Latestದೇಶ-ವಿದೇಶವೈರಲ್ ನ್ಯೂಸ್

ಪಾಕ್ ಗೆ ಮತ್ತೆರಡು ನದಿಗಳ ನೀರಿನ ಹರಿವನ್ನು ನಿಲ್ಲಿಸಿದ ಭಾರತ..! ಇಂದು(ಮೇ.4) ಮೋದಿಯನ್ನು ಭೇಟಿಯಾದ ವಾಯುಪಡೆ ಮುಖ್ಯಸ್ಥ..!

1.1k

ನ್ಯೂಸ್ ನಾಟೌಟ್ : ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಲ್ಬಣವಾಗಿರುವಂತೆಯೇ ಇತ್ತ ಪಾಕಿಸ್ತಾನಕ್ಕೆ ಈಗಾಗಲೇ ಸಿಂಧೂ ನದಿಯ ನೀರು ಸ್ಥಗಿತ ಮಾಡಿರುವ ಭಾರತ ಇದೀಗ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿದೆ. ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಬಾಗ್ಲಿಹಾರ್ ಅಣೆಕಟ್ಟು ಸೇರಿದಂತೆ 2 ಅಣೆಕಟ್ಟುಗಳ ನೀರನ್ನೂ ಕೂಡ ಭಾರತ ನಿಲ್ಲಿಸಿದೆ.

ಭಾರತವು ಚೆನಾಬ್ ನದಿಯ ಬಾಗ್ಲಿಹಾರ್ ಅಣೆಕಟ್ಟಿನ ಮೂಲಕ ನೀರಿನ ಹರಿವನ್ನು ಸ್ಥಗಿತಗೊಳಿಸಿದೆ. ಇದಲ್ಲದೆ ಝೀಲಂ ನದಿಯ ಕಿಶನ್‌ ಗಂಗಾ ಅಣೆಕಟ್ಟಿನಲ್ಲೂ ಇದೇ ರೀತಿ ತಡೆಯಲು ತಯಾರಿ ನಡೆಯುತ್ತಿದೆ ಎನ್ನಲಾಗಿದೆ.

ಈ ಎರಡೂ ಅಣೆಕಟ್ಟುಗಳು ಪಾಕ್ ಗೆ ಜಲವಿದ್ಯುತ್ ಕೇಂದ್ರಗಳಾಗಿದ್ದು, ಜಮ್ಮುವಿನ ರಾಂಬನ್‌ ನಲ್ಲಿರುವ ಬಾಗ್ಲಿಹಾರ್ ಮತ್ತು ಉತ್ತರ ಕಾಶ್ಮೀರದ ಕಿಶನ್‌ ಗಂಗಾ ನದಿಗಳ ಹರಿವು ಭಾರತದ ನಿಯಂತ್ರಣದಲ್ಲಿದೆ ಮತ್ತು ವ್ಯಾಪ್ತಿಯಲ್ಲಿದೆ ಎನ್ನಲಾಗಿದೆ.

ಇದರ ನಡುವೆ ಇಂದು(ಮೇ.4) ವಾಯುಸೇನೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಅಮರ್ ಪ್ರೀತ್ ಸಿಂಗ್ ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಸದ್ಯದ ಬೆಳವಣಿಗೆಗಳ ಬಗ್ಗೆ ಗೌಪ್ಯ ಮಾತುಕತೆ ನಡೆದಿದೆ ಎನ್ನಲಾಗಿದೆ.

700 ಅಡಿ ಆಳಕ್ಕೆ ಬಿದ್ದ ಸೇನಾ ವಾಹನ..! 3 ಯೋಧರು ಸಾವು..!

ಬೆಕ್ಕು ಕದ್ದ ಮೂವರು ಯುವತಿಯರು..! ಪ್ರಕರಣ ದಾಖಲು

ಉಡುಪಿಗೆ ಬಂದ ಭೂಗತ ಪಾತಕಿ ಬನ್ನಂಜೆ ರಾಜಾ..! 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವಾತನಿಗೆ 12 ದಿನ ಪೆರೋಲ್ ರಜೆ..!

ಸುಹಾಸ್‌ ಶೆಟ್ಟಿ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬ ಹಿಂದೂ ಮುಖಂಡನಿಗೆ ಜೀವ ಬೆದರಿಕೆ..! ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್..!

See also  ನಿಮಗೊತ್ತೇ ರಾಜ್ಯದಲ್ಲಿ ಹೆಚ್ಚುತ್ತಿದೆ ಪುಟ್ಟ ಮಕ್ಕಳ ಕ್ಯಾನ್ಸರ್ ಪ್ರಕರಣ, 0-14 ವರ್ಷದೊಳಗಿನ ಮಕ್ಕಳಲ್ಲಿ 87,000 ಹೊಸ ಪ್ರಕರಣ ಬೆಳಕಿಗೆ..! ಏನಂತಾರೆ ವೈದ್ಯರು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget