ಕರಾವಳಿವೈರಲ್ ನ್ಯೂಸ್

ಪ್ರೋ.ಕೆಎಸ್ ಭಗವಾನ್ ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಪೇಜಾವರ ಶ್ರೀ ಕಿಡಿ! ಮಹಿಷ ದಸರಾದ ಬಗ್ಗೆ ಶ್ರೀಗಳು ಹೇಳಿದ್ದೇನು?

ನ್ಯೂಸ್ ನಾಟೌಟ್: ಮಹಿಷ ದಸರಾ ಉತ್ಸವ ಆಚರಣೆ ಕುರಿತು ಉಡುಪಿಯ ಪೇಜಾವರ ಶ್ರೀಗಳು (Pejavara Sri) ಪ್ರತಿಕ್ರಿಯೆ ನೀಡಿದ್ದಾರೆ.
ಮಹಿಷಾಸುರ ಮರ್ದಿನಿ ಎಂದು ಚಾಮುಂಡೇಶ್ವರಿ ಪೂಜೆ ಮಾಡುತ್ತೇವೆ. ದುಷ್ಟ ಅಂತ ಹೇಳಿ ಚಾಮುಂಡೇಶ್ವರಿ ಮಹಿಷಾಸುರನನ್ನು ಮರ್ದನ ಮಾಡಿದ್ದಾಳೆ ಎಂದು ತಿಳಿಸಿದರು.

ಪ್ರೋ.ಕೆಎಸ್ ಭಗವಾನ್ ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಭಗವಾನ್ ಅವರ ವಿಚಾರಕ್ಕೆ ಬಿಟ್ಟಿದ್ದು. ಸಮಾಜದಲ್ಲಿ ಹೆಸರು ಬರಲು ದೊಡ್ಡವರ ಬಗ್ಗೆ ತುಚ್ಛವಾಗಿ ನಿಂದಿಸುವ, ಪ್ರಚಾರ ಪಡೆಯುವ ಹುನ್ನಾರ ಭಗವಾನ್ ಅವರದ್ದಾಗಿದೆ ಎಂದು ಪೇಜಾವರ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಮುಂಡೇಶ್ವರಿ ಉತ್ಸವವನ್ನು ಸರ್ಕಾರವೇ ಮಾಡುತ್ತಿದೆ. ಮತ್ತೊಂದು ಕಡೆ ಮಹಿಷಾಸುರನ ಉತ್ಸವ ಮಾಡುವಲ್ಲಿ ಅರ್ಥವಿಲ್ಲ. ದುರ್ಗುಣಗಳ ಉತ್ಸವ ಮಾಡುವುದು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ ಎಂದು ಹೇಳಿದರು.

Related posts

ಸುಬ್ರಹ್ಮಣ್ಯ: ಬಾರೀ ಮಳೆ, ಕೊಲ್ಲಮೊಗ್ರು ಸೇತುವೆ ಜಲಾವೃತ, ಪರದಾಡಿದ ವಾಹನ ಸವಾರರು

ಹಿಂದೂ ಕ್ರಿಕೆಟಿಗನ ಮನೆಗೆ ಬೆಂಕಿ..? ಶೇಖ್ ಹಸೀನಾ ಬೆಂಬಲಿಗರಿಗೆ ನಡುಕ..!

ವಿಕಲಚೇತನ ವ್ಯಕ್ತಿಯನ್ನು ಮಗುವಿನಂತೆ ಎತ್ತಿಕೊಂಡು ಬೇರೊಂದು ಬಸ್‌ ಗೆ ಹತ್ತಿಸಿದ ಕಂಡಕ್ಟರ್, ಮಾನವೀಯತೆ ಕಂಡು ಕರಗಿದ ಜನ