Latestಕ್ರೈಂಬೆಂಗಳೂರು

ಸಿಎಂ ಕಚೇರಿಯ ‘ಕಚೇರಿ ಟಿಪ್ಪಣಿ’ ನಕಲು ಪ್ರಕರಣ..! ಹಲವಾರು ಎಂ.ಎಲ್‌.ಎಗಳ ಬಳಿ ಪಿಎ ಆಗಿದ್ದವ ಅರೆಸ್ಟ್..!

785
Spread the love

ನ್ಯೂಸ್ ನಾಟೌಟ್: ಮುಖ್ಯಮಂತ್ರಿಗಳ ಕಚೇರಿಯ ಟಿಪ್ಪಣಿ “office note” ನಕಲು ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಘವೇಂದ್ರ ಬಂಧಿತ ಆರೋಪಿ. ಕೆಎಎಸ್ ಅಧಿಕಾರಿ ಒಬ್ಬರಿಗೆ ಪೋಸ್ಟಿಂಗ್ ನೀಡುವಂತೆ ನಕಲಿ ಟಿಪ್ಪಣಿ ತಯಾರಿಸಿದ್ದರು. ಸಿಎಂ ಆಫೀಸ್ ಹೆಸರಲ್ಲಿ ನಕಲಿ ಟಿಪ್ಪಟಿ ಸೃಷ್ಟಿ ಮಾಡಲಾಗಿತ್ತು.
ವಿಧಾನಸೌಧದ ಸಚಿವಾಲಯದಿಂದ ದೂರು ನೀಡಲಾಗಿತ್ತು. ದೂರಿನ ಅನ್ವಯ ಕೇಸ್ ದಾಖಲು ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ರಾಘವೇಂದ್ರ ಹಾವೇರಿಯ ರಾಣೇಬೆನ್ನೂರು ಮೂಲದವರು ಎಂದು ಗುರುತಿಸಲಾಗಿದೆ.

ಈ ಹಿಂದೆ ರಾಜ್ಯದ ಹಲವಾರು ಎಂಎಲ್‌ಎಗಳ ಬಳಿ ಪಿಎ ಆಗಿ ಕೆಲಸ ಮಾಡಿದ್ದರು. ಈಗ ಪೋಸ್ಟಿಂಗ್‌ ಕೊಡಿಸಲು ಹಣ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

See also  ನಟಿ ಜ್ಯೋತಿ ರೈ ಎನ್ನಲಾದ ಅಶ್ಲೀಲ ಖಾಸಗಿ ವಿಡಿಯೊಗಳು ವೈರಲ್..? ದೂರು ಕೊಟ್ಟ ನಟಿ, ಪ್ರಜ್ವಲ್ ರೇವಣ್ಣ ಕೇಸ್ ಬೆನ್ನಲ್ಲೇ ಸಾಲು-ಸಾಲು ಪ್ರಕರಣಗಳು ಬಯಲಿಗೆ..!
  Ad Widget   Ad Widget   Ad Widget