Latestವೈರಲ್ ನ್ಯೂಸ್ಸಿನಿಮಾ

“ಆಪರೇಷನ್ ಸಿಂದೂರ” ಟೈಟಲ್ ಗೆ ಸಿನಿಮಾ ನಿರ್ಮಾಪಕರರಿಂದ ಭಾರೀ ಬೇಡಿಕೆ..! ಸ್ಯಾಂಡಲ್ ವುಡ್, ಬಾಲಿವುಡ್‌ ನಿಂದ 2 ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ..!

535

ನ್ಯೂಸ್ ನಾಟೌಟ್: ಪಹಲ್ಗಾಮ್ ನಲ್ಲಿ 24 ಹಿಂದೂಗಳು ಸೇರಿದಂತೆ 26 ಪ್ರವಾಸಿಗರ ನರಮೇಧಕ್ಕೆ ಭಾರತ ಪ್ರತಿಕಾರದ ಸಲುವಾಗಿ ಆಪರೇಷನ್ ಸಿಂಧೂರ್ ಹೆಸರಲ್ಲಿ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿತ್ತು. ಆದರೆ ಇದನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.

ಆಪರೇಷನ್ ಸಿಂಧೂರ್ ಭಾರತೀಯರ ಭಾವನಾತ್ಮಕತೆಯನ್ನು ಮುಟ್ಟಿದೆ. ಈಗ ಇದನ್ನೇ ಲಾಭ ಮಾಡಿಕೊಳ್ಳುವ ಸಲುವಾಗಿ ಭಾರತೀಯ ಚಿತ್ರರಂಗದ ನಿರ್ಮಾಪಕರು ಆಪರೇಷನ್ ಸಿಂಧೂರ್ ಟೈಟಲ್ ಗಾಗಿ ಮುಗಿಬೀಳುತ್ತಿದ್ದಾರೆ. ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮಹಾವೀರ್ ಜೈನ್ ಕಂಪನಿ, ಟಿ ಸೀರಿಸ್, ಝೀ ಸ್ಟುಡಿಯೋಸ್, ನಿರ್ದೇಶಕರಾದ ಮಧುರ್ ಭಂಡಾರ್ಕರ್, ಅಶೋಕ್ ಪಂಡಿತ್ ಸಹ ಟೈಟಲ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಚಿತ್ರದ ಟೈಟಲ್ ಗಾಗಿ ಪೈಪೋಟಿ ಎದುರಾಗಿದ್ದು ಕೇವಲ ಎರಡು ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಬರೋಬ್ಬರಿ ಖ್ಯಾತ 15 ಸಿನಿಮಾ ನಿರ್ಮಾಣ ಸಂಸ್ಥೆಗಳು ಈ ಪಟ್ಟಿಯಲ್ಲಿವೆ. ಆಪರೇಷನ್ ಸಿಂಧೂರ್ ನಂತರ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ (IMPPA), ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಪಕರ ಮಂಡಳಿ (IFTPC), ಮತ್ತು ಪಶ್ಚಿಮ ಭಾರತ ಚಲನಚಿತ್ರ ನಿರ್ಮಾಪಕರ ಸಂಘ (WIFPA) ಆಪರೇಷನ್ ಸಿಂಧೂರ್‌ಗೆ ಸಂಬಂಧಿಸಿದ ಚಲನಚಿತ್ರ ಶೀರ್ಷಿಕೆಗಳಿಗಾಗಿ ಅರ್ಜಿಗಳಲ್ಲಿ ಹೆಚ್ಚಳ ಕಂಡಿವೆ. ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ ಇಮೇಲ್ ಮೂಲಕ ಮೂರು ಸಂಸ್ಥೆಗಳು ಒಟ್ಟಾಗಿ 30 ಕ್ಕೂ ಹೆಚ್ಚು ಶೀರ್ಷಿಕೆ ಅರ್ಜಿಗಳನ್ನು ಸ್ವೀಕರಿಸಿವೆ.

ಸದ್ಯದ ಪೈಪೋಟಿ ನೋಡಿದರೆ ಈ ಸಂಖ್ಯೆಗಳು 50–60ಕ್ಕೆ ಏರಬಹುದು. ಇದು ಹೊಸದೇನಲ್ಲ. ಹೆಚ್ಚಿನ ಜನರು ಆಪರೇಷನ್ ಸಿಂಧೂರ್ ಮತ್ತು ಮಿಷನ್ ಸಿಂಧೂರ್ ನಂತಹ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು IMPPA ಕಾರ್ಯದರ್ಶಿ ಅನಿಲ್ ನಾಗರತ್ ತಿಳಿಸಿದ್ದಾರೆ.  

ಗಡಿಯಲ್ಲಿ ಬುಲ್ಡೋಜರ್ ಘರ್ಜನೆ, 28 ಮದರಸಾ, 9 ಮಸೀದಿ, 6 ದೇವಾಲಯ, 1 ಈದ್ಗಾ ನೆಲಸಮ..! ಪಾಕ್-ಭಾರತ ಸಂಘರ್ಷದ ನಡುವೆ ಏನಿದು ಹೊಸ ಕಾರ್ಯಾಚರಣೆ..?

ಮೂರೂವರೆ ಗಂಟೆಯಲ್ಲಿ ಭಾರತದ 4 ರಾಜ್ಯ, 24 ನಗರಗಳಿಗೆ ಪಾಕ್ ದಾಳಿ..! ಭಾರತೀಯ ಸೇನೆಯಿಂದ ಅಧಿಕೃತ ಮಾಹಿತಿ

See also  ಸಾಮಾಜಿಕ ಜಾಲತಾಣದಲ್ಲಿ ಸಿದ್ದು - ಡಿಕೆ ಫುಲ್ ಟ್ರೋಲ್! #ಕಾವೇರಿನಮ್ಮದು ಹ್ಯಾಶ್‌ ಟ್ಯಾಗ್ ಈಗ ಟ್ರೆಂಡಿಂಗ್, ಇಲ್ಲಿದೆ ಬಗೆ ಬಗೆಯ ಸಿದ್ದು - ಡಿಕೆ ಟ್ರೋಲ್ ಗಳು
  Ad Widget   Ad Widget   Ad Widget   Ad Widget   Ad Widget   Ad Widget   Ad Widget