ನ್ಯೂಸ್ ನಾಟೌಟ್: ಕಳೆದ ಲೋಕ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಪದ್ಮರಾಜ್ ಪೂಜಾರಿ ಅವರು ಮುಂದಿನ ದಿನಗಳಲ್ಲಿ ಎಂಪಿ ಆಗಿಯೇ ಆಗುತ್ತಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಪದ್ಮರಾಜ್ ಆರ್ ಪೂಜಾರಿಯವರು ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರ ನಡುವೆ ಅವರ ಪ್ರೀತಿಯ ಒಡನಾಟ ಮುಂದುವರಿದಿದೆ. ಮುಂದೆ ಅವರು ಎಂ ಪಿ ಆಗಿಯೇ ಆಗುತ್ತಾರೆ ಎಂದರು.
ಪಮ್ಮಲೆ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಸೋಲಾಗಿದೆ ಎಂದು ಪದ್ಮರಾಜರು ಮನೆಯಲ್ಲಿ ಕೂರಲಿಲ್ಲ, ಇಡೀ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡುತ್ತಿದ್ದಾರೆ. ಜಾತಿ,ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಅವರ ಮನಸ್ಸು ನಿಜಕ್ಕೂ ಅಭಿನಂದನಾರ್ಹ. ಅವರ ಮುಂದಿನ ರಾಜಕೀಯ ಜೀವನ ಉಜ್ವಲವಾಗುವ ಕಾಲ ಬಂದೇ ಬರುತ್ತದೆ ಎಂದು ಅಶೋಕ್ ರೈ ಹೇಳಿದರು.
ವೇದಿಕೆಯಲ್ಲಿ ಪಮ್ಮಲೆ ಜಮಾತ್ ಅಧ್ಯಕ್ಷಮಹಮ್ಮದ್ ಬಡಗನ್ನೂರು, ಪುಡಾ ಸದಸ್ಯ ನಿಹಾಲ್ ಪಿ ಶೆಟ್ಟಿ, ಉದ್ಯಮಿ ರಂಜಿತ್ ಬಂಗೇರ ಉಪಸ್ಥಿತರಿದ್ದರು.