ನ್ಯೂಸ್ ನಾಟೌಟ್: ʻಆಪರೇಷನ್ ಸಿಂಧೂರʼ (Operation Sindoor) ಹೆಸರಲ್ಲಿ ಪಾಕ್ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ಸಸ್ಪೆನ್ಸ್ ದಾಳಿ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾತ್ರೋ ರಾತ್ರಿ ನಡೆಸಿದ 23 ನಿಮಿಷಗಳ ದಾಳಿಯಲ್ಲಿ ಸುಮಾರು 100 ಉಗ್ರರು ಹತರಾಗಿದ್ದಾರೆ ಎನ್ನಲಾಗಿದೆ.
ಈ ದಾಳಿಯು ಪಾಕ್ ಜನತೆಯಲ್ಲೂ ನಡುಕ ಹುಟ್ಟಿಸಿದ್ದು, ಗೂಗಲ್ ನಲ್ಲಿ ವಾಯುದಾಳಿ (Air Strike), ಭಾರತೀಯ ಸೇನೆ, ಭಾರತ ಮತ್ತು ಆಪರೇಷನ್ ಸಿಂಧೂರದ ಬಗ್ಗೆ ತೀವ್ರ ಹುಡುಕಾಟ ನಡೆಸಿದ್ದಾರೆ. ʻಸಿಂಧೂರʼ ಹೆಸರಿನ ಅರ್ಥವನ್ನು ಪಾಕ್ ನಲ್ಲಿ ತೆಲೆ ಕೆಡಿಸಿಕೊಂಡು ಹುಡುಕಾಡುತ್ತಿದ್ದಾರೆ ಎಂಬುದು ಗೂಗಲ್ ಟ್ರೆಂಡ್ ನಲ್ಲಿ ಬಂದಿದೆ ಎನ್ನಲಾಗಿದೆ.
ಭಾರತೀಯ ಸೇನೆ ಪ್ರತೀಕಾರದ ದಾಳಿ ಬಳಿಕ ಪಾಕಿಸ್ತಾನಿಯರು ʻಸಿಂಧೂರʼದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಗೂಗಲ್ ನಲ್ಲಿ ʻಆಪರೇಷನ್ ಸಿಂಧೂರ್ʼ ಬಗ್ಗೆ ಹುಡುಕಾಡುತ್ತಿದ್ದಾರೆ. ಆಪರೇಷನ್ ಸಿಂಧೂರ್, ಇಂಡಿಯಾ ಆಪರೇಷನ್ ಸಿಂಧೂರ್, ಸಿಂಧೂರ್ ಅಟ್ಯಾಕ್, ವಾಟ್ ಈಸ್ ಆಪರೇಷನ್ ಸಿಂಧೂರ್ ಮುಂತಾದ ಪದಗಳನ್ನು ಸರ್ಚಿಂಗ್ ಮಾಡುತ್ತಿದ್ದಾರೆ.