ರಾಜಕೀಯ

ಬಿಜೆಪಿ ಬೆಂಬಲಿಸುವ ಬಿಷಪ್‌ ಹೇಳಿಕೆಗೆ ವಿಪಕ್ಷಗಳು ಕಿಡಿ

ನ್ಯೂಸ್‌ನಾಟೌಟ್‌: ತಲಶ್ಶೇರಿ ಆರ್ಚ್ ಡಯಾಸಿಸ್‌ನ ಕೆಥೊಲಿಕ್ ರೈತರ ಸಮಾವೇಶದಲ್ಲಿ ಬಿಜೆಪಿಗೆ ಬೆಂಬಲ ನೀಡುವ ವಿಚಾರದಲ್ಲಿ ರೋಮನ್ ಕೆಥೊಲಿಕ್ ಚರ್ಚ್‌ ತಲಸ್ಸೆರಿ ಆರ್ಚ್ ಬಿಷಪ್ ಮಾರ್ ಜೋಸೆಫ್ ಪಾಂಪ್ಲಾನಿ ನೀಡಿದ ಹೇಳಿಕೆಗೆ ವಿಪಕ್ಷಗಳು ಕಿಡಿ ಕಾರಿವೆ.

ತಲಶ್ಶೇರಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕೆಥೊಲಿಕ್ ರೈತರ ಸಮಾವೇಶದಲ್ಲಿ ಮಾತನಾಡಿದ ಆರ್ಚ್ ಬಿಷಪ್ ಜೋಸೆಫ್ ಪಂಪ್ಲಾನಿ, ಕೇಂದ್ರ ಸರ್ಕಾರ ರಬ್ಬರ್ ಬೆಲೆಯನ್ನು ಕಿಲೋಗ್ರಾಂಗೆ 300 ರೂ.ಗೆ ಏರಿಸಿದರೆ ಚರ್ಚ್‌ನಲ್ಲಿ ನಂಬಿಕೆ ಇಟ್ಟವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಈಗ ಭಾರೀ ವಿರೋಧ ವ್ಯಕ್ತವಾಗಿದೆ.

ಬಿಷಪ್ ಅವರ ಈ ಹೇಳಿಕೆಗೆ ಸಿಪಿಎಂ ಮತ್ತು ಕಾಂಗ್ರೆಸ್ ಕಿಡಿಕಾರಿದ್ದು, ಉತ್ತರ ಭಾರತದ ರಾಜ್ಯಗಳಲ್ಲಿ ಚರ್ಚ್ ಮತ್ತು ಪಾದ್ರಿಗಳ ವಿರುದ್ಧ ನಡೆದ ದಾಳಿಯನ್ನು ಬಿಷಪ್ ಮರೆತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಬಿಷಪ್ ಅವರ ಹೇಳಿಕೆ, ಕೇರಳದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Related posts

ಐಎಎಸ್, ಐಪಿಎಸ್ ಆಯ್ತು ಈಗ ಕೆಎಎಸ್ ಅಧಿಕಾರಿಗಳ ಸರದಿ..! 75 ಮಂದಿ ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ, ರವಿ ಡಿ ಚೆನ್ನಣ್ಣನವರ್ ಕೊಟ್ಟ ಟ್ವಿಸ್ಟ್ ಏನು?

Budget: ಸಿಎಂ ಸಿದ್ದು ಲೆಕ್ಕಾಚಾರ, ಯಾವ ಇಲಾಖೆಗೆ ಎಷ್ಟು ಅನುದಾನ..? ಇಲ್ಲಿದೆ ಸಂಪೂರ್ಣ ವಿವರ

‘ನಿಮಗೆ ತಾಕತ್ತಿದ್ದರೆ ಬನ್ನಿ.. ಮರಳು ಲಾರಿ ಹತ್ತಿಸಿ ನೋಡುವ’ ಅಕ್ರಮ ಮರಳು ದಂಧೆಕೋರರಿಗೆ ಸವಾಲ್ ಹಾಕಿದ ಶಾಸಕಿ