ಕ್ರೈಂವೈರಲ್ ನ್ಯೂಸ್

ಹಿಂದೂ ಧರ್ಮ ಸ್ವೀಕರಿಸಿದ ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಸೆಲೆಬ್ರೆಟಿ! ಇಲ್ಲಿದೆ ಆತನ ಕರುಣಾಜನಕ ಕಥೆ!

207

ನ್ಯೂಸ್ ನಾಟೌಟ್ : ಪಾಕಿಸ್ತಾನದ ಸಾಮಾಜಿಕ ಸಾಮಾಜಿಕ ಜಾಲತಾಣದಲ್ಲಿನ ಸೆಲೆಬ್ರೆಟಿ ಶಾಯನ್ ಅಲಿ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮ ಸ್ವೀಕರಿಸಿರುವುದಾಗಿ ಇತ್ತೀಚೆಗೆ ಪ್ರಕಟಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳ ನಿರಂತರ ಒತ್ತಡದ ಕಾರಣದಿಂದ ತಾವು ಪಕ್ಷದಿಂದ ಪರಾರಿಯಾಗುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಶಾಯನ್ ಹೇಳಿಕೊಂಡಿದ್ದಾರೆ.

ಈ ಸವಾಲಿನ ಸಮಯದಲ್ಲಿ ಶ್ರೀಕೃಷ್ಣನಿಂದ ತನಗೆ ಸಾಂತ್ವನ ಸಿಕ್ಕಿದ್ದು, ಆತ ತನಗೆ ಮಾರ್ಗದರ್ಶನ ಮಾಡಿದ್ದಾಗಿ ಹೇಳಿರುವ ಶಾಯನ್, ಶೀಘ್ರದಲ್ಲಿಯೇ ಭಾರತಕ್ಕೆ ಭೇಟಿ ನೀಡಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಅಧಿಕಾರಿಗಳ ಬೆದರಿಕೆ ಹಾಗೂ ದೌರ್ಜನ್ಯದ ಕಾರಣದಿಂದ 2019ರ ಸೆಪ್ಟೆಂಬರ್ ಸುಮಾರಿಗೆ ದೇಶದಿಂದ ಪರಾರಿಯಾಗಿದ್ದಾಗಿ ತಿಳಿಸಿದ್ದಾರೆ. “ಇದೆಲ್ಲ ಶುರುವಾಗಿದ್ದು 2018ರಲ್ಲಿ. ನಾನೊಬ್ಬ ಯಹೂದಿ ಮತ್ತು ರಾ ಏಜೆಂಟ್ ಎಂದು ಐಎಸ್‌ಐ ಆರೋಪಿಸಿತ್ತು. ಅದು ನನ್ನ ಪಾಲಿಗೆ ಅತ್ಯಂತ ಕಠಿಣ ದಿನಗಳು. ಈ ಎಲ್ಲ ಬೆದರಿಕೆಗಳ ಕಾರಣದಿಂದ 2019ರಲ್ಲಿ ನಾನು ಪಾಕಿಸ್ತಾನ ತೊರೆಯುವಂತಾಯಿತು. ಅವರಿಗಿಂತ ವಿಭಿನ್ನ ನಂಬಿಕೆಗಳನ್ನು ನಾನು ಹೊಂದಿದ್ದೇನೆ ಎಂಬುದನ್ನು ಅವರು ಕಂಡುಕೊಂಡಿದ್ದರು. ತಮ್ಮ ನಿಯಮ ಹಾಗೂ ಆದೇಶಗಳನ್ನು ಪಾಲಿಸದ ಜನರಿಗೆ ಐಎಸ್‌ಐ ಏನು ಮಾಡುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು” ಎಂದು ಹೇಳಿದ್ದಾರೆ.
ಐಎಸ್‌ಐ ದಬ್ಬಾಳಿಕೆಯ ಕಾರಣದಿಂದ ಬೇರೆ ಯಾವ ಆಯ್ಕೆಯೂ ಇಲ್ಲದೆ ಪಾಕಿಸ್ತಾನವನ್ನು ಶಾಶ್ವತವಾಗಿ ತೊರೆದಿರುವುದಾಗಿ ತಿಳಿಸಿರುವ ಅವರು, ತಮ್ಮ ಜೀವ ತೆಗೆಯಲು ಸಂಚು ನಡೆಸಲಾಗಿದೆ ಎಂದೂ ಆರೋಪಿಸಿದ್ದಾರೆ.


2020-21ರಲ್ಲಿ ಅಮೆರಿಕದಲ್ಲಿರುವ ಇಸ್ಕಾನ್ ಸಂಪರ್ಕ ಬೆಳೆದಿತ್ತು. ನಾನು ಚಿಕ್ಕವನಾಗಿದ್ದಾಗ ಟಿವಿಯಲ್ಲಿ ಶ್ರೀಕೃಷ್ಣನ ಬಗ್ಗೆ ಹಾಗೂ ಹಿಂದೂಯಿಸಂ ಕುರಿತಾದ ಕಾರ್ಯಕ್ರಮಗಳನ್ನು ನೋಡುತ್ತಿದ್ದೆ. ಅಮೆರಿಕಕ್ಕೆ ಬಂದ ಬಳಿಕ ಇಸ್ಕಾನ್‌ಗೆ ಹೋಗಲು ಶುರುಮಾಡಿದೆ. ಖಿನ್ನತೆಯಿಂದ ಹೊರಬರಲು ಅದು ನನಗೆ ಸಹಾಯ ಮಾಡಿತು. ನನಗೆ ಯಾವುದೋ ನಂಟು ಸಿಕ್ಕಂತೆ ಅನಿಸಿತು. ಅವರು ನನ್ನ ಜನರು ಎಂಬ ಭಾವನೆ ಮೂಡಿತು ಎಂದು ತಿಳಿಸಿದ್ದು ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ.

See also  ಪುತ್ತೂರು: 302 ವರ್ಷಗಳಷ್ಟು ಹಳೇಯ ಕನ್ನಡ ಶಿಲಾ ಶಾಸನ ಪತ್ತೆ..! 17 ನೇ ಶತಮಾನದ ಕಥೆ ಹೇಳುತ್ತಿವೆ ಅದರಲ್ಲಿ ಬರೆದ ಸಾಲುಗಳು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget