Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪಹಲ್ಗಾಮ್​ ದಾಳಿಯಿಂದಾಗಿ ಪಾಕ್ ಗೆ ಟೊಮೆಟೋ ರಫ್ತು ನಿಲ್ಲಿಸಿದ ಕರ್ನಾಟಕದ ರೈತರು..! ವಾರ್ಷಿಕವಾಗಿ 800 ರಿಂದ 900 ಟನ್ ಟೊಮೆಟೋ ಕೋಲಾರದಿಂದ ಪಾಕ್ ಗೆ ರಫ್ತು..!

476

ನ್ಯೂಸ್ ನಾಟೌಟ್: ಕೋಲಾರದ ಎಪಿಎಂಸಿ ಮಾರುಕಟ್ಟೆ ಇಡೀ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಅದೇ ಕಾರಣಕ್ಕೆ ಕೋಲಾರ ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಟೊಮೆಟೊ ದೇಶದ ಬಹುತೇಕ ರಾಜ್ಯಗಳಿಗೆ ಹಾಗೂ ಹೊರ ದೇಶಗಳಿಗೂ ರಫ್ತಾಗುತ್ತದೆ.

ಕೋಲಾರದ ಟೊಮೆಟೊ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ,ದುಬೈ ಸೇರಿದಂತೆ ವಿವಿಧ ದೇಶಗಳಿಗೆ ಇಲ್ಲಿನ ರೈತರು ರಪ್ತು ಮಾಡುತ್ತಾರೆ. ಆದರೆ ಇತ್ತೀಚೆಗೆ ಉಗ್ರರು ಕಾಶ್ಮೀರದ ಪೆಹಲ್ಗಾಮ ನಲ್ಲಿ ಅಟ್ಟಹಾಸ ಮೆರೆದು 27 ಜನರನ್ನು ಬಲಿ ಪಡೆದಿದ್ದಾರೆ. ಇದರಿಂದ ಕೇಂದ್ರ ಸರ್ಕಾರ, ರಾಜತಾಂತ್ರಿಕವಾಗಿ ಈಗಾಗಲೇ ಪಾಕ್ ​​ಗೆ ಬಿಸಿಮುಟ್ಟಿಸುತ್ತಿದೆ. ಇತ್ತ ಕೋಲಾರದ ರೈತರು ಸಹ ಟೊಮೆಟೊವನ್ನು ಪಾಕಿಸ್ತಾನಕ್ಕೆ ರಪ್ತು ಮಾಡುವುದನ್ನ ನಿಲ್ಲಿಸಿದ್ದಾರೆ.

ವಾರ್ಷಿಕವಾಗಿ 800 ರಿಂದ 900 ಟನ್ ಟೊಮೆಟೊವನ್ನು ಕೋಲಾರದಿಂದ ಪಾಕಿಸ್ತಾನಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಪೆಹಲ್ಗಾಮ್​ ದಾಳಿ ಬೆನ್ನಲ್ಲೇ ವರ್ತಕರು ಇನ್ನು ಮುಂದೆ ಪಾಕಿಸ್ತಾನಕ್ಕೆ ಒಂದೇ ಒಂದು ಟೊಮೆಟೊವನ್ನು ಕಳುಹಿಸದಿರಲು ತೀರ್ಮಾನಿಸಿದ್ದಾರೆ.

ಇನ್ನು ಪಾಕಿಸ್ತಾನದ ಜೊತೆ ಇಲ್ಲಿನ ವರ್ತಕರು ಅವಿನಾಭಾವ ‌ಸಂಬಂಧವನ್ನು ಹೊಂದಿದ್ದಾರೆ.‌ ಟೊಮೆಟೊ ಜೊತೆ ತರಕಾರಿಯನ್ನು‌ ಸಹ ಕಳುಹಿಸುತ್ತಿದ್ದರು. ಈ ಮೂಲಕ ಕೋಟ್ಯಾಂತರ ರೂಪಾಯಿ ವ್ಯವಹಾರವನ್ನು ಇಲ್ಲಿನ ರೈತರು ವರ್ತಕರು ಪಾಕಿಸ್ತಾನದ ಜೊತೆ ವಹಿವಾಟು ಮಾಡುತ್ತಿದ್ದರು. ಪಹಲ್ಗಾಮ್ ದಾಳಿಯ ಕಾರಣ ನಮಗೆ ನಷ್ಟವಾದರೂ ಪರವಾಗಿಲ್ಲ ನಾವು ಪಾಕ್ ಗೆ ಟೊಮೆಟೋ ಕಳುಹಿಸುವುದಿಲ್ಲ ಎಂದಿದ್ದಾರೆ.

ಅಂಚೆ ಕಚೇರಿಯಲ್ಲಿ ಹಣಕೊಡುತ್ತಿದ್ದಾರೆ ಎಂದು ಹೇಳಿ ಅಜ್ಜಿಯ ಬಳಿ ಇದ್ದ ಒಡವೆಗಳನ್ನು ದೋಚಿ ವ್ಯಕ್ತಿ ಪರಾರಿ..! ಸೌತೆಕಾಯಿ ಮಾರಿ ಜೀವನ ಸಾಗಿಸುತ್ತಿದ್ದ ಹಿರಿಯ ಜೀವ..!

ಕೋರ್ಟ್ ಹಾಲ್‌ ನಿಂದ ಹೊರ ಬಂದು ಆಟೋದಲ್ಲಿ ಕುಳಿತಿದ್ದ ಹಿರಿಯ ಜೀವಗಳಿಗೆ ತೀರ್ಪು ಕೊಟ್ಟ ಜಡ್ಜ್..! ಏನಿದು ಪ್ರಕರಣ..?

See also  ಸರ್ಕಾರಿ ಬಸ್ ನಲ್ಲೂ ಬಂತು ಕ್ಯೂಆರ್ ಸ್ಕ್ಯಾನರ್..! ಇನ್ನೂ ಸರ್ಕಾರಿ ಬಸ್ ಗಳಲ್ಲಿ ಕ್ಯಾಶ್ ಇಲ್ಲದೆಯೂ ಪ್ರಯಾಣಿಸ್ಬಹುದಾ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget