ನ್ಯೂಸ್ ನಾಟೌಟ್: ಕರಾವಳಿ ಗಂಡು ಕಲೆ ಯಕ್ಷಗಾನವನ್ನು ನೋಡುವುದೇ ಚಂದ. ಇಂತಹ ಯಕ್ಷಗಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.ಈಗಿನ ಟ್ರೆಂಡ್ ಗೆ ತಕ್ಕಂತೆ ಕೆಲವೊಂದು ಹಾಸ್ಯಗಳ ಸನ್ನಿವೇಶಗಳನ್ನು ಯಕ್ಷಗಾನದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಪೌರಾಣಿಕ ಪ್ರಸಂಗ ದ ಜತೆಜತೆಗೆ ಪ್ರಸಕ್ತ ವಿದ್ಯಮಾನಗಳ ಕುರಿತ ಕೆಲ ಸಂಭಾಷಣೆಗಳು ಇರುವುದನ್ನು ಗಮನಿಸಬಹುದು. ಇದೀಗ ಪಾವಂಜೆ ಮೇಳ ದಲ್ಲಿ ಕಲಾವಿದ ದಿನೇಶ್ ಶೆಟ್ಟಿ ಆಪರೇಷನ್ ಸಿಂಧೂರದ ಬಗ್ಗೆ ಮಾತನಾಡಿದ ಸಂಭಾಷಣೆಯ ವಿಡಿಯೋವೊಂದು ವೈರಲ್ ಆಗಿದೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ತಮ್ಮ Sunil kumar karkala ಹೆಸರಿನ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿ ಕೊಂಡಿದ್ದಾರೆ.ಈ ವಿಡಿಯೋದಲ್ಲಿ ಪಾವಂಜೆ ಮೇಳದಲ್ಲಿ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಆಪರೇಷನ್ ಸಿಂಧೂರದ ಬಗ್ಗೆ ಮಾತನಾಡುವುದನ್ನು ಗಮನಿಸಬಹುದು. ಅವರ ಸಂಭಾಷಣೆ ಹೀಗಿದೆ “ಈ ಪವಿತ್ರವಾದ ನೆಲದಲ್ಲಿ ನಾನು ಹುಟ್ಟಿದವ. ಪವಿತ್ರವಾದ ಸಂಸ್ಕಾರವನ್ನು ಪಡೆದವ. ಈ ನೆಲಕ್ಕೆ ತಾಯಿಯೆಂದು ನಾವು ಕರೆಯುತ್ತೇವೆ. ತಾಯಿಯೆಂದು ಕರೆಯುವ ಈ ನೆಲ ಇದು ಬಿಟ್ರೆ ಇನ್ನೊಂದಿಲ್ಲ. ಹೀಗಾಗಿ ನಮಗೆ ದೇಶ ಪ್ರೇಮವನ್ನು ಕಲಿಸಿದೆ ಬಿಟ್ರೆ ದೇಶ ದ್ರೋಹ ಮಾಡುವುದನ್ನು ಕಲಿಸಲಿಲ್ಲ ಎಂದು ಹೇಳುವುದನ್ನು ನೋಡಬಹುದು.ಈ ವೇಳೆ ಸ್ತ್ರಿ ವೇಷದಾರಿಯೊಬ್ಬರು ಈ ತಾಯಿಯ ಸಿಂದೂರ ಅಳಿಸಲು ಬಂದರೆ ಏನು ಮಾಡೋದು ಎಂದಿದ್ದಾರೆ. ಇದೇ ವೇಳೆ ಕಲಾವಿದ ದಿನೇಶ್ ಶೆಟ್ಟಿ, ತಾಯಿಯ ಸಿಂದೂರವನ್ನು ಒರೆಸುತ್ತೇನೆಂದು ಬಂದರೆ ಈ ನೆಲದ ಒಬ್ಬಳು ಹೆಣ್ಣಿನ ಸಿಂದೂರ ಒರೆಸಿದರೆ ವೈರಿಗಳ ಸಾವಿರ ಸಾವಿರ ಮಡದಿಯರ ಸಿಂದೂರ ಅಳಿಸುವುದಕ್ಕೆ ನಾವೆಲ್ಲಾ ಸಿದ್ಧರಾಗಿ ನಿಂತಿದ್ದೇವೆ ಎಂದು ಹೇಳುವುದನ್ನು ನೋಡಬಹುದು.
View this post on Instagram
ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಸೂಪರ್ ಎಂದು ಕಲಾವಿದರ ಮೈ ರೋಮಾಂಚನಕಾರಿ ಮಾತುಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹೀಗೆ ನಾನಾ ರೀತಿಯ ಕಾಮೆಂಟ್ ಗಳು ಬಂದಿವೆ.