ಕರಾವಳಿಕ್ರೈಂಸುಳ್ಯ

ಓಮ್ನಿ ಕಾರು -ಪಲ್ಸರ್ ಬೈಕ್ ಅಪಘಾತ-ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಗೌಡ್ರು!

ನ್ಯೂಸ್ ನಾಟೌಟ್ : ಓಮ್ನಿ ಕಾರು ಮತ್ತು ಪಲ್ಸರ್ ಬೈಕಿನ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಸುಳ್ಯದ ಆಲೆಟ್ಟಿಯ ಮಿತ್ತಡ್ಕ ಎಂಬಲ್ಲಿ ನಡೆದಿದೆ.ಪರಿಣಾಮ ಮೂವರು ಗಾಯಗೊಂಡಿದ್ದು,ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಳ್ಯ ಕಡೆಯಿಂದ ಆಲೆಟ್ಟಿ ಕಡೆಗೆ ಓಮ್ನಿ ಕಾರಿನಲ್ಲಿ ನಿವೃತ್ತ ಶಿಕ್ಷಕ ಶೇಷಪ್ಪ ಮಾಸ್ತರ್ ದಂಪತಿ ಪ್ರಯಾಣಿಸುತ್ತಿದ್ದರು.ಇದೇ ವೇಳೆ ಆಲೆಟ್ಟಿ ಸರಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಸುನಿಲ್ ಅವರು ಬೈಕ್ ನಲ್ಲಿ ಆಲೆಟ್ಟಿಯಿಂದ ಸುಳ್ಯದ ಕಡೆಗೆ ಬರುತ್ತಿದ್ದರು.ಈ ವೇಳೆ ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ..ಇದೇ ವೇಳೆ ಗುಡ್ಡೆಮನೆ ಕೃಷ್ಣಪ್ಪ ಗೌಡ ರವರು ತಮ್ಮ ಜೀಪಿನಲ್ಲಿ ಗಾಯಗೊಂಡಿರುವ ಮೂವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

Related posts

ಮಡಿಕೇರಿ: ದೇವಸ್ಥಾನದ ಬೃಹತ್ ಘಂಟೆ ಕದ್ದಿಯುತ್ತಿದ್ದ ಖದೀಮರು ಅಂದರ್

ಜೆಡಿಎಸ್‌ ಅಭ್ಯರ್ಥಿಯಿಂದ ಎಒಎಲ್‌ಇ ಅಧ್ಯಕ್ಷ ಡಾ. ಚಿದಾನಂದ ಅವರ ಭೇಟಿ

ಮಣಿಪುರದ ಮೂಲದ ಅಧಿಕಾರಿ ಸುಳ್ಯದ ಪ್ರೊಬೆಷನರಿ ತಹಶೀಲ್ದಾರ್ ಆಗಿ ನೇಮಕ