ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಯೂಟ್ಯೂಬ್ ವಿಡಿಯೋ ನೋಡಿ ಸರ್ಜರಿ ಮಾಡಿದ ನಕಲಿ ವೈದ್ಯ..! 17ರ ಬಾಲಕನ ಶವವನ್ನು ಆಸ್ಪತ್ರೆಯ ಮೆಟ್ಟಿಲಲ್ಲೇ ಇಟ್ಟು ಪರಾರಿ..!

ನ್ಯೂಸ್‌ ನಾಟೌಟ್:‌ ನಕಲಿ ವೈದ್ಯನೊಬ್ಬ ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಸರ್ಜರಿ ಮಾಡಿದ ಪರಿಣಾಮ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಸರನ್ ಎಂಬಲ್ಲಿ ನಕಲಿ ವೈದ್ಯ ಯೂಟ್ಯೂಬ್ ವಿಡಿಯೋವನ್ನು ನೋಡುತ್ತಾ ಬಾಲಕನ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕೆ ಆಪರೇಷನ್ ಮಾಡಿದ್ದಾರೆ.ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಬಾಲಕನನ್ನು ಪಾಟ್ನಾದ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಅಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಿದ್ದಾರೆ. ಮಾರ್ಗ ಮಧ್ಯೆ ಬಾಲಕ ಮೃತಪಟ್ಟಿದ್ದು, ದೇಹವನ್ನು ಆಸ್ಪತ್ರೆಯಲ್ಲಿ ಬಿಟ್ಟು ವೈದ್ಯರು ಹಾಗೂ ಜೊತೆಗಿದ್ದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಬಾಲಕನು ಪದೇ ಪದೇ ವಾಂತಿ ಮಾಡುತ್ತಿದ್ದ. ಆದ್ದರಿಂದ ಆತನನ್ನು ಸರನ್ ನಗರದಲ್ಲಿರುವ ಗಣಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿಸಿದೆವು. ವಾಂತಿ ನಿಂತಿತ್ತು. ಆದರೆ ವೈದ್ಯ ಅಜಿತ್ ಕುಮಾರ್ ಪುರಿ ಈತನಿಗೆ ಆಪರೇಷನ್ ಅಗತ್ಯ ಇದೆ. ಆಪರೇಷನ್ ಮಾಡಬೇಕು ಎಂದರು. ಆದರೆ ಅವರು ಯೂಟ್ಯೂಬ್ ವಿಡಿಯೋವನ್ನು ನೋಡಿ ಆಪರೇಷನ್ ಮಾಡಿದ್ದರಿಂದ ನನ್ನ ಮಗ ಜೀವ ಕಳೆದುಕೊಂಡ ಎಂದು ಬಾಲಕನ ತಂದೆ ಚಂದನ್ ಶಾ ಹೇಳಿದ್ದಾರೆ.

ಬಾಲಕನ ತಂದೆಯನ್ನು ಬೇರೆ ಕೆಲಸದ ಮೇರೆಗೆ ಹೊರಗಡೆ ಕಳುಹಿಸಿದ್ದರು. ಕುಟುಂಬದವರ ಅನುಮತಿ ಪಡೆಯದೇ ಅವರು ಬಾಲಕನನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡಿದ್ದಾರೆ. ಬಾಲಕ ನೋವಿನಿಂದ ಕಿರುಚಿದ್ದನ್ನು ನೋಡಿ ಏನಾಯಿತು ಎಂದು ವೈದ್ಯರನ್ನು ಪ್ರಶ್ನಿಸಿದರೆ, ಎದುರುತ್ತರಿಸಿದರು. ಸಂಜೆಯ ಸುಮಾರಿಗೆ ಬಾಲಕನ ಶವವನ್ನು ಆಸ್ಪತ್ರೆಯ ಮೆಟ್ಟಿಲಲ್ಲಿ ಇಟ್ಟು ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪರಾರಿಯಾದ ವೈದ್ಯ ಮತ್ತು ಆತನ ತಂಡದವರನ್ನು ಪೊಲೀಸರು ಹುಡುಕುತ್ತಿದ್ದಾರೆ.

Click

https://newsnotout.com/2024/09/rajanikanth-jailer-film-villian-kannada-news-airport/
https://newsnotout.com/2024/09/ganapti-pooje-kannada-ddfnews-conflict-for-money-family-issue-karavara/
https://newsnotout.com/2024/09/village-festival-kannada-news-viral-vijayapura-police/

Related posts

ಶವ ಸಿಕ್ಕಿದ್ದು ಕೊಡಗಿನಲ್ಲಿ, ಕೊಲೆ ನಡೆದಿದ್ದು ಹೈದರಾಬಾದ್ ನಲ್ಲಿ..! ಕಾಫಿತೋಟದಲ್ಲಿ ಸಿಕ್ಕ ನಿಗೂಢ ಶವದ ಪ್ರಕರಣ ಭೇದಿಸಿದ ಪೊಲೀಸರು..!

ಆಗಸದಲ್ಲೇ ಪ್ಯಾರಾಚೂಟ್ ಗಳ ನಡುವೆ ಡಿಕ್ಕಿ..! ಪ್ಯಾರಾಗ್ಲೈಡರ್ ಅರಣ್ಯದೊಳಗೆ ಬಿದ್ದು ಸಾವು..!

ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿಯಾಗಿ ಆನೆ ಸಾವು..! ನರಳಿ-ನರಳಿ ಪ್ರಾಣಬಿಟ್ಟ ಆನೆಯ ಹೃದಯವಿದ್ರಾವಕ ವಿಡಿಯೋ ಇಲ್ಲಿದೆ