ಕರಾವಳಿ

ಮಡಿಕೇರಿ, ಮಂಗಳೂರಿನಲ್ಲಿ ಪಿಎಫ್ಐ, ಕಚೇರಿಗಳಿಗೆ ಬೀಗ ಜಡಿದ ಪೊಲೀಸರು

ನ್ಯೂಸ್ ನಾಟೌಟ್: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವುದರೊಂದಿಗೆ ಮಂಗಳೂರು ಒಂದರಲ್ಲಿಯೇ ಅದರ 12 ಕಚೇರಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಸಮೀಪದ ಕೊಡುಗು ಜಿಲ್ಲೆಯ ಮಡಿಕೇರಿಯಲ್ಲೂ ಪಿಎಫ್‌ಐ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿ ಬೀಗ ಹಾಕಿದ್ದಾರೆ ಅನ್ನುವ ಸುದ್ದಿ ಕೇಳಿ ಬಂದಿದೆ.

ಬುಧವಾರ ಸಂಜೆಯಿಂದ ಪಿಎಫ್ ಐ ಸಂಘಟನೆಯ 10 ಕಚೇರಿಗಳು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ ಐ) ಮತ್ತು ಸಂಘಟನೆಯ ಮಾಹಿತಿ ಅಂಡ್ ಎಂಪವರ್ಮೆಂಟ್ ಕಚೇರಿಗಳನ್ನು ಬಂದ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮಂಗಳೂರಿನ ಕಸಬಾ ಬೆಂಗರೆ, ಚೊಕ್ಕಬೆಟ್ಟು, ಕಾಟಿಪಳ್ಳ ಎರಡನೆ ಬ್ಲಾಕ್, ಅಡ್ಡೂರ್, ಕಿನ್ನಿಪದವು, ಕೆ.ಸಿ‌.ರೋಡ್, ಇನೋಳಿ, ಮಲ್ಲೂರು, ಕುದ್ರೋಳಿಯ ಪಿಎಫ್‌ಐ ಹಾಗೂ ನಗರದ  ರಾವ್ ಸರ್ಕಲ್ ಬಳಿಯ ಇನ್ಫೋರ್ಮೇಶನ್ ಆಯಂಡ್ ಎಂಪವರ್ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

ದಕ್ಷಿಣ ಕನ್ನಡ: ದಿಢೀರ್ ಏರಿಕೆ ಕಂಡ ಅಡಿಕೆ ಧಾರಣೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಗುತ್ತಿಗಾರು:ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಅಗ್ನಿ ರಕ್ಷಕ ಸೇವೆ”ಲೋಕಾರ್ಪಣೆ,ಯೋಗ ತರಬೇತಿ ಶಿಬಿರ ಸಮಾರಂಭ-ರಾಷ್ಟ್ರಮಟ್ಟದ ಪ್ರತಿಭೆಗಳಿಗೆ ಸನ್ಮಾನ

ಉಡುಪಿಯ ತ್ರಾಸಿ ಬೀಚ್‌ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ ..! ಪ್ರವಾಸಿಗ ಪಾರು, ಬೋಟ್ ರೈಡರ್ ಕಣ್ಮರೆ..!