ಕ್ರೈಂವೈರಲ್ ನ್ಯೂಸ್

ಬೆಟ್ಟಿಂಗ್‌ ಆ್ಯಪ್‌ ನಲ್ಲಿ ಕೋಟ್ಯಧಿಪತಿಯಾದ ಪೊಲೀಸ್‌ ಅಧಿಕಾರಿ ಅಮಾನತ್ತು..! 1.5 ಕೋಟಿ ರೂ. ಹಣ ಏನಾಯ್ತು? ತನಿಖಾ ವರದಿಯಲ್ಲೇನಿದೆ?

ನ್ಯೂಸ್‌ ನಾಟೌಟ್‌: ಆನ್‌ಲೈನ್‌ ಗೇಮಿಂಗ್‌ ಆ್ಯಪ್‌ನಲ್ಲಿ ಒಂದೂವರೆ ಕೋಟಿ ರೂ. ಬಹುಮಾನ ಗೆದ್ದು ಸುದ್ದಿಯಾಗಿದ್ದ ಮಹಾರಾಷ್ಟ್ರದ ಪೊಲೀಸ್‌ ಅಧಿಕಾರಿ ಸೋಮನಾಥ್‌ ಝೆಂಡೆಯನ್ನು ಅಮಾನತ್ತುಗೊಳಿಸಲಾಗಿದೆ.

ಪುಣೆಯ ಪಿಂಪ್ರಿ- ಚಿಂಚ್ವಾಡ ಪೊಲೀಸ್ ಅಧಿಕಾರಿಗಳು, ಅಶಿಸ್ತಿನ ವರ್ತನೆ ಹಾಗೂ ಪೊಲೀಸ್‌ ಇಲಾಖೆಯ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಝೆಂಡೆ ವಿರುದ್ಧ ಈ ಕ್ರಮ ಕೈಗೊಂಡಿದ್ದಾರೆ.

ಸಹಾಯಕ ಪೊಲೀಸ್‌ ಆಯುಕ್ತ ಸತೀಶ್‌ ಮಾನೆ ಈ ಕುರಿತು ಮಾಹಿತಿ ನೀಡಿದ್ದು, ಬೆಟ್ಟಿಂಗ್‌ ಆ್ಯಪ್‌ಗಳಲ್ಲಿ ಪಾಲ್ಗೊಳ್ಳುವ ಇತರ ಪೊಲೀಸರಿಗೆ ಎಚ್ಚರಿಕೆಯ ಸಂದೇಶವಾಗಿದೆ ಎಂದು ಹೇಳಿದ್ದಾರೆ. ಪಿಎಸ್‌ಐ ಸೋಮನಾಥ್‌ ಝೆಂಡೆ ಅವರು ಪುಣೆಯ ಪಿಂಪ್ರಿ – ಚಿಂಚ್ವಾಡದ ಪೊಲೀಸ್‌ ಕಮಿಷನರೇಟ್‌ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಕ್ಟೋಬರ್‌ 10ರಂದು ಕರ್ತವ್ಯದಲ್ಲಿದ್ದಾಗಲೇ ಬಾಂಗ್ಲಾದೇಶ-ಇಂಗ್ಲೆಂಡ್‌ ತಂಡಗಳ ನಡುವಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದ ವೇಳೆ ‘ಡ್ರೀಮ್‌ 11’ ನಲ್ಲಿ ಆಟವಾಡಿ 1.5 ಕೋಟಿ ರೂ. ಬಹುಮಾನ ಗೆದ್ದಿದ್ದರು.

ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅವರ ವರ್ತನೆ ಕುರಿತು ಟೀಕೆಗಳು ಹಾಗೂ ಕಳವಳಗಳು ವ್ಯಕ್ತವಾಗಿದ್ದವು. ಹೀಗಾಗಿ ಪಿಂಪ್ರಿ- ಚಿಂಚ್ವಾಡ ಪೊಲೀಸರು ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದರು.

ಆನ್‌ಲೈನ್‌ ಬೆಟ್ಟಿಂಗ್‌ ಆಟಗಳಿಂದ ದೂರವಿರಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾದ ಪೊಲೀಸ್‌ ಅಧಿಕಾರಿಯೇ ಬೆಟ್ಟಿಂಗ್‌ ಆ್ಯಪ್‌ನಲ್ಲಿ ಪಾಲ್ಗೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆ ಶುರುವಾಗಿತ್ತು. ಇದರ ಬೆನ್ನಲ್ಲೇ ವಿವಾದದ ಸುಳಿಗೆ ಸಿಲುಕಿದ್ದರು. ಬಳಿಕ, ಪೊಲೀಸ್‌ ಇಲಾಖೆಯು ಈ ಬಗ್ಗೆ ತನಿಖೆ ಕೈಗೊಂಡಿತ್ತು. ಈಗ ತನಿಖಾ ವರದಿ ಬಂದಿದ್ದು, ಅದರ ಆಧಾರದ ಮೇಲೆ ಸೋಮನಾಥ್‌ ಝೆಂಡೆ ಅವರನ್ನು ಅಮಾನತ್ತುಗೊಳಿಸಲಾಗಿದೆ.

ಅನುಮತಿ ಇಲ್ಲದೆ ಝೆಂಡೆ ಅವರು ಆನ್‌ಲೈನ್ ಗೇಮ್ ಆಡಿದ್ದರು. ಅಲ್ಲದೆ, ತಮ್ಮ ಪೊಲೀಸ್ ಸಮವಸ್ತ್ರದಲ್ಲಿಯೇ ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡಿದ್ದರು ಎಂಬುದನ್ನು ತನಿಖೆ ಬೆಳಕಿಗೆ ತಂದಿದೆ. ಈ ಕಾರಣದಿಂದ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.

Related posts

ಸುಳ್ಯ: ಅತಿರೇಕ ಮದ್ಯಸೇವಿಸಿ ಮಲಗಿದ್ದಲ್ಲೇ ವ್ಯಕ್ತಿ ಸಾವು

ಬೆಳ್ಳಾರೆ: ಭೀಕರವಾಗಿ ಮಹಿಳೆಯನ್ನು ಹತ್ಯೆ ಮಾಡಿದ ಆರೋಪಿಗೆ ನ್ಯಾಯಾಂಗ ಬಂಧನ, ನ್ಯಾಯಾಲಯದ ಆದೇಶ

ಮಳೆ ನೀರಿನಲ್ಲಿ ಆಟವಾಡುತ್ತಿರುವಾಗ ಚರಂಡಿಗೆ ಬಿದ್ದು ಕೊಚ್ಚಿ ಹೋದ 3 ವರ್ಷದ ಮಗು..! ಇಲ್ಲಿದೆ ಮನಕಲಕುವ ಘಟನೆ..!