ನ್ಯೂಸ್ ನಾಟೌಟ್: ಧರ್ಮಸ್ಥಳ ಗ್ರಾಮದಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಕೊಳೆತ ಸ್ಥಿತಿಯಲ್ಲಿ ನೆರಿಯ ಎಂಬಲ್ಲಿ ಹೊಳೆಯಲ್ಲಿ ಪತ್ತೆಯಾಗಿದ್ದ ಪಿಯುಸಿ ವಿದ್ಯಾರ್ಥಿನಿ ಪದ್ಮಲತಾ ಸಾವಿನ ಪ್ರಕರಣಕ್ಕೆ ಮೂರು ದಶಕದ ಬಳಿಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದೀಗ ಎಸ್ ಐಟಿ ಕಚೇರಿಯಲ್ಲಿ ಪದ್ಮಲತಾ ಸಾವಿನ ತನಿಖೆ ಆಗಬೇಕೆಂದು ಪದ್ಮಲತಾ ಅವರ ಸಹೋದರಿ ಇಂದ್ರಾವತಿಯವರು ಎಸ್ ಐಟಿಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ಎಸ್ ಐಟಿ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಏನಿದೆ ದೂರಿನಲ್ಲಿ..?
ಪದ್ಮಲತಾ ಅವರ ಕಳೆಬರ ತೆಗೆದು ತನಿಖೆ ನಡೆಸಿ ಆಕೆಯ ಅಪಹರಣ, ಕೊಲೆ, ಅಪರಾಧಿಗಳ ಪತ್ತೆ ಹೆಚ್ಚಿ ನ್ಯಾಯ ಕೊಡಿಸುವಂತೆ ಒತ್ತಾಯಿಸಲಾಗಿದೆ. ಉಜಿರೆಯ ಖಾಸಗಿ ಕಾಲೇಜಿನಲ್ಲಿ ಪದ್ಮಲತಾ ಪಿಯುಸಿ ಓದುತ್ತಿದ್ದರು. ಡಿ.22, 1986ರಂದು ಉಜಿರೆಗೆ ಬಂದ ಯುವತಿ ಮನೆಗೆ ಮರಳಿ ಹೋಗಿರಲಿಲ್ಲ. ನೆರಿಯ ಬಳಿ ಶವವಾಗಿ ಪತ್ತೆಯಾಗಿದ್ದರು.