ವೈರಲ್ ನ್ಯೂಸ್

ಅವಕಾಶ ಕೊಟ್ಟರೆ ಭಾರತಕ್ಕೆ ಹೋಗಿ ಸೆಟಲ್ ಆಗುತ್ತೇವೆ , ಪಾಕಿಸ್ತಾನದ ಯುವಕರು ಹೀಗೆ ಹೇಳಿದ್ಯಾಕೆ..?

ನ್ಯೂಸ್ ನಾಟೌಟ್: ಭಾರತ ಹಾಗೂ ಪಾಕಿಸ್ತಾನ ಬದ್ಧ ವೈರಿಗಳು. ಈ ದೇಶಗಳ ನಡುವೆ ಇದುವರೆಗೂ ಶಾಂತಿಯ ಮಂತ್ರ ಫಲಿಸಲೇ ಇಲ್ಲ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಲೇ ಬಂದಿದೆ. ಆದರೆ, ಇದನ್ನು ಅವರು ಎಂದಿಗೂ ಒಪ್ಪಿಕೊಂಡಿಲ್ಲ. ದ್ವೇಷ ಬೆಳೆಯಲು ಇದು ಪ್ರಮುಖ ಕಾರಣ. ಭಯೋತ್ಪಾದನೆ, ದ್ವೇಷವನ್ನು ಮಟ್ಟಹಾಕುವ ರೀತಿಯ ಹಲವು ಸಿನಿಮಾಗಳು ರಿಲೀಸ್ ಆಗಿವೆ. ‘ಗದರ್ 2’ ಸಿನಿಮಾ (Gadar 2 Movie) ಕೂಡ ಇದೇ ಮಾದರಿಯಲ್ಲಿ ಮೂಡಿ ಬಂದಿದೆ.

ಸನ್ನಿ ಡಿಯೋಲ್ (Sunny Deol) ನಟನೆಯ ಈ ಸಿನಿಮಾದ ಟ್ರೇಲರ್ ನೋಡಿದ ಪಾಕಿಸ್ತಾನಿ ಯುವಕನೊಬ್ಬ ಭಾರತಕ್ಕೆ ಬರೋದಾಗಿ ಹೇಳಿಕೊಂಡಿದ್ದಾನೆ. ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಚಿತ್ರದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದಿತ್ತು. ಸಿನಿಮಾ ಕೂಡ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

ಟ್ರೇಲರ್​ನಲ್ಲಿ ಸಿನಿಮಾದ ಥೀಮ್ ಏನು ಎಂಬುದನ್ನು ತೋರಿಸಲಾಗಿದೆ. ಪಾಕಿಸ್ತಾನದವರ ಬಳಿ ತಾರಾ ಸಿಂಗ್ (ಸನ್ನಿ ಡಿಯೋಲ್) ಮಗ ಸಿಕ್ಕಿ ಬೀಳುತ್ತಾನೆ. ಆತನ ರಕ್ಷಣೆಗೆ ತಾರಾ ಸಿಂಗ್ ಪಾಕಿಸ್ತಾನಕ್ಕೆ ಎಂಟ್ರಿ ಕೊಡುತ್ತಾನೆ. ‘ಅವಕಾಶ ಸಿಕ್ಕರೆ ಅರ್ಧ ಪಾಕಿಸ್ತಾನ ಭಾರತಕ್ಕೆ ಬರಲಿದೆ’ ಎಂದು ಪಾಕಿಸ್ತಾನದಲ್ಲಿ ನಿಂತು ತಾರಾ ಸಿಂಗ್ ಹೇಳುವ ಡೈಲಾಗ್ ಟ್ರೇಲರ್​ನಲ್ಲಿ ಹೈಲೈಟ್ ಆಗಿತ್ತು. ಈ ವಿಡಿಯೋ ಪಾಕಿಸ್ತಾನದಲ್ಲೂ ವೈರಲ್ ಆಗಿದೆ. ಈ ಬಗ್ಗೆ ಅಲ್ಲಿನ ಯೂಟ್ಯೂಬರ್ಸ್ ಯುವಕರ ಬಳಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಲ್ಲಿನ ಜನರು ಹೌದೆಂದು ಸಮ್ಮತಿಸಿದ್ದಾರೆ..?

ಈ ಬಗ್ಗೆ ಮಾತನಾಡಿರುವ ಪಾಕ್ ಯುವಕನೊಬ್ಬ, ‘ಅವಕಾಶ ಸಿಕ್ಕರೆ ನಾವು ಈಗಲೇ ಭಾರತಕ್ಕೆ ಹೋಗುತ್ತೇವೆ ಎನ್ನುವ ಡೈಲಾಗ್​ ಸಿನಿಮಾದಲ್ಲಿ ಬರುತ್ತದೆ. ಅದರಲ್ಲಿ ಸತ್ಯ ಇದೆ. ಪಾಕಿಸ್ತಾನದಲ್ಲಿ ಎಷ್ಟು ಸಿನಿಮಾಗಳು ತಯಾರಾಗುತ್ತವೆ ಮತ್ತು ಬಿಡುಗಡೆಯಾಗುತ್ತವೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಶಾರುಖ್ ಖಾನ್ ಅವರ ಎಷ್ಟು ಸಿನಿಮಾಗಳಿವೆ ಮತ್ತು ಯಾವ ಸಿನಿಮಾ ಯಾವಾಗ ಬಿಡುಗಡೆ ಆಗಿದೆ ಮತ್ತು ಆಗುತ್ತದೆ ಎಂಬುದು ನನಗೆ ತಿಳಿದಿದೆ’ ಎಂದಿದ್ದಾನೆ ಪಾಕ್ ಯುವಕ.

‘ನೀವು ಏಕೆ ಭಾರತಕ್ಕೆ ಹೋಗಲು ಬಯಸುತ್ತೀರಿ’ ಎಂದು ಅವರಿಗೆ ಕೇಳಲಾಗಿದೆ. ಇದಕ್ಕೆ ಅವರು ತಂತ್ರಜ್ಞಾನ ಎಂದು ಹೇಳಿದ್ದಾರೆ. ‘ಇಲ್ಲಿ ಇಂಟರ್​ನೆಟ್ ಪ್ಯಾಕ್ ಒಂದು ವಾರಕ್ಕೆ 600 ರೂಪಾಯಿ. ಅಲ್ಲಿ ಜಿಯೋದವರು ಕಡಿಮೆ ದರಕ್ಕೆ ವಾರದ ಪ್ಯಾಕ್ ನೀಡುತ್ತಿದ್ದಾರೆ. ಇಂಟರ್​ನೆಟ್ ವೇಗವೂ ಹೆಚ್ಚಿದೆ. ಎಲೆಕ್ಟ್ರಿಕ್ ಕಾರು ಇದೆ. ಆ್ಯಪಲ್ ಕೂಡ ಬಂದಿದೆ’ ಎಂದು ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ ಆ ಯುವಕ.

ಮತ್ತೋರ್ವ ಪಾಕ್ ಯುವಕ ಮಾತನಾಡಿ, ‘ಪ್ರಪಂಚದಾದ್ಯಂತ ನೀವು ಎಲ್ಲಿಗೆ ಹೋದರೂ ದೊಡ್ಡ ಕಂಪನಿಯ ಸಿಇಒ ಭಾರತೀಯರೇ. ಬೇರೆ ದೇಶಗಳಲ್ಲಿ ಕೆಲಸಕ್ಕೆ ಹೋಗಿರುವ ನನ್ನ ಕೆಲವು ಸ್ನೇಹಿತರಿದ್ದಾರೆ. ನಮ್ಮ ಬಾಸ್ ಭಾರತೀಯ ಎಂದು ಅವರು ಹೇಳುತ್ತಾರೆ. ಹಿಂದೂಗಳು ಏನು ಮಾಡುತ್ತಿದ್ದಾರೆ ಮತ್ತು ಮುಸ್ಲಿಮರು ಏನು ಮಾಡುತ್ತಿದ್ದಾರೆಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ’ ಎಂದಿದ್ದಾರೆ.

Related posts

ಎಸ್‌.ಐ ಮೇಲೆ ಕಾರು ಹರಿಸಿ ಕೊಂದ ಮಹಿಳಾ ಪೇದೆ..! ಕೊಲೆ ಮಾಡಿ ಅಪಘಾತದ ಕಥೆ ಕಟ್ಟಿದ್ದ ಪ್ರೇಮಿಗಳು..!

ಸೀಮಂತ ಕಾರ್ಯಕ್ರಮಕ್ಕೆ ಚಿನ್ನದ ಆಭರಣ ಬದಲು ‘ಡ್ರೈ ಫ್ರೂಟ್’ ಆಭರಣ..!ಮಹಿಳೆಯ ಸರಳತೆಗೆ ಫಿದಾ ಆದ ನೆಟ್ಟಿಗರು..!ಡ್ರೈ ಫ್ರೂಟ್‌ ಆಭರಣಗಳಲ್ಲಿಯೂ ಎಷ್ಟು ಮುದ್ದಾಗಿ ಕಾಣ್ಸಿಸುತ್ತಿದ್ದಾರೆ ನೋಡಿ..

ಬೈಕ್‌ ಗೆ ಡಿಕ್ಕಿ ಹೊಡೆದು ಚಾಲಕನ ಸಮೇತ ಎಳೆದೊಯ್ದ ಕಾರು..! ಪೊಲೀಸ್ ಕಾನ್‌ಸ್ಟೆಬಲ್ ಸಾವು..!