ವೈರಲ್ ನ್ಯೂಸ್

ಓಣಂ ದಿನಗಳಲ್ಲಿ ಏಕೆ ಮದ್ಯಕ್ಕಿಷ್ಟೊಂದು ಬೇಡಿಕೆ..? ಕಳೆದ 9 ದಿನಗಳಲ್ಲಿ 665 ಕೋಟಿ ರೂ. ಮದ್ಯ ಮಾರಾಟ..! ಇಲ್ಲಿದೆ ಸಂಪೂರ್ಣ ಮಾಹಿತಿ

161

ನ್ಯೂಸ್ ನಾಟೌಟ್ : ಕೇರಳದಲ್ಲಿ ಓಣಂ ಹಬ್ಬದ ಮೊದಲ ಒಂಬತ್ತು ದಿನಗಳಲ್ಲಿ ಅತ್ಯಧಿಕ ಮದ್ಯ ಮಾರಾಟವಾಗಿದ್ದು, ಸರಿ ಸುಮಾರು 665 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ವರದಿ ತಿಳಿಸಿದೆ.

ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಮಾರಾಟವಾದ ಮದ್ಯದ ಪ್ರಮಾಣಕ್ಕಿಂತ 41 ಕೋಟಿ ರೂಪಾಯಿಯಷ್ಟು ಅಧಿಕ ಎಂದು ವರದಿ ತಿಳಿಸಿದೆ.
ಬೆವ್ಕೊ ಎಂಬ ಕೇರಳ ರಾಜ್ಯ ಪಾನೀಯ ನಿಗಮ ಮಳಿಗೆಗಳಲ್ಲಿ ಓಣಂ ನ ಒಂಬತ್ತನೇ ದಿನ ಅಂದರೆ ಕೇವಲ ಒಂದೇ ದಿನ 116.1 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ.

ಕಳೆದ ವರ್ಷ ಈ ಒಂದು ದಿನದಲ್ಲಿ 112 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ದಿನ ಇರಿಂಜಲಕ್ಕೂಡ ಮಳಿಗೆಯಲ್ಲಿ ದಾಖಲೆಯ ಮಾರಾಡ 1.06 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕೊಲ್ಲಂನ ಅಸ್ರಾಮಂ ಬಂದರು ಮಳಿಗೆಯಲ್ಲಿ 1.01 ಕೋಟಿ ರೂಪಾಯಿ ಮೌಲ್ಯದ ಮದ್ಯ ಬಿಕರಿಯಾಗಿದೆ ಎನ್ನಲಾಗಿದೆ.

ಚಂಗನಸ್ಸೇರಿ (95.7 ಲಕ್ಷ), ಕೋರ್ಟ್ ಜಂಕ್ಷನ್ ಚೆತ್ರಾಲ (ರೂ. 93.7 ಲಕ್ಷ) ಮತ್ತು ಪಯ್ಯನೂರು (ರೂ. 91.6 ಲಕ್ಷ) ಮಳಿಗೆಗಳಲ್ಲಿ 90 ಲಕ್ಷಕ್ಕಿಂತ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿದೆ.
ಓಣಂನ ಅವಿತ್ತಂ (ಬುಧವಾರ) ವರೆಗೆ ಒಟ್ಟು 770 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಬೆವ್ಕೊ ಅಧಿಕಾರಿಗಳು ಹೇಳಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 700.6 ಕೋಟಿ ರೂಪಾಯಿಯ ಮದ್ಯ ಮಾರಾಟವಾಗಿತ್ತು ಎಂದು ವರದಿ ತಿಳಿಸಿದೆ.

See also  ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ಪ್ರಕರಣ, ಸಿಡಿ ಒದಗಿಸುವಂತೆ ಹೈ ಕೋರ್ಟ್ ಸೂಚನೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget