ಮದ್ ಎಂಬವರನ್ನು ಸೇನಾ ಸೇವೆಯಿಂದ ವಜಾಗೊಳಿಸಲಾಗಿದೆ.
ಮದುವೆಯ ಮಾಹಿತಿಯನ್ನು ಮುನೀರ್ ಮರೆಮಾಚಿದ್ದ ಮತ್ತು ಮಹಿಳೆಯ ವೀಸಾ ಅವಧಿ ಮುಗಿದ ನಂತರವೂ ಅವಳನ್ನು ತನ್ನ ಮನೆಯಲ್ಲಿ ಅಡಗಿಸಿಟ್ಟಿದ್ದ ಎಂದು ಹೇಳಲಾಗಿದೆ. ಸಿಆರ್ ಪಿಎ ಫ್ ಇದನ್ನು ಗಂಭೀರ ದುಷ್ಕೃತ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಿದೆ.
ಜಮ್ಮುವಿನ ಘರೋಟಾ ನಿವಾಸಿ ಮುನೀರ್ ಏಪ್ರಿಲ್ 2017 ರಲ್ಲಿ CRPF ಸೇರಿದ್ದಾರೆ. 2023 ರ ಮೇ 24 ರಂದು ಪಾಕಿಸ್ತಾನದ ಮಿನಾಲ್ ಖಾನ್ ಎಂಬವರನ್ನು ಆನ್ ಲೈನ್ ನಲ್ಲೇ ವಿವಾಹವಾಗಿದ್ದಾರೆ. ಈ ಮದುವೆ CRPF ಪ್ರಧಾನ ಕಚೇರಿಯಿಂದ ಅನುಮತಿ ಪಡೆದ ನಂತರವೇ ನಡೆಯಿತು ಎಂದು ಹೇಳಲಾಗಿದೆ.
ಡಿಸೆಂಬರ್ 31, 2022 ರಂದು ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಲು ಅನುಮತಿ ಕೋರಿದ್ದರು ಮತ್ತು ಪಾಸ್ ಪೋರ್ಟ್, ವಿವಾಹ ಪ್ರಮಾಣಪತ್ರ ಮತ್ತು ಅಫಿಡವಿಟ್ ನಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಅಂತಿಮವಾಗಿ, ಏಪ್ರಿಲ್ 30, 2023 ರಂದು, ಅವರು ಪ್ರಧಾನ ಕಚೇರಿಯಿಂದ ಅನುಮತಿ ಪಡೆದಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ವಜಾಗೊಳಿಸುವಿಕೆ ಕುರಿತು ಮಾತನಾಡಿರುವ ಮುನೀರ್, ಈ ಕ್ರಮದ ಬಗ್ಗೆ ನನಗೆ ಮೊದಲು ಮಾಧ್ಯಮಗಳಿಂದ ಮಾಹಿತಿ ಸಿಕ್ಕಿತು, ನಂತರ ಸಿಆರ್ ಪಿಎಫ್ ನಿಂದ ಪತ್ರ ಬಂದಿತ್ತು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ನಾನು ನಿಯಮಗಳನ್ನು ಪಾಲಿಸಿದ್ದೇನೆ ಮತ್ತು ಈಗ ನ್ಯಾಯಾಲಯದಿಂದ ನ್ಯಾಯವನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ. ಮಿನಲ್ ಖಾನ್ 2025 ರ ವರ್ಷ ಫೆಬ್ರವರಿ 28 ರಂದು ವಾಘಾ-ಅತ್ತಾರಿ ಗಡಿಯ ಮೂಲಕ ಭಾರತಕ್ಕೆ ಬಂದರು. ಮಾರ್ಚ್ 22 ರಂದು ಅವರ ವೀಸಾ ಅವಧಿ ಮುಗಿದಿತ್ತು, ಆದರೆ ಅವರು ಜಮ್ಮುವಿನಲ್ಲಿರುವ ಮುನೀರ್ ಅವರ ಮನೆಯಲ್ಲಿಯೇ ಉಳಿದುಕೊಂಡಿದ್ದರು.
ವೀಸಾ ಅವಧಿ ಮುಗಿದ ನಂತರ ಮೀನಾಲ್‌ಗೆ ಆಶ್ರಯ ನೀಡುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸಿಆರ್ ಪಿ ಎಫ್ ಆರೋಪಿಸಿದೆ. ಇದಲ್ಲದೆ, ಜವಾನನ ಕೃತ್ಯವು ಭದ್ರತಾ ವ್ಯವಸ್ಥೆಗೆ ಹಾನಿ ಮಾಡಲಿದೆ ಎಂದು ಆರೋಪಿಸಲಾಗಿದೆ.
ಪಾಕ್ ಗಡಿಯಲ್ಲಿ 2 ದಿನ ಕಾದು ಮತ್ತೆ ಮೈಸೂರಿಗೆ ಮರಳಿದ ಮಹಿಳೆ..! ಮಕ್ಕಳಿಗೆ ಪಾಕ್ ಪೌರತ್ವ, ತಾಯಿಗೆ ಭಾರತದ ಪೌರತ್ವ..!