ದೇಶ-ವಿದೇಶವೈರಲ್ ನ್ಯೂಸ್

‘ಫೇಸ್ ಬುಕ್’ ಪ್ರೇಮಿಯನ್ನು ನೋಡಲು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಯುವತಿ..! ಆತನ ಹೆಂಡತಿಯಿಂದ ಪೊಲೀಸರಿಗೆ ದೂರು..!

233

ನ್ಯೂಸ್‌ ನಾಟೌಟ್‌: 25 ವರ್ಷದ ಪಾಕಿಸ್ತಾನಿ ಮಹಿಳೆ ಮೆಹ್ವಿಶ್ ಎಂಬವಳು ಫೇಸ್​ಬುಕ್​ನಲ್ಲಿ ಪರಿಚಯವಾದ ತನ್ನ ಪ್ರಿಯಕರ ರೆಹಮಾನ್‌ನೊಂದಿಗೆ ಇರಲು ರಾಜಸ್ಥಾನದ ಬಿಕಾನೇರ್ ಜಿಲ್ಲೆ ಬಂದಿದ್ದಾಳೆ.

ಪಾಕಿಸ್ತಾನದ ಲಾಹೋರ್ ನಿವಾಸಿಯಾಗಿರುವ ಮೆಹ್ವಿಶ್ ಎರಡು ವರ್ಷದವಳಿದ್ದಾಗ ತನ್ನ ತಾಯಿಯನ್ನು ಕಳೆದುಕೊಂಡಳು, ಹಾಗೆಯೇ 10 ವರ್ಷದವಳಿದ್ದಾಗ ತನ್ನ ತಂದೆಯನ್ನೂ ಕಳೆದುಕೊಂಡಳು ಎಂದು ಹೇಳಿದ್ದಾಳೆ. ಆಕೆಯ ಸಹೋದರಿ ಸಹಿಮಾ ಜೊತೆ ವಾಸಿಸಲು ಇಸ್ಲಾಮಾಬಾದ್‌ಗೆ ತೆರಳಿದ ಮೆಹ್ವಿಶ್​ ನಂತರ ಬ್ಯೂಟಿ ಪಾರ್ಲರ್‌ನಲ್ಲಿ ತರಬೇತಿ ಪಡೆದು, ಕಳೆದ ಒಂದು ವರ್ಷದಿಂದ ತಮ್ಮದೇ ಆದ ಬ್ಯೂಟಿ ಪಾರ್ಲರ್ ಅನ್ನು ಸಹ ನಡೆಸುತ್ತಿದ್ದರಂತೆ. ಮೆಹ್ವಿಶ್ ಜುಲೈ 25 ರಂದು ತನ್ನ ಕುಟುಂಬದೊಂದಿಗೆ ಇಸ್ಲಾಮಾಬಾದ್‌ನಿಂದ ವಾಘಾ ಗಡಿಗೆ ಬಂದಿದ್ದಳು, ಈ ವೇಳೆ ಪಾಕಿಸ್ತಾನ ಮತ್ತು ಭಾರತೀಯ ಅಧಿಕಾರಿಗಳು ಆಕೆಯ ದಾಖಲೆಗಳನ್ನು ಪರಿಶೀಲಿಸಿ, 45 ದಿನಗಳ ಟೂರಿಸಂ ವೀಸಾದಲ್ಲಿ ಭಾರತಕ್ಕೆ ಹೋಗಲು ಅನುಮತಿ ನೀಡಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ಈ ಮೂಲಕ ಮೆಹ್ವಿಶ್ ತನ್ನ ಪ್ರಿಯಕರ ವಿವಾಹಿತ ರೆಹಮಾನ್​ನನ್ನು ಭೇಟಿಮಾಡಲು ಭಾರತಕ್ಕೆ ಬಂದ್ದಾಳೆ. ಆಕೆ ಭಾರತಕ್ಕೆ ಬರುತ್ತಿದ್ದಂತೆ, ರೆಹಮಾನ್‌ನ ಮನೆಯವರು ಆಕೆಯನ್ನು ಬಹಳ ಅದ್ಧೂರಿಯಾಗಿ ಸ್ವಾಗತಿಸಿ ಮನೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಆದರೆ ರೆಹಮಾನ್‌ ಈಗಾಗಲೇ ಅಂದರೆ 2011ರಲ್ಲಿ ಭದ್ರಾ ಮೂಲದ ಫರೀದಾ ಎಂಬಾಕೆಯನ್ನು ವಿವಾಹವಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ. ರೆಹಮಾನ್ ಮೊದಲ ಪತ್ನಿ ಫರೀದಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ಮೆಹ್ವಿಶ್ ಗೂಢಚಾರಿಯಾಗಿರಬಹುದು ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ರೆಹಮಾನ್ ಕಾನೂನುಬದ್ಧವಾಗಿ ತನಗೆ ವಿಚ್ಛೇದನ ನೀಡಿಲ್ಲ ಮತ್ತು ಅವನ ಎರಡನೇ ಮದುವೆ ಕೂಡ ಅನಧಿಕೃತವಾಗಿದೆ ಎಂದು ಅವಳು ದೂರಿನಲ್ಲಿ ತಿಳಿಸಿದ್ದಾಳೆ.

Click

https://newsnotout.com/2024/07/gas-cylinder-karkala-incident-kannada-news-police/
https://newsnotout.com/2024/07/jail-kannada-news-notice-siddarooda-jail-kannada-news/
https://newsnotout.com/2024/07/police-kannada-news-hospital-bengaluru-case/
https://newsnotout.com/2024/07/kannada-news-lovers-viral-issue-near-railway-nomore/
https://newsnotout.com/2024/07/drdo-metro-kannada-news-arrest-issue-darshan-fans-kannada-news/
See also  ಸೈಕಲ್‌ ನಲ್ಲಿ ಆಡುತ್ತಿದ್ದ ಬಾಲಕಿ ಮೇಲೆ ಹರಿದ ಕಾರು..! 4 ವರ್ಷದ ಬಾಲಕಿ ಸ್ಥಳದಲ್ಲೇ ಸಾವು..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget