ಕರಾವಳಿ

ದಾನ ಮಾಡಿದಾಗ ಮಾತ್ರ ಸಂಪತ್ತಿಗೆ ನಿಜವಾದ ಅರ್ಥ ಬರುವುದು: ಒಡಿಯೂರು ಶ್ರೀ

ನ್ಯೂಸ್ ನಾಟೌಟ್: ಸಂಪತ್ತಿಗೆ ನಿಜವಾದ ಅರ್ಥ ಬರುವುದು ದಾನ ಮಾಡಿದಾಗ ಮಾತ್ರ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ತಿಳಿಸಿದರು.

ಪುತ್ತೂರಿನಲ್ಲಿ ಸೋಮವಾರ ನಡೆದ ರೈ ಎಸ್ಟೇಟ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರ ಪುತ್ತೂರು ವತಿಯಿಂದ ಆಯೋಜಿಸಲಾದ ವಸ್ತ್ರದಾನ ಮತ್ತು ಭೋಜನ ಕೂಟದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಪ್ರೀತಿ ಇದ್ದಾಗ ಮಾತ್ರ ಜನರ ಹೃದಯ ಗೆಲ್ಲಲು ಸಾಧ್ಯವಾಗುತ್ತದೆ. ಮಾನವೀಯತೆ ಎಲ್ಲಿರುತ್ತದೆಯೋ ಅಲ್ಲಿ ಬದುಕು ಚೆನ್ನಾಗಿರುತ್ತದೆ. ಅಶೋಕ್ ರೈ ಗಳು ಭ್ರಷ್ಟಾಚಾರ ರಹಿತ ಆಡಳಿತವನ್ನು ಪುತ್ತೂರಿನಲ್ಲಿ ಜನರಿಗೆ ನೀಡಬೇಕು. ರಾಜಕೀಯದಲ್ಲಿ ಧರ್ಮಬೇಕು, ಆದರೆ ಧರ್ಮದಲ್ಲಿ ರಾಜಕೀಯ ಬೇಡ ಎಂದು ತಿಳಿಸಿದರು.

ಅಶೋಕ್ ರೈ ನಡೆಸುತ್ತಿರುವ ಟ್ರಸ್ಟ್ ಸಮಾಜಮುಖಿಯಾಗಿದೆ. ಅವರು ಬಡವರಿಗೆ ಜಾಗ, ಮನೆ ನೀಡುವ ಮೂಲಕ ಅರ್ಹರಿಗೆ ಸಹಾಯ ಮಾಡುತ್ತಾರೆ. ಅಶೋಕ್ ರೈ ಬಡವರ ಕಷ್ಟವನ್ನು ಅರಿತು ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.

Related posts

ಪುತ್ತೂರು:ರಸ್ತೆ ಮಧ್ಯೆ ಮಗುಚಿ ಬಿದ್ದ ಟಿಪ್ಪರ್

ಸುಳ್ಯ:ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆಂದು ತೆರಳುತ್ತಿದ್ದ ಯುವಕ ನಾಪತ್ತೆ,ಬಸ್‌ ನಿಲ್ದಾಣದಿಂದ ಬಸ್ಸು ಹತ್ತಿ ಹೊರಟಿದ್ದ ಯುವಕ..!

ಸುಳ್ಯ:ಮದ್ಯದ ನಶೆಯಲ್ಲಿ ತಂದೆ-ತಾಯಿ ಮೇಲೆ ಯದ್ವಾತದ್ವಾ ಕತ್ತಿ ಬೀಸಿದ ಪ್ರಕರಣ , ಆರೋಪಿ ಮಗ ಅರೆಸ್ಟ್