ರಾಜ್ಯ

ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ ಯಾವಾಗ..? ಅಬಕಾರಿ ಸಚಿವರು ಹೇಳಿದ್ದೇನು..?

ನ್ಯೂಸ್‌ ನಾಟೌಟ್‌: ಒಂದೆಡೆ ಮದ್ಯದ ದರ ಏರಿಕೆ, ಮತ್ತೊಂದೆಡೆ ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ ವಿಚಾರ ಭಾರಿ ಚರ್ಚೆಯಲ್ಲಿದೆ. ಈ ನಡುವೆ ಅಬಕಾರಿ‌ ಸಚಿವ ಆರ್.ಬಿ‌. ತಿಮ್ಮಾಪುರ ಶನಿವಾರ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರ ಆನ್‌ಲೈನ್ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳುವುದಿಲ್ಲ. ಮುಂದೆಯೂ ಮಾಡುವುದಿಲ್ಲ. ನೋ ಸ್ವಿಗ್ಗಿ, ನೋ ಜೊಮ್ಯಾಟೋ ಯಾವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಮದ್ಯದ ದರ ಏರಿಕೆಯಾಗಿಲ್ಲ. ನೆರೆ ರಾಜ್ಯಗಳಿಗೆ‌ ಹೋಲಿಸಿದರೆ ನಾವು ಚೀಪ್ ಲಿಕ್ಕರ್‌ ನಲ್ಲಿ ಕಡಿಮೆ ಇದ್ದೇವೆ. ಬೇರೆ ರಾಜ್ಯದಿಂದ ಪ್ರಿಮಿಯಮ್ ಬ್ರ್ಯಾಂಡ್ ದರದಲ್ಲಿ ಸ್ವಲ್ಪ ಹೆಚ್ಚಿರುವುದರಿಂದ ನಮಗೆ ಆದಾಯದ ಹೊಡೆತ ಬೀಳುತ್ತಿದೆ. ಬೇರೆ ರಾಜ್ಯದಲ್ಲಿ ಪ್ರೀಮಿಯಮ್ ಬ್ರ್ಯಾಂಡ್ ದರ ಕಡಿಮೆ ಇರುವುದರಿಂದ ಇಲ್ಲಿಗೆ ಆಮದು ಆಗುತ್ತಿದ್ದು, ಇದನ್ನು ತಡೆಗಟ್ಟಲಾಗುವುದು ಎಂದರು.

ಶಿಕ್ಷಣ ಸಂಸ್ಥೆ ಶಾಲೆ, ಕಾಲೇಜುಗಳ ಸುತ್ತ, ಉದ್ಯಾನವನಗಳಲ್ಲಿ ಮದ್ಯ ಸೇವನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಡಾಬಾ, ಅಂಗಡಿ ಸೇರಿದಂತೆ ಎಲ್ಲೆಂದರಲ್ಲಿ ಮದ್ಯ ಮಾರಾಟ ಮಾಡಿದರೂ ಕ್ರಮ ಆಗಲಿದೆ ಎಂದರು.

Related posts

ದರ್ಶನ್​ ಆ್ಯಂಡ್ ಗ್ಯಾಂಗ್ ಮತ್ತೆ ಕೋರ್ಟ್ ಗೆ ಹಾಜರು, ಇಂದೇ(ಜೂ.20) ನಿರ್ಧಾರವಾಗುತ್ತ ಆರೋಪಿಗಳ ಭವಿಷ್ಯ..? ದರ್ಶನ್ ಮತ್ತು ಪವಿತ್ರಾ ಗೌಡನ ಡಿ.ಎನ್.ಎ ಟೆಸ್ಟ್ ಮಾಡಲು ಕಾರಣವೇನು..?

ಪ್ರಿಯತಮೆಯನ್ನು ಕೊಂದು ಮಣ್ಣಲ್ಲಿ ಹೂತಿಟ್ಟ ಪ್ರಕರಣದ ಬಗ್ಗೆ ಸತ್ಯ ಬಿಚ್ಚಿಟ್ಟ ಎಸ್ಪಿ..! ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹ ಹೊರ ತೆಗೆದ ಪೊಲೀಸರು..!

ದರ್ಶನ್ ಪ್ರಕರಣ: ದೇವರಂತಹ ಮನುಷ್ಯ, ನಾಯಿಯಂತಹ ಬುದ್ಧಿ ಎಂದ ತಗಡು ವಿವಾದದ ಉಮಾಪತಿ..! ದರ್ಶನ್ ನನ್ನ ಸೆಟ್‌ ನಲ್ಲೂ ಯಾರಿಗೋ ಎರಡು-ಮೂರು ಸಲ ಹೊಡೆದಿದ್ದರು ಎಂದ ನಿರ್ಮಾಪಕ..!