ಕರಾವಳಿಸುಳ್ಯ

ಫೆ.08ರಂದು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ ಶಾಲೆಯ ಶತಮಾನೋತ್ಸವ ಸಂಭ್ರಮ;ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ತಂಡದಿಂದ ತುಳು ಹಾಸ್ಯಮಯ ನಾಟಕ ಪ್ರದರ್ಶನ

ನ್ಯೂಸ್‌ ನಾಟೌಟ್‌ : ಕಂದ್ರಪ್ಪಾಡಿ ದ. ಕ.ಜಿ. ಪಂ.ಹಿ.ಪ್ರಾ.ಶಾಲೆಗೆ 100 ವರುಷ ಸಂಭ್ರಮ.ಈ ಬಗ್ಗೆ ಮಾಹಿತಿ ಹಂಚಿಕೊಂಡ ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡುತ್ತಾ” ದ. ಕ ಜಿ. ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ ಶಾಲೆಯು 1924ನೇ ಇಸವಿಯ ಜನವರಿ 7 ರಂದು ಲೋಕಾರ್ಪಣೆಗೊಂಡಿತ್ತು. ಈ ವರ್ಷ ನೂರನೇ ವರ್ಷಕ್ಕೆ ದಾಪುಗಾಲಿಡುತ್ತಿದೆ. ಅಂದಿನ ಊರ ಹಿರಿಯರ ಶ್ರಮ , ತ್ಯಾಗ ಫಲವಾಗಿ ಶಾಲೆ ಬೆಳೆದು ನಿಂತಿರೋದಕ್ಕೆ ನಾವೆಲ್ಲ ಹೆಮ್ಮೆ ಪಡುತ್ತಿದ್ದೇವೆ” ಎಂದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು, ಕ್ರೀಡೆ, ಸಾಹಿತ್ಯ, ಸಂಸ್ಕೃತಿ, ವೈದ್ಯಕೀಯ, ತಂತ್ರಜ್ಞಾನದಲ್ಲಿಯೂ ಸಾಧನೆ ಮಾಡಿದ್ದು ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಇಂತಹ ಶಿಕ್ಷಣ ಸಂಸ್ಥೆ ಯೊಂದರ ಶತಮಾನೋತ್ಸವನ್ನು ಸಂಭ್ರಮದಿಂದ ಆಚರಿಸಿ ಪ್ರಗತಿಯ ಮೈಲುಗಲ್ಲಾಗಿ ಇತಿಹಾಸ ಪುಟದಲ್ಲಿ ದಾಖಲಿಸುವಂತೆ ಮಾಡೋದೇ ನಮೆಲ್ಲರ ಹಂಬಲವಾಗಿದೆ” ಎಂದರು

ಫೆಬ್ರವರಿ 8 ರಂದು ನಡೆಯುವ ಬೆಳಗ್ಗಿನ ಕಾರ್ಯಕ್ರಮದಲ್ಲಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರು ಆದ ಶ್ರೀ ಮಧು ಬಂಗಾರಪ್ಪ ನವೀಕೃತ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ. ಇನ್ನು ನೂತನ ರಂಗ ಮಂದಿರವನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಕ್ರೀಡಾಂಗಣ ಉದ್ಘಾಟನೆಯನ್ನು ವಿಧಾನ ಪರಿಷತ್ ಕರ್ನಾಟಕ ಸರಕಾರ ಶ್ರೀ ಹರೀಶ್ ಕುಮಾರ್ .ಕೆ ನೆರವೇರಿಸಲಿದ್ದಾರೆ. ವಿಧಾನ ಪರಿಷತ್ ಶಾಸಕರು ಎಸ್ ಎಲ್ ಭೋಜೆ ಗೌಡ ಶಿಕ್ಷಕರ ವಸತಿ ಗೃಹವನ್ನು ಉದ್ಘಾಟನೆ ನೆರವೇರಿಸಲಿದ್ದಾರೆ.ಇಂಟರ್ ಲಾಕ್ ಉದ್ಘಾಟನೆ ಯನ್ನು ಮಂಜುನಾಥ್ ಭಂಡಾರಿ ನೆರವೇರಿಸಲಿದ್ದಾರೆ.ಗ್ರಾಮ ಪಂಚಾಯತ್ ದೇವಚಳ್ಳದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಶಾಲೆಯ ಅವರಣ ಗೋಡೆ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುಳ್ಯ ಶಿಕ್ಷಣಾಧಿಕಾರಿಗಳಾದ ರಮೇಶ್ ಬಿ.ಇ.,ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸ್ಥಾಯಿ ಸಮಿತಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಭರತ್ ಮುಂಡೋಡಿ, ಮೀನಾಕ್ಷಿ ಗೌಡ ಎಮ್, ಗ್ರಾಮ ಪಂಚಾಯತ್ ದೇವಚಳ್ಳ ಸದಸ್ಯರಾದ ಶ್ರೀಮತಿ ಸುಲೋಚನಾ ದೇವ, ಸೀತಮ್ಮ ಕರಂಗಲ್ಲು ಭಾಗವಹಿಸಲಿದ್ದಾರೆ.

ಸಾಯಂಕಾಲ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದ್ದು,ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ 8 ರಿಂದ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ,ರಾತ್ರಿ 10 ರಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ತೆಲಿಕೆದ ಬೊಳ್ಳಿ ಡಾ.ದೇವದಾಸ್ ಕಾಪಿಕಾಡ್ ರವರ ತುಳು ಹಾಸ್ಯಮಯ ನಾಟಕ ‘ಪುದರ್ ದೀದಂಡ್’ ನಾಟಕ ಇರಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಕುಶಾಲಪ್ಪ ಮಾಸ್ತರ್ (ಗೌರವ ಅಧ್ಯಕ್ಷರು ದ. ಕ ಜಿ. ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ)ಲಿಂಗಪ್ಪ ಗೌಡ (ಪ್ರಧಾನ ಕಾರ್ಯದರ್ಶಿ ದ. ಕ ಜಿ. ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ) ವಾಣಿ ಕೆ.ಎಸ್ ಮುಖ್ಯೋಪಾಧ್ಯಾಯರು (ಕೋಶಾಧಿಕಾರಿಗಳು, ದ. ಕ ಜಿ. ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ), ರಾಕೇಶ್ ರಾಜ್ ಹಿರಿಯಡ್ಕ (ಅಧ್ಯಕ್ಷರು, ಹಳೆ ವಿದ್ಯಾರ್ಥಿ ಸಂಘ ದ. ಕ ಜಿ. ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ),ಚಂದ್ರಶೇಖರ (ಅಧ್ಯಕ್ಷರು, ಶಾಲಾಭಿರುದ್ಧಿ ಸಮಿತಿ ದ. ಕ ಜಿ. ಪಂ.ಹಿ.ಪ್ರಾ. ಶಾಲೆ ಕಂದ್ರಪ್ಪಾಡಿ),ಪ್ರೀತಮ್ ಗೌಡ ಉಪಸ್ಥಿತರಿದ್ದರು.

Related posts

ಉಬರಡ್ಕ: ನೀರು ಹಾಕಲು ಹೋದ ದ್ವಿಚಕ್ರ ಸವಾರರ ಮೇಲೆ ಹಠಾತ್ ಕಡವೆ ದಾಳಿ, ರಸ್ತೆಗೆ ಎಸೆಯಲ್ಪಟ್ಟ ಸವಾರರು..!

ಮೂಡುಬಿದಿರೆ: ಹಾಡಹಗಲೇ ಎರಡು ಮನೆಗಳಿಗೆ ನುಗ್ಗಿ ಚಿನ್ನಾಭರಣ, ನಗದು ಕಳವು

ನಾಪತ್ತೆಯಾಗಿದ್ದ 10ನೇ ಕ್ಲಾಸ್ ವಿದ್ಯಾರ್ಥಿಗಳು ಶವವಾಗಿ ಪತ್ತೆ..!ಎಕ್ಸಾಂ ಬರೆಯಲೆಂದು ಶಾಲೆಗೆ ಹೋದವರು ಮನೆಗೆ ಬರಲೇ ಇಲ್ಲ..ಏನಿದು ಹೃದಯವಿದ್ರಾವಕ ಘಟನೆ?