ಕ್ರೈಂ

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವೃದ್ಧ

680

ನ್ಯೂಸ್ ನಾಟೌಟ್: ಸುಳ್ಯದಿಂದ ಹಗ್ಗ ಖರೀದಿಸಿ ನಡೆದುಕೊಂಡೆ ಬೆಂಗಮಲೆಯತ್ತ ಹೋಗಿ ಅಲ್ಲಿನ ಕಾಡಿನಲ್ಲಿ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೇ ೨೬ ರಂದು ನಡೆದಿದೆ.ಸಾರಣೆ ಕೆಲಸ ಮಾಡುತ್ತಿದ್ದ  ಕಳಂಜ ಗ್ರಾಮದ ನಾಗಪ್ಪ ಮೃತ ವೃದ್ದ.

ಬೇಂಗಮಲೆ ರಸ್ತೆ ಬದಿಯ ರಕ್ಷಿತಾರಣ್ಯದ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ವಿಷಯ ತಿಳಿದು ಜನ ಜಮಾಯಿಸಿದ್ದು ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದರು. ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಚಪ್ಪಲಿ,ತಾಂಬೂಲ ಕಂಡುಬಂದಿದೆ. ಅಸೌಖ್ಯದಿಂದ ಬಳಲುತ್ತಿದ್ದ ಈ ವೃದ್ದ ಕೆಲವು ದಿನಗಳ ಹಿಂದೆ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

See also  2 ವರ್ಷದಿಂದ ಪ್ರೀತಿಸಿದ್ದ ಯುವತಿಗೆ ಗ್ರಾಮಸ್ಥರ ಮುಂದೆಯೇ ಚಾಕು ಇರಿತ..! ಯುವಕ ಪರಾರಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget