Latestಕ್ರೀಡೆ/ಸಿನಿಮಾಕ್ರೈಂದೇಶ-ವಿದೇಶಸಿನಿಮಾ

ಪಾಕ್ ನಟನ ಚಲನಚಿತ್ರ ಭಾರತದಲ್ಲಿ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದ ಕೇಂದ್ರ ಸರ್ಕಾರ..! ಸಿನಿಮಾ ಹಾಡು ಯೂಟ್ಯೂಬ್‌ ನಿಂದ ಡಿಲೀಟ್..!

836

ನ್ಯೂಸ್ ನಾಟೌಟ್: ಪಹಲ್ಗಾಮ್‌ ನಲ್ಲಿ ಉಗ್ರರ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಚಿತ್ರ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ಚಿತ್ರದ ಹಾಡುಗಳನ್ನು ಯೂಟ್ಯೂಬ್‌ ನಿಂದ ಡಿಲೀಟ್ ಮಾಡಲಾಗಿದೆ.

ಪಾಕ್ ನಟ ಫವಾದ್ ನಟನೆಯ ‘ಅಬೀರ್ ಗುಲಾಲ್’ ಚಿತ್ರದ 2 ಹಾಡುಗಳು ‘ಸರಿಗಮ’ ಯೂಟ್ಯೂಬ್ ಚಾನೆಲ್‌ ನಲ್ಲಿ ರಿಲೀಸ್ ಮಾಡಲಾಗಿತ್ತು. ಒಂದು ರೊಮ್ಯಾಂಟಿಕ್ ಸಾಂಗ್ ಮತ್ತೊಂದು ಪಾರ್ಟಿ ಸಾಂಗ್ ಆಗಿತ್ತು. ಈಗ ಈ ಎರಡು ಹಾಡನ್ನು ‘ಸರಿಗಮ’ ಯೂಟ್ಯೂಬ್ ಚಾನೆಲ್‌ನಿಂದ ತೆಗೆದು ಹಾಕಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ ನಲ್ಲಿ ನಡೆದ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ರಿಲೀಸ್ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಫವಾದ್ ಖಾನ್ ಮತ್ತು ವಾಣಿ ಕಪೂರ್ ನಟಿಸಿರುವ ‘ಅಬೀರ್ ಗುಲಾಲ್’ ಮೇ 9ರಂದು ರಿಲೀಸ್ ಆಗಬೇಕಿತ್ತು. ಈ ಸಿನಿಮಾವನ್ನು ಬಿಡುಗಡೆಗೆ ಅನುಮತಿ ನೀಡದಿರಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಪಾಕ್ ಕಲಾವಿದರು, ಗಾಯಕರು ತಂತ್ರಜ್ಞರು ಭಾರತದ ಸಿನಿಮಾದಲ್ಲಿ ಕೆಲಸ ಮಾಡಲು ನಿಷೇಧಿಸಲಾಗಿದೆ. ಫಹಾದ್ ಹೊರತಾಗಿ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಭಾರತೀಯರೇ ಆಗಿದ್ದಾರೆ.  

ಮಂಗಳೂರು: ಪಹಲ್ಗಾಮ್ ದಾಳಿಯನ್ನು ಸಮರ್ಥಿಸಿಕೊಂಡು ಪೋಸ್ಟ್ ಹಾಕಿದವನ ವಿರುದ್ಧ ಪ್ರಕರಣ ದಾಖಲು..! ಆರೋಪಿಗಾಗಿ ಹುಡುಕಾಟ

‘ಜವನೆರೆ ಕಲ’ ಮಂಗಳೂರು ಆಕಾಶವಾಣಿ ಫೋನ್ ಇನ್ ಕಾರ್ಯಕ್ರಮ, ಸಾಮಾಜಿಕ ಜಾಲತಾಣದ ಬಗ್ಗೆ ಮನಮುಟ್ಟುವ ಕಾರ್ಯಕ್ರಮ ನೀಡಿದ ನ್ಯೂಸ್ ನಾಟೌಟ್’ ಸಿಬ್ಬಂದಿ ದಿನೇಶ್ ಎಂ

ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಪ್ರಜೆಗಳು..! ಮಾಹಿತಿ ಕಲೆಹಾಕಲು ತೆರಳಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ..!

See also  ತಮಿಳುನಾಡಿನ ದೇಗುಲದ ಪ್ರಸಾದದಲ್ಲಿ ಸತ್ತ ಹಾವು ಪತ್ತೆ..! ದತ್ತಿ ಇಲಾಖೆಗೆ ದೂರು ನೀಡಿದ ಭಕ್ತರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget