ಕ್ರೈಂವೈರಲ್ ನ್ಯೂಸ್

ಅಧಿಕಾರ ಸ್ವೀಕರಿಸಿದ ದಿನವೇ ಅಧಿಕಾರಿಗೆ ಹೃದಯಾಘಾತ! ಇಹಲೋಕ ತ್ಯಜಿಸಿದ ಆ ಅಧಿಕಾರಿ ಯಾರು? ಏನಿದು ದುರಂತ ಕಥೆ?

211

ನ್ಯೂಸ್ ನಾಟೌಟ್: ಬಡ್ತಿ ಪಡೆದು ಅಧಿಕಾರ ಸ್ವೀಕಾರ ಮಾಡಿದ್ದ ಜಯಪ್ರಕಾಶ ಕಲಕೋಟಿ ಎಂಬ ಅಧಿಕಾರಿ ಧಾರವಾಡದ ಜಿಲ್ಲಾ ಖಜಾನೆ ಸಹಾಯಕ ನಿರ್ದೇಶಕ ಹುದ್ದೆ ಅಲಂಕರಿಸಿದ್ದರು. ಆದರೆ ಬಡ್ತಿಯಿಂದ ಸಿಕ್ಕ ಅಧಿಕಾರದಲ್ಲಿ ಒಂದು ದಿನವೂ ಕಳೆಯದೆ ಇಹಲೋಕ ತ್ಯಜಿಸಿದ್ದಾರೆ.

ಅಧಿಕಾರ ಸ್ವೀಕರಿಸಿದ ದಿನವೇ ಹೃದಯಾಘಾತದಿಂದ ಅಧಿಕಾರಿ ಕೊನೆಯುಸಿರೆಳೆದ ಈ ಘಟನೆ ಧಾರವಾಡದಲ್ಲಿ ಸೋಮವಾರ ನಡೆದಿದೆ.
15 ದಿನಗಳ ಹಿಂದಷ್ಟೇ ಜಯಪ್ರಕಾಶರಿಗೆ ಬಡ್ತಿ ಲಭಿಸಿತ್ತು. ಧಾರವಾಢ ಜಿಲ್ಲಾ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದ ಅವರಿಗೆ ಸಂಜೆ ಹೃದಯಾಘಾತವಾಗಿತ್ತು.

ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ದುರಂತ ಅಂತ್ಯ ಕಂಡಿದ್ದಾರೆ.
ಸೋಮವಾರ ಬೆಳಗ್ಗೆ ಅಧಿಕಾರ ಸ್ವೀಕಾರ ಮಾಡಿದ್ದ ಜಯಪ್ರಕಾಶ ಕಲಕೋಟಿ ಸಂಜೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಮೊದಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ತಾಲುಕು ಖಜಾನೆ ಕಚೇರಿಯಲ್ಲಿ ಜಯಪ್ರಕಾಶ್ ಕೆಲಸ ಮಾಡುತ್ತಿದ್ದರು.

See also  ಟೈಟಾನಿಕ್ ಸಬ್‌ಮೆರಿನ್ ದುರಂತ! ಅವಶೇಷಗಳನ್ನು ತೀರಕ್ಕೆ ಎಳೆದು ತಂದ ರಕ್ಷಣಾ ತಂಡ! ಫೋಟೋ ಬಿಡುಗಡೆಗೊಳಿಸಿದ ಅಸೋಸಿಯೇಟೆಡ್ ಪ್ರೆಸ್
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget