ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್

ಕುಖ್ಯಾತ ರೌಡಿಶೀಟರ್ಸ್ ಗಳ ಹೆಸರಿನ ಫ್ಯಾನ್ಸ್ ಪೇಜ್ ಎಡ್ಮಿನ್ ಗಳಿಗೆ ಸಿಸಿಬಿ ಪೊಲೀಸರಿಂದ ಶಾಕ್..! ಸಾಮಾಜಿಕ ಜಾಲತಾಣಗಳಲ್ಲಿ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ ಸೇರಿದಂತೆ ಹಲವರ ಹೆಸರಿನಲ್ಲಿ ಪೇಜ್..!

265

ನ್ಯೂಸ್‌ ನಾಟೌಟ್: ಸಾಮಾಜಿಕ ಜಾಲತಾಣಗಳಲ್ಲಿರುವ ರೌಡಿ ಶೀಟರ್ಸ್ ಫ್ಯಾನ್ಸ್ ಪೇಜ್​ಗಳಿಗೆ ಕಡಿವಾಣ ಹಾಕಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರೌಡಿಶೀಟರ್ಸ್ ಫ್ಯಾನ್ ಪೇಜ್ ಹೆಚ್ಚಾಗುತ್ತಿದ್ದು ಸೈಬರ್ ಕ್ರೈಂ ಪೊಲೀಸರ ಸಹಾಯದೊಂದಿಗೆ ಅಂಥ ಪೇಜ್​ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸವನ್ನು ಸಿಸಿಬಿ ಆರಂಭಿಸಿದೆ.

ಕುಖ್ಯಾತ ರೌಡಿಶೀಟರ್​ಗಳಾದ ವಿಲ್ಸನ್ ಗಾರ್ಡನ್ ನಾಗ, ಸೈಲೆಂಟ್ ಸುನೀಲ, ಸೈಕಲ್ ರವಿ ಸೇರಿದಂತೆ ಹಲವರ ಹೆಸರಿನಲ್ಲಿ ‘ಬಾಸ್’ ಟ್ಯಾಗ್​ಲೈನ್‌ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಪೇಜ್​ಗಳನ್ನು ತೆರೆಯಲಾಗುತ್ತಿದೆ. ಸಿನಿಮಾಗಳ ಡೈಲಾಗ್, ಹಾಡುಗಳನ್ನು ಬಳಸಿ ಪ್ರಚೋದಿಸಲಾಗುತ್ತಿದೆ. ಇಂತಹ ಪೇಜ್‌ಗಳಿಗೆ ಹಿಂಬಾಲಕರ ಸಂಖ್ಯೆ ಹಾಗು ರೌಡಿಸಂನತ್ತ ಆಕರ್ಷಿತರಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.

ಇದನ್ನು ಮನಗಂಡಿರುವ ಸಿಸಿಬಿ, ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಈಗಾಗಲೇ ಹಲವು ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿಸುವವರ ವಿರುದ್ಧವೂ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/07/conflict-with-lover-private-bus-in-udupi-travellers-are-confused-kannada-news
https://newsnotout.com/2024/07/google-pay-phone-pay-in-ksrtc-kannada-news-govt-bus-updated-in-terms-of-payment
https://newsnotout.com/2024/07/dengue-kannada-newsfever-8-year-old-girl-nomore-doctors
https://newsnotout.com/2024/07/21-ias-officers-transferred-to-different-districts-and-postions-karnataka-government-order
See also  ತಾಲಿಬಾನ್ ​​ನಲ್ಲಿ AK47 ಹಿಡಿದು ನಿಂತ ಅಮೆರಿಕಾದ ನೀಲಿ ಚಿತ್ರತಾರೆ..! ಏನಿದು ಪ್ರಕರಣ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget