ದೇಶ-ವಿದೇಶವಿಡಿಯೋವೈರಲ್ ನ್ಯೂಸ್

ತೆರೆದ ಬೃಹತ್ ಬಾವಿಯ ದಂಡೆಯ ಮೇಲೆ ಮಗುವಿನ ಜೊತೆ ಕುಳಿತು ಅಪಾಯಕಾರಿ ರೀಲ್ಸ್..!‌ ಮಹಿಳೆಯ ಕಾಲಿನಲ್ಲಿ ನೇತಾಡಿದ ಮಗು.!

ನ್ಯೂಸ್‌ ನಾಟೌಟ್‌: ಮಹಿಳೆಯೊಬ್ಬರು ತೆರೆದ ಬಾವಿ ಮೇಲೆ ಕುಳಿತು, ಹಾಡೊಂದಕ್ಕೆ ಲಿಪ್‌ ಸಿಂಕ್‌ ಮಾಡಿ, ರೀಲ್ಸ್‌ ಮಾಡಿದ್ದಾರೆ. ಆ ಮಹಿಳೆಯ ಕಾಲಿನಲ್ಲಿ ಮಗು ನೇತಾಡಿಕೊಂಡಿದೆ. ಸ್ವಲ್ಪ ಆಚೆ ಇಚೆ ಆದರೂ ಆ ಮಗು ಬಾವಿಗೆ ಬೀಳುವ ಸಾಧ್ಯತೆಯಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಮಹಿಳೆ ಮಗುವಿನ ಜೊತೆ ನಿರ್ಲಕ್ಷ್ಯತನದಿಂದ ವರ್ತಿಸಿರುವುದಕ್ಕೆ ಮಹಿಳೆಯ ವಿರುದ್ಧ ಕ್ರಮಕ್ಕೆ ಅನೇಕರು ಆಗ್ರಹಿಸಿದ್ದಾರೆ.

ಈ ಮಹಿಳೆ ಮಗುವನ್ನು ಕೊಲ್ಲಲು ಯತ್ನಿಸಿದ್ದಾಳೆ ಎಂದು ʼಎಕ್ಸ್‌ʼನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.
“ಕಾನೂನನ್ನು ದೂಷಿಸಬೇಡಿ. ಇದೊಂದು ಮೆಂಟಲ್‌ ಕೇಸ್! ರೀಲ್ಸ್‌ ಗಳು ಮಾನವನ ಮೆದುಳನ್ನು ನಾಶಪಡಿಸುತ್ತಿವೆ. ಇಂತಹ ಸನ್ನಿವೇಶಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಸದ್ಯ ವಿಡಿಯೋ ವೈರಲ್‌ ಆಗಿದ್ದು, ಇದು ಎಲ್ಲಿ ನಡೆದಿದೆ. ಯಾವಾಗ ಆಗಿದ್ದು, ಹಾಗೂ ಮಹಿಳೆಯ ಜತೆಗಿರುವ ಈ ಮಗು ಆಕೆಯ ಮಗುವೇ ಅಥವಾ ಬೇರೆಯವರದ್ದೇ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.

Click

https://newsnotout.com/2024/09/kollegala-car-kannada-news-friday-near-bus-stand-police-issue/
https://newsnotout.com/2024/09/digital-upi-payment-innovation-by-auto-driver-kannada-news/
https://newsnotout.com/2024/09/bengaluru-express-train-fire-kannada-news-viral-news-fire/
https://newsnotout.com/2024/09/mangaluru-panamburu-beach-kannada-news-nomore-issue/

Related posts

ಪ್ಯಾಲೆಸ್ಟೈನ್ ದೇಶದ ಧ್ವಜ ಹಿಡಿದು ಬೈಕ್ ​ನಲ್ಲಿ ಓಡಾಟ..! ನಾಲ್ವರು ಅಪ್ರಾಪ್ತರು ಪೊಲೀಸ್ ವಶಕ್ಕೆ..! ಇಲ್ಲಿದೆ ವಿಡಿಯೋ

ರೈಲು ನಿಲ್ದಾಣದಲ್ಲಿ ಸ್ಪೋಟ, 20 ಮಂದಿ ಸಾವು, 30 ಕ್ಕೂ ಅಧಿಕ ಮಂದಿಗೆ ಗಾಯ, 20 ಮಂದಿ ಸಾವು, 30 ಕ್ಕೂ ಅಧಿಕ ಮಂದಿಗೆ ಗಾಯ

ಸುಳ್ಯ: ಬೈಕ್‌ ಮತ್ತು ಸ್ಕೂಟಿ ನಡುವೆ ಅಪಘಾತ; ಮಗು ಸಹಿತ ಕೆಳಕ್ಕೆ ಬಿದ್ದ ಸವಾರ