ಸುಳ್ಯ

ನಾಳೆ ಸುಳ್ಯದಲ್ಲಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ರೋಡ್ ಶೋ – ಮತಯಾಚನೆ, ಕಲ್ಲುಗುಂಡಿ ಪೇಟೆಯಲ್ಲೂ ಸರ್ವ ಸಿದ್ಧತೆ

93

ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನೆಲ್ಲ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ಸಲ ಪದ್ಮರಾಜ್ ಗೆಲುವಿಗಾಗಿ ಕಾಂಗ್ರೆಸ್ ಸರ್ವ ಪ್ರಯತ್ನಗಳನ್ನು ನಡೆಸಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪದ್ಮರಾಜ್ ಆರ್. ಪೂಜಾರಿ ಅವರು ಸುಳ್ಯ ನಗದರಲ್ಲಿ ನಾಳೆ ರೋಡ್ ಶೋ ನಡೆಸಲಿದ್ದಾರೆ.

ಬೆಳಗ್ಗೆ 8.30ಕ್ಕೆ ಸುಳ್ಯ ಹಳೆಗೇಟು ಪೆಟ್ರೋಲ್ ಪಂಪ್ ನಿಂದ ರೋಡ್ ಶೋ ಆರಂಭವಾಗಲಿದೆ. ಮೇಲಿನ ಪೇಟೆ ಗಾಂಧಿನಗರ ಪೆಟ್ರೋಲ್ ಪಂಪ್ ಬಳಿ ರೋಡ್ ಶೋ ಮುಕ್ತಾಯಗೊಳ್ಳಲಿದೆ. ಆ ನಂತರ ನೇರವಾಗಿ ಕಲ್ಲುಗುಂಡಿಗೆ ತೆರಳಲಿರುವ ಪದ್ಮರಾಜ್ ಅವರು ಅಲ್ಲಿ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ. ಅಡ್ಯಡ್ಕದಲ್ಲಿ ಕಾರ್ನರ್ ಮೀಟಿಂಗ್, ಗುತ್ತಿಗಾರು ಪೇಟೆಯಲ್ಲಿ ಮತಯಾಚನೆ, ಹರಿಹರ ಪಲ್ಲತ್ತಡ್ಕದಲ್ಲಿ ಕಾರ್ನರ್ ಮೀಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 3.15ಕ್ಕೆ ಸುಬ್ರಹ್ಮಣ್ಯ ಪೇಟೆಯಲ್ಲಿ ಮತಯಾಚನೆ ನಡೆಸಲಿದ್ದಾರೆ. ಬಳಿಕ ಶ್ರೀ ದೇವರ ದರ್ಶನ ಪಡೆದು ಸ್ವಾಮೀಜಿಗಳ ಭೇಟಿ ನಡೆಸಲಿದ್ದಾರೆ. ಆನಂತರ ಕಡಬಕ್ಕೆ ತೆರಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

See also  ನಾಳೆ ಸೌಜನ್ಯ ಪರ ಐವರ್ನಾಡಿನಲ್ಲಿ ನ್ಯಾಯಕ್ಕಾಗಿ ಆಗ್ರಹ, ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಹಲವಾರು ನಾಯಕರು ಭಾಗಿ, ನ್ಯೂಸ್ ನಾಟೌಟ್ ನಲ್ಲಿ ನೇರ ಪ್ರಸಾರ
  Ad Widget   Ad Widget   Ad Widget   Ad Widget   Ad Widget   Ad Widget