Latestಕ್ರೈಂ

ಆನ್‌ ಲೈನ್‌ನಲ್ಲಿ ಚಿಟ್ಟೆ ಚಾಲೆಂಜ್ ಸ್ವೀಕರಿಸಿದ ೧೪ರ ಬಾಲಕ!! ನರಳಿ ನರಳಿ ಪ್ರಾಣವೇ ಬಿಟ್ಟ!!ಅಷ್ಟಕ್ಕೂ ಏನಿದು ಚಿಟ್ಟೆ ಚಾಲೆಂಜ್?

1k
Spread the love

ನ್ಯೂಸ್‌ ನಾಟೌಟ್: ಯಾಕೋ ಏನೋ ಈ ಹಾಳಾದ ಮೊಬೈಲ್ ಬಂದ ಮೇಲೆ ಮಕ್ಕಳು ನಮ್ಮ ಕಂಟ್ರೋಲ್‌ಗೆ ಸಿಗುತ್ತಿಲ್ಲ ಎನ್ನುವ ದೂರುಗಳನ್ನು ನೀವು ಪೋಷಕರಿಂದ ಕೇಳಿಯೇ ಇರುತ್ತೀರಿ. ಇದರಿಂದಾಗಿ ಎಷ್ಟೋ ಮಕ್ಕಳು ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ, ಇಂತಹ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆ ನಡೆದಿವೆ. ಹೀಗಿರುವಾಗ ಇವುಗಳಿಗೆ ಹತೋಟಿ ತರೋದು ಹೇಗೆ ಎಂಬ ಚಿಂತನೆ ನಡಿಬೇಕಾಗಿದೆ. ಯಾಕೆಂದರೆ ಆನ್‌ಲೈನ್‌ನಲ್ಲಿ ಮುಳುಗಿ ಹೋಗುವ ಮಕ್ಕಳು ಯಾವುದಕ್ಕೆ ಅಡಿಕ್ಟ್ ಆಗಿರುತ್ತಾರೆ ಅಂತ ಕಂಡು ಹಿಡಿಯೋದು ಬಹಳ ಕಷ್ಟ. ಕೆಲವೊಮ್ಮೆ ಸತ್ಯ ಗೊತ್ತಾಗುವಷ್ಟರಲ್ಲಿ ಘೋರ ಅನಾಹುತ ನಡೆದು ಹೋಗಿರುತ್ತೆ ಅನ್ನೋದು ಮತ್ತೊಂದು ಘಟನೆ ಸಾಕ್ಷಿಯಾಗಿದೆ.

ಹೌದು, ಈ ಬಾಲಕನ ಜೀವದ ಜೊತೆ ಚಿಟ್ಟೆಯೊಂದು ಚೆಲ್ಲಾಟವಾಡಿದೆ. ಆಶ್ಚರ್ಯವಾದ್ರೂ ಇದು ಘನಘೋರವಾದ ದುರಂತ ಕಥನ.ಈ ಬಾಲಕನ ಹೆಸರು ಡೇವಿ ನ್ಯೂನ್ಸ್ ಮೊರೆರಾ. ಇವನಿಗೆ ಇನ್ನೂ 14 ವರ್ಷ ವಯಸ್ಸು. ಇವನು ಆನ್‌ಲೈನ್‌ನಲ್ಲಿ ತೆಗೆದುಕೊಂಡ ಒಂದು ಚಾಲೆಂಜ್ ಈತನ ಮೃತ್ಯುಕೂಪಕ್ಕೆ ತಳ್ಳಿ ಬಿಟ್ಟಿದೆ. ಚಿಟ್ಟೆ (Butterfly) ಸವಾಲು ಸ್ವೀಕರಿಸಿದ ಡೇವಿ ಬ್ರೆಜಿಲ್‌ನಲ್ಲಿ ಸತತ 7 ದಿನಗಳ ಕಾಲ ನರಳಿ, ನರಳಿ ಕೊನೆಗೆ ಪ್ರಾಣ ಬಿಟ್ಟಿದ್ದಾನೆ.

ಏನಿದು ಚಾಲೆಂಜ್‌?

ಹೆಸರೇ ಹೇಳುವಂತೆ ಇದು ಚಿಟ್ಟೆಯ ಬಣ್ಣದ ಬಣ್ಣದ ಮೋಡಿಗೆ ಮರುಳಾಗೋದು. ಚಿಟ್ಟೆ (Butterfly) ಸವಾಲು. ಆನ್‌ಲೈನ್‌ನಲ್ಲಿರುವ ಒಂದು ವಿಲಕ್ಷಣ ಸವಾಲು. ಚಿಟ್ಟೆಯನ್ನ ನೀರಿನಲ್ಲಿ ಮುಳುಗಿಸಿ ಆ ನೀರನ್ನು ಇಂಜೆಕ್ಷನ್ ಮೂಲಕ ದೇಹದೊಳಕ್ಕೆ ಸೇರಿಸಿಕೊಂಡು ಪ್ರಾಣ ಬಿಡುವುದಾಗಿದೆ.ಡೇವಿ ನ್ಯೂನ್ಸ್ ಮೊರೆರಾ ಕೂಡ ಈ ಚಿಟ್ಟೆ ಸವಾಲಿಗೆ ಮಾರು ಹೋಗಿದ್ದಾನೆ. ಮನೆಯಲ್ಲಿ ಯಾರಿಗೂ ಗೊತ್ತಾಗದ ಹಾಗೇ ಚಿಟ್ಟೆ ಮುಳುಗಿದ ನೀರಿನಲ್ಲಿ ತನ್ನ ಕಾಲಿಗೆ ಇಂಜೆಕ್ಟ್ ಮಾಡಿಕೊಂಡಿದ್ದಾನೆ. ನಂತರ ದಿಢೀರ್‌ ಅಸ್ವಸ್ಥನಾಗಿದನ್ನು ನೋಡಿ ಮನೆಯವರು ಏನಾಯ್ತು ಎಂದು ಕೇಳಿದ್ದಾರೆ.

ಡೇವಿ ತನ್ನ ತಂದೆಗೆ ಸುಳ್ಳು ಹೇಳಿದ್ದಾನೆ. ಆ ಬಾಲಕ ಆಟವಾಡುವಾಗ ಪೆಟ್ಟಾಯ್ತು ಎಂದು ಸುಳ್ಳು ಹೇಳಿದ್ದಾನೆ. ಕೊನೆಗೆ ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಿದಾಗ ಪರಿಶೀಲನೆ ನಡೆಸಲಾಗಿದೆ. ದಿನ ಕಳೆದಂತೆ ಬಾಲಕನ ಸ್ಥಿತಿ ಬಿಗಡಾಯಿಸಿದ್ದು, ಇಂಜೆಕ್ಟ್ ಮಾಡಿಕೊಂಡಿದ್ದ ಕಾಲಿನಲ್ಲಿ ಗಾಯ ಕಾಣಿಸಿದೆ. ಆಗ ವೈದ್ಯರು ಕೇಳಿದಾಗ ಇಂಜೆಕ್ಟ್ ಮಾಡಿಕೊಂಡಿದ್ದ ಸತ್ಯ ಬಾಯ್ಬಿಟ್ಟಿದ್ದಾನೆ.

ಚಿಟ್ಟೆ ಸವಾಲಿನಿಂದ ಈ ಬಾಲಕ ಸಾವನ್ನಪ್ಪಿದ ಸುದ್ದಿ ಬ್ರೆಜಿಲ್ ದೇಶಾದ್ಯಂತ ಸಖತ್ ಸುದ್ದಿಯಾಗಿದೆ. ಈ ಕುರಿತು ಉನ್ನತ ತನಿಖೆಗೆ ಆದೇಶಿಸಲಾಗಿದ್ದು, ಚಿಟ್ಟೆಯಲ್ಲಿ ವಿಷದ ಅಂಶ ಇರಬಹುದು ಅನ್ನೋ ಅನುಮಾನ ವ್ಯಕ್ತವಾಗಿದೆ. ಬಾಲಕ ಪೋಸ್ಟ್ ಮಾರ್ಟಂ ವರದಿ ಮೂಲಕ ಸಾವಿಗೆ ಕಾರಣವೇನು ಎಂದು ಹುಡುಕಲಾಗುತ್ತಿದೆ.

See also  ಉಳ್ಳಾಲದ ಯುವತಿ ದುಬೈನಲ್ಲಿ ದುರಂತ ಅಂತ್ಯ..! ಪ್ರತೀ ದಿನ ಕ್ಯಾಬ್ ನಲ್ಲಿ ಹೋಗುತ್ತಿದ್ದವಳು ಅಂದು ತಾನೇ ಕಾರು ಚಲಾಯಿಸಿದ್ದೇಕೆ..?
  Ad Widget   Ad Widget   Ad Widget   Ad Widget   Ad Widget   Ad Widget