ನ್ಯೂಸ್ ನಾಟೌಟ್: ಥೈಲ್ಯಾಂಡ್‌ನಲ್ಲಿ ನಡೆದ BIMSTEC ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ದೊರಕಿತ್ತು. ಈ ವೇಳೆ ಪ್ರಧಾನಿ ಪೇಟೊಂಗ್ ಟಾರ್ನ್ ಶಿನವಾತ್ರ ಅಲ್ಲಿದ್ದರು. ತಕ್ಷಣವೇ ಎಲ್ಲರ ಕಣ್ಣುಗಳು ಇದ್ದಕ್ಕಿದ್ದಂತೆ ಆ ಹುಡುಗಿಯಂತೆ ಕಾಣುವ ಆಕೆ ಮೇಲೆ ಬಿದ್ದವು. ತಕ್ಷಣ ಎಲ್ಲರಲ್ಲು ಒಂದು ಪ್ರಶ್ನೆ ಮೂಡಿತ್ತು.ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ ಆ ಮಹಿಳೆ ಯಾರು? ಈ ಚರ್ಚೆ ಮುಂದುವರೆದಂತೆ, ಆಕೆ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಬಹಿರಂಗ ಗೊಂಡಿವೆ.
ಹೌದು, ಥೈಲ್ಯಾಂಡ್‌ನಲ್ಲಿ ಬದಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪೇಟೊಂಗ್ ಟಾರ್ನ್ ಶಿನವಾತ್ರ ಹೊಸ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ದೇಶದ ಪ್ರಭಾವಿ ಶಿನವತ್ರ ರಾಜವಂಶದ ವಂಶಸ್ಥರು. ಆ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೈತಿಕ ಉಲ್ಲಂಘನೆಗಾಗಿ ಹಾಲಿ ಪ್ರಧಾನಿಯನ್ನು ನ್ಯಾಯಾಲಯ ಪದಚ್ಯುತಗೊಳಿಸಿದ ನಂತರ ಶಿನವತ್ರ ಮುಂದಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.ಥೈಲ್ಯಾಂಡ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪೇಟೊಂಗ್ ಟಾರ್ನ್ ಶಿನವಾತ್ರ ಅವರಿಗೆ ಕೇವಲ 38 ವರ್ಷ. ಆ ದೇಶದ ಎರಡನೇ ಮಹಿಳಾ ಪ್ರಧಾನಿ. ಅವರ ಕುಟುಂಬದಲ್ಲಿ ಇಬ್ಬರು ಮಾಜಿ ಪ್ರಧಾನ ಮಂತ್ರಿಗಳು ಸೇರಿದ್ದಾರೆ. ಆಕೆಯ ತಂದೆ ಮಾಜಿ ಪ್ರಧಾನಿ ಥಕ್ಸಿನ್ ಶಿನವಾತ್ರ. ಅವರು 2001 ರಿಂದ 2006 ರವರೆಗೆ ಆ ಹುದ್ದೆಯಲ್ಲಿದ್ದರು. ಮಿಲಿಟರಿ ದಂಗೆಯ ನಂತರ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂದಹಾಗೆ ಅವರು ಥೈಲ್ಯಾಂಡ್‌ನ ಅತ್ಯಂತ ಶ್ರೀಮಂತ ವ್ಯಕ್ತಿ.
ಶಿನವ್ರತಾ 15 ವರ್ಷಗಳಿಂದ ವಿದೇಶದಲ್ಲಿ ಅಧ್ಯಯನ ಮಾಡುತ್ತಿದ್ದು, ಇತರ ಕೆಲಸಗಳಲ್ಲಿ ನಿರತರಾಗಿದ್ದರು. ಕಳೆದ ವರ್ಷ ಥೈಲ್ಯಾಂಡ್‌ಗೆ ಹಿಂದಿರುಗಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು ಈಗ ಥಾಯ್ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.ಪೇಟೊಂಗ್ ಟಾರ್ನ್ ಶಿನವಾತ್ರ ಥೈಲ್ಯಾಂಡ್‌ನ ಪ್ರತಿಷ್ಠಿತ ಚುಲಾಲಾಂಗ್ ಕಾರ್ನ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಆನಂತರ ಯುಕೆಗೆ ತೆರಳಿದರು. ಅಲ್ಲಿ ಸರ್ರೆ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಒಂದೊಮ್ಮೆ 17 ನೇ ವಯಸ್ಸಿನಲ್ಲಿ, ಅವರು ಮೆಕ್ ಡೊನಾಲ್ಡ್ಸ್ ನಲ್ಲಿ ಅರೆಕಾಲಿಕ ಕೆಲಸ ಮಾಡಿದ್ದರು ಎನ್ನಲಾಗಿದೆ. ಆ ಸುದ್ದಿ ಆ ಸಮಯದಲ್ಲಿ ಸಂಚಲನ ಮೂಡಿಸಿತ್ತು.