ನ್ಯೂಸ್ ನಾಟೌಟ್: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಉಗ್ರ ಪೋಷಕ ಪಾಕಿಸ್ತಾನಕ್ಕೆ ಬೆಂಬಲಿಸಿದ ಟರ್ಕಿಗೆ ಭಾರತೀಯ ಚಿತ್ರರಂಗ ಶಾಕ್ ನೀಡಿದೆ. ಟರ್ಕಿ ಮತ್ತು ಅಜರ್ ಬೈಜಾನ್ ಕುತಂತ್ರದ ಬೆನ್ನಲ್ಲೇ ಸಿನಿಮಾ ರಂಗ ಮಹತ್ವದ ನಿರ್ಧಾರ ಕೈಗೊಂಡಿದೆ.
ಟರ್ಕಿ ಮತ್ತು ಅಜರ್ ಬೈಜಾನ್ ನಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ ಕಡೆಯಿಂದ ಭಾರತೀಯ ಚಿತ್ರರಂಗ ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಲಾಗಿದೆ.
ಈ ಎರಡು ದೇಶಗಳ ಜೊತೆ ನಂಟು ಇಟ್ಟುಕೊಳ್ಳದಂತೆ ನಿರ್ದೇಶಕ, ನಿರ್ಮಾಪಕರಿಗೆ ತಿಳಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿ ಜೊತೆ ನಂಟು ಇಟ್ಟುಕೊಂಡರೆ, ಇದರಿಂದ ಭಾರತದ ಭದ್ರತೆಗೆ ತೊಂದರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಚಿತ್ರರಂಗ ಕೂಡ ಸಾಥ್ ನೀಡಿದೆ.
ಈಗಾಗಲೇ ಪಾಕ್ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬ್ಯಾನ್ ಮಾಡಲಾಗಿದೆ.
ಮದುವೆ ಪಾರ್ಟಿಯಲ್ಲಿ ಯುವತಿ ಜೊತೆ ಶಾಸಕನ ಅಶ್ಲೀಲ ಕೃತ್ಯ ವೈರಲ್..! ವಿಡಿಯೋ ಬಗ್ಗೆ ಶಾಸಕ ಹೇಳಿದ್ದೇನು..?
ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಸುಟ್ಟು ಕರಕಲಾದ ಸ್ಲೀಪರ್ ಬಸ್..! ಗುರುತೂ ಸಿಗದಂತೆ 5 ಮಂದಿ ಸಜೀವ ದಹನ..!