Latestಕ್ರೈಂದೇಶ-ವಿದೇಶಬೆಂಗಳೂರುವಿಡಿಯೋವೈರಲ್ ನ್ಯೂಸ್

ಹಳಿ ತಪ್ಪಿ ಹೊಲಕ್ಕೆ ಇಳಿದ ಬೆಂಗಳೂರಿನಿಂದ ತೆರಳಿದ್ದ ಕಾಮಾಕ್ಯ ಎಕ್ಸ್‌ ಪ್ರೆಸ್‌ ರೈಲು..! ಬೇರ್ಪಟ್ಟ 11 ಬೋಗಿಗಳು..!

641
Spread the love

ನ್ಯೂಸ್‌ ನಾಟೌಟ್: ಬೆಂಗಳೂರಿನಿಂದ ಅಸ್ಸಾಂನ ಗುವಾಹಟಿಗೆ ಸಂಚರಿಸುತ್ತಿದ್ದ ಕಾಮಾಕ್ಯ ಎಕ್ಸ್‌ ಪ್ರೆಸ್‌ ರೈಲು ಒಡಿಶಾದಲ್ಲಿ ಹಳಿ ತಪ್ಪಿದ ಘಟನೆ ಇಂದು ನಡೆದಿದೆ.

ಚೌದ್ವಾರ ಪ್ರದೇಶದ ಮಂಗೂಲಿಯ ಪ್ಯಾಸೆಂಜರ್ ನಿಲ್ದಾಣದ ಬಳಿ ಸೂಪರ್‌ ಫಾಸ್ಟ್‌ ಎಕ್ಸ್‌ ಪ್ರೆಸ್‌ ರೈಲು ಹಳಿ ತಪ್ಪಿದೆ. ರೈಲಿನ ಕನಿಷ್ಠ 11 ಬೋಗಿಗಳು ಹಳಿ ತಪ್ಪಿವೆ ಎಂದು ವರದಿ ತಿಳಿಸಿದೆ.

ಬೆಳಿಗ್ಗೆ 11:54 ಕ್ಕೆ ಹಳಿ ತಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಬಿ -6 ರಿಂದ ಬಿ -14 ವರೆಗಿನ ಬೋಗಿಗಳು ಹಳಿ ತಪ್ಪಿವೆ. ರೈಲಿನ ಬೋಗಿಗಳು ಹಳಿ ತಪ್ಪಿ ಹೊಲದಲ್ಲಿ ಇಳಿದಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ ನಿಂದ ಹೊರಟಿದ್ದ ಕಾಮಾಕ್ಯ ಎಕ್ಸ್‌ ಪ್ರೆಸ್‌ ರೈಲು ತಮಿಳುನಾಡು, ಆಧ್ರಪ್ರದೇಶ, ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದ ಮೂಲಕ ಅಸ್ಸಾಂ ಗುವಾಹಟಿಗೆ ತೆರಳುತ್ತಿತ್ತು.

 

See also  4 ಲಕ್ಷಕ್ಕೆ ಮಗು ಮಾರಾಟ ಮಾಡಿದ 6 ಮಂದಿ ಅರೆಸ್ಟ್..! ನಕಲಿ ಜನನ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳು ವಶಕ್ಕೆ..!
  Ad Widget   Ad Widget   Ad Widget   Ad Widget   Ad Widget   Ad Widget