ಪುತ್ತೂರುರಾಜಕೀಯ

ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆಯನ್ನು ಶೂರ್ಪನಖಿಗೆ ಹೋಲಿಸಿದ ಕಾಂಗ್ರೆಸ್..!

274

ನ್ಯೂಸ್ ನಾಟೌಟ್ : ಚುನಾವಣೆ ನಡೆಯುತ್ತಿರುವಾಗ ವಿವಿಧ ಪಕ್ಷಗಳ ಆರೋಪ ಪ್ರತ್ಯಾರೋಪ ಜೋರಾಗಿದೆ. ಇದೀಗ ಕಾಂಗ್ರೆಸ್ ನೇರವಾಗಿ ಶೋಭಾ ಕರಂದ್ಲಾಜೆಯವರನ್ನು ಟಾರ್ಗೆಟ್ ಮಾಡಿಕೊಂಡಿದೆ. ಮಾತ್ರವಲ್ಲ ನೀವು ಕರ್ನಾಟಕ ರಾಜಕಾರಣದಲ್ಲಿ ಸೀತೆಯ ಪಾತ್ರಮಾಡಿ ಆದರೆ ಶೂರ್ಪನಖಿಯ ಪಾತ್ರ ಮಾಡಬೇಡಿ ಎಂದು ಕಾಂಗ್ರೆಸ್ ಕುಟುಕಿದೆ.

ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು, ಶೋಭಾ ಅವರೇ ರಾಜ್ಯದ ಜನರಿಗೆ ಏನು ಅನುಕೂಲ ಆಗುತ್ತದೆಯೋ ಅದನ್ನೇ ಮಾಡಿ, ಮೋದಿ ರೋಡ್ ಶೋ ದಿಂದ ಏನೂ ತೊಂದರೆ ಆಗದಿರಬಹುದು. ಆದರೆ ಇದರಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ಸಮಸ್ಯೆ ಆಗಲಿದೆ. ಚಿಕ್ಕಪುಟ್ಟ ಸಹಿತ ಅಂಗಡಿ ಇಟ್ಟುಕೊಂಡವರಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದಾರೆ. ಮೋದಿ ರೋಡ್ ಶೋ ವೇಳೆ ಕಾಂಗ್ರೆಸ್ ನವರು ಆಂಬ್ಯುಲೆನ್ಸ್ ತಂದು ಸೀನ್ ಕ್ರಿಯೇಟ್ ಮಾಡಿದ್ದಾರೆ ಎಂದು ಕರಂದ್ಲಾಜೆ ಆರೋಪಿಸಿದ್ದರು. ಈ ಆರೋಪಕ್ಕೆ ರಮೇಶ್ ಬಾಬು ತಿರುಗೇಟು ನೀಡಿದ್ದಾರೆ.

See also  ಪುತ್ತೂರು: ಭಾರತೀಯ ಸೇನೆಯಲ್ಲಿ ಸೇವೆ ಮುಗಿಸಿ ಊರಿಗೆ ಆಗಮಿಸುತ್ತಿರುವ ಯೋಧನಿಗೆ ನಾಳೆ (ಆ.5 ) ಹುಟ್ಟೂರ ಗೌರವ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget