ಕ್ರೈಂರಾಜ್ಯವೈರಲ್ ನ್ಯೂಸ್

ಶೌಚಕ್ಕೆ ಹೋದ 21 ವರ್ಷದ ಯುವಕ ಕಾಲು ಜಾರಿ ಕಾಲುವೆಗೆ ಬಿದ್ದು ಸಾವು..! 1 ಕಿ.ಮೀ ದೂರದಲ್ಲಿ ಮೃತದೇಹ ಪತ್ತೆ..!

123

ನ್ಯೂಸ್ ನಾಟೌಟ್: ಶೌಚಕ್ಕೆ ಹೋದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಯುವಕ ಸಾವಿಗೀಡಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ನಡೆದಿದೆ.

ಶಿವರಾಯ ಮಲ್ಲಪ್ಪ ಕಾಂಬಳೆ (21) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಹಲ್ಯಾಳ ಕರಿಮಸುತಿ ಏತ ನೀರಾವರಿ ಕಾಲುವೆಯ ಬಳಿ ಇಬ್ಬರು ಸ್ನೇಹಿತರ ಜೊತೆಗೆ ಮುಂಜಾನೆ ಶೌಚಕ್ಕೆ ತೆರಳಿದ್ದ ಯುವಕ ಸಾವನ್ನಪ್ಪಿದ್ದಾನೆ. ಕಾಲುವೆ ಮೇಲೆ ಶೌಚ ಬಳಿಕ ಕಾಲುವೆಗೆ ಇಳಿದು ನೀರು ತರಲು ಮುಂದಾಗಿದ್ದ ಎನ್ನಲಾಗಿದೆ. ಈ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದಿದ್ದಾನೆ. ಈಜು ಬಾರದ ಶಿವರಾಯ ಕಾಲುವೆ ಬಿಳುತ್ತಿದ್ದಂತೆ ರಭಸವಾಗಿ ಹರಿಯುತ್ತಿದ್ದ ಕಾಲುವೆಯಲ್ಲಿ ಕೊಚ್ಚಿಹೋಗಿದ್ದಾನೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಥಣಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಶೋಧಕಾರ್ಯದ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/09/namaz-and-ajad-kannada-news-bangla-govt-new-announcement-and-order-to-temples/
https://newsnotout.com/2024/09/first-night-man-ask-adhar-with-girl-jain-caste-kannada-news-viral/
https://newsnotout.com/2024/09/kannada-news-school-girl-arrest-police-rajashekar-arrested/
https://newsnotout.com/2024/09/wayanad-landslide-alive-family-facing-tragedy-kannada-news-marriage/
https://newsnotout.com/2024/09/ganesha-chathurti-conflict-kannada-news-46-are-arrested-kannada-news-d/
https://newsnotout.com/2024/09/kannada-news-ayyappa-temple-onam-celebration-kannada-news/
See also  ಮಂಗಳೂರು: ಹಿಂದೂ ಯುವತಿಯನ್ನು ಅಪಹರಿಸಿ ಲವ್ ಜಿಹಾದ್ ..!, 'ಎರಡು ಮದುವೆಯಾಗಿರುವ ನಟೋರಿಯಸ್ ನಿಂದ ಮಗಳನ್ನು ರಕ್ಷಿಸಿ' ಎಂದು ಕಣ್ಣೀರಿಡುತ್ತಿರುವ ತಂದೆ
  Ad Widget   Ad Widget   Ad Widget   Ad Widget   Ad Widget   Ad Widget