ಕ್ರೈಂವೈರಲ್ ನ್ಯೂಸ್

ಆಫೀಸ್‌ ನಲ್ಲಿ ಟಾರ್ಚರ್‌ ಕೊಟ್ಟ ಎಂದು ಮೇಲಾಧಿಕಾರಿಗೆ ಹೊಡೆಸಿದ ಸಿಬ್ಬಂದಿ..! ಸುಪಾರಿ ಕೊಟ್ಟು ನಡು ರಸ್ತೆಯಲ್ಲೇ ಹಲ್ಲೆ..!

ನ್ಯೂಸ್ ನಾಟೌಟ್: ನಡು ರಸ್ತೆಯಲ್ಲಿ ಯುವಕರಿಬ್ಬರು ಸೇರಿ ರಾಡ್‌ ನಿಂದ ವ್ಯಕ್ತಿಗೆ ಮನಬಂದಂತೆ ಥಳಿಸಿದ ಹಲ್ಲೆ ದೃಶ್ಯವೆಲ್ಲವೂ ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದರ ಡ್ಯಾಶ್‌ ಬೋರ್ಡ್‌ನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆಫೀಸ್‌ನಲ್ಲಿ ಟಾರ್ಚರ್‌ ಕೊಟ್ಟ ಮೇಲಾಧಿಕಾರಿಗೆ ಸಿಬ್ಬಂದಿಯೇ ಸುಪಾರಿ ಕೊಟ್ಟು ಹೊಡೆಸಿರುವುದು ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಕೈಗೊಂಡ ಹೆಣ್ಣೂರು ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಹಲ್ಲೆಗೊಳಗಾದ ಸುರೇಶ್ ಎಂಬಾತನಿಂದ ದೂರು ಪಡೆದು, ಹಲ್ಲೆ ನಡೆಸಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಉಮಾಶಂಕರ್, ವಿನೀಶ್, ಅನೀಶ್, ಮುತ್ತು ಹಾಗೂ ಸಂದೀಪ್ ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಮಾ. 31 ರಂದು ಹೊರಮಾವುನಿಂದ ಹೆಣ್ಣೂರಿಗೆ ತೆರಳುವ ಮಾರ್ಗದಲ್ಲಿ ಸುರೇಶ್‌ ಹೋಗುತ್ತಿದ್ದಾಗ, ಬಲವಾದ ಆಯುಧದಿಂದ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಹಲ್ಲೆ ಮಾಡಿದ್ದ ದೃಶ್ಯವು ಕಾರಿನ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಪೊಲೀಸ್‌ ವಿಚಾರಣೆ ವೇಳೆ ಮೇಲಾಧಿಕಾರಿ ಆಗಿದ್ದ ಸುರೇಶ್‌ ತನ್ನ ಸಿಬ್ಬಂದಿಗೆ ಕೆಲಸದಲ್ಲಿ ಹೆಚ್ಚೆಚ್ಚು ಒತ್ತಡ ಕೊಟ್ಟಿದ್ದನಂತೆ. ಈ ಕಾರಣಕ್ಕೆ ಸಿಬ್ಬಂದಿಯಿಂದಲೇ ಸುರೇಶ್‌ ಹಲ್ಲೆಗೆ ಸುಪಾರಿ ಕೊಟ್ಟಿರುವುದು ತಿಳಿದು ಬಂದಿದೆ. ಬಂಧಿತರಾಗಿರುವ ಉಮಾಶಂಕರ್, ವಿನೀಶ್ ಹಾಗೂ ಹಲ್ಲೆಗೊಳಗಾದ ಸುರೇಶ್ ಹೆರಿಟೇಜ್ ಹಾಲು ಉತ್ಪನ್ನಗಳ ಕಂಪನಿಯ ಉದ್ಯೋಗಿಗಳಾಗಿದ್ದಾರೆ.

ತನಿಖೆ ವೇಳೆ ಸುರೇಶ್‌ ಹೆಚ್ಚು ಒತ್ತಡ ಹಾಕುತ್ತಿದ್ದ ಹೀಗಾಗಿ ಈ ಕೃತ್ಯ ಎಸಗಿದ್ದಾಗಿ ಉಮಾಶಂಕರ್‌ ಹೇಳಿಕೆ ನೀಡಿದ್ದಾನೆ. ಸುರೇಶ್‌ಗೆ ಹಲ್ಲೆ ಮಾಡಿ, ಬುದ್ಧಿ ಕಲಿಯುವಂತೆ ಮಾಡಿ ಎಂದು ಹಣ ಕೊಟ್ಟು ಸುಪಾರಿ ನೀಡಿದ್ದನಂತೆ. ಕಳೆದ ಒಂದು ವರ್ಷದ ಹಿಂದಷ್ಟೇ ಆಡಿಟಿಂಗ್‌ ಕೆಲಸಕ್ಕೆ ಸೇರಿದ್ದ ಸುರೇಶ್‌, ಸಿಬ್ಬಂದಿಗೆಲ್ಲ ಆ ದಿನದ ಬ್ಯಾಲೆನ್ಸ್ ಅಂದೇ ಕ್ಲಿಯರ್ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದನಂತೆ. ಮಾತ್ರವಲ್ಲ ಕಂಪನಿಯ ಹಿರಿಯ ಅಧಿಕಾರಿಗಳ ಗಮನಕ್ಕೂ ತಂದು, ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದ್ದ. ಇದು ಕೆಲಸ ಮಾಡುತ್ತಿದ್ದವರಿಗೆ ಒತ್ತಡ ತಂದಿತ್ತು. ಹೀಗಾಗಿ ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ ಉಮಾಶಂಕರ್‌ ಮಾಜಿ ಉದ್ಯೋಗಿ ಸಂಪರ್ಕ ಮಾಡಿದ್ದ. ಈ ಹಿಂದೆ ಕೆಲಸಕ್ಕಿದ್ದ ವ್ಯಕ್ತಿಯ ಮುಖಾಂತರ ಸಂದೀಪ್ ಎಂಬಾತನ ಸಂಪರ್ಕ ಮಾಡಿದ್ದ. ಕೆಆರ್ ಪುರಂನ ಸಂದೀಪ್ ಹಾಗೂ ಆತನ ಗೆಳೆಯರಿಗೆ ಸುಪಾರಿ ಕೊಟ್ಟಿದ್ದ. ಅದರಂತೆ ರಸ್ತೆಯಲ್ಲಿ ಹೋಗುತ್ತಿದ್ದ ಸುರೇಶ್‌ ಮೇಲೆ ದಾಳಿ ಮಾಡಿದ ಸಂದೀಪ್‌ ಟೀಂ, ಸ್ಟೀಲ್‌ ರಾಡ್‌ನಿಂದ ಹೊಡೆದು ಪರಾರಿಯಾಗಿದ್ದರು. ಬಳಿಕ ಏನು ಗೊತ್ತಿಲ್ಲದಂತೆ ತಮ್ಮ ಪಾಡಿಗೆ ತಾವಿದ್ದರು. ಆದರೆ ವಿಡಿಯೋ ವೈರಲ್ ಬಳಿಕ ಆರೋಪಿಗಳ ಬೆನ್ನಟ್ಟಿದ ಪೊಲೀಸರು ಎಲ್ಲರನ್ನು ಬಂಧಿಸಿದ್ದಾರೆ.

Related posts

ಸೌಜನ್ಯ ಕೊಲೆ ಪ್ರಕರಣ, ಸಂತೋಷ್‌ ರಾವ್ ಕುಟುಂಬದ ಕ್ಷಮೆಯಾಚನೆ, ಸಂತೋಷ್ ರಾವ್ ತಂದೆಗೆ ಹೊಸ ಬಟ್ಟೆ ತೊಡಿಸಿ ಪಾದಪೂಜೆ ಮಾಡಿದ ತಿಮರೋಡಿ ಬಳಗ

ದಕ್ಷಿಣ ಕನ್ನಡ: ವೃದ್ಧ ರೋಗಿಯ ಮೇಲೆ ಲೈಂಗಿಕ ದೌರ್ಜನ್ಯ! ಹೋಮ್ ನರ್ಸಿಂಗ್ ಗೆ ಬಂದಿದ್ದ 19ರ ಯುವಕನ ಬಂಧನ!

ಡಿ.ಕೆ.ಸುರೇಶ್ ಆಸ್ತಿ ಬರೋಬ್ಬರಿ 593 ಕೋಟಿ ರೂ..! ಕೇವಲ 5 ವರ್ಷಗಳಲ್ಲಿ 259 ಕೋಟಿ ರೂ. ಏರಿಕೆ..!