Latest

ಬೆಂಗಳೂರಿನಲ್ಲಿರೋರು ಅನಕ್ಷರಸ್ಥರೆಂದು ಅವಮಾನಿಸಿದ ಒಡಿಶಾ ಯುವತಿ: ಕನ್ನಡಿಗರಿಂದ ಭಾರೀ ಆಕ್ರೋಶ,ಏನಿದು ಘಟನೆ?

312

ನ್ಯೂಸ್ ನಾಟೌಟ್ : ಬೆಂಗಳೂರಿಗರ ಬಗ್ಗೆ ಅನ್ಯರಾಜ್ಯದ ಯುವತಿ ನಾಲಗೆ ಹರಿಬಿಟ್ಟಿದ್ದು, ಬೆಂಗಳೂರಿಗರಿಗೆ ತಲೆಯಲ್ಲಿ ಬುದ್ಧಿ ಇಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ವಿಡಿಯೋ ಪೋಸ್ಟ್ ಮಾಡಿರುವ ಬಗ್ಗೆ ವರದಿಯಾಗಿದೆ.

 ನೇಹಾ ಬಿಸ್ವಾಲ್ ಎಂಬ ಒಡಿಶಾ  ಮೂಲದ ಯುವತಿ, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾಳೆ. ರಸ್ತೆಯಲ್ಲಿ ನಡೆದುಕೊಂಡು ಆಫೀಸ್‌ಗೆ ಹೋಗುವಾಗ, ಯಾರೋ ಒಬ್ಬ ಕಾರು ಚಾಲಕ ವೇಗವಾಗಿ ಹೋದ ಪರಿಣಾಮ ರಸ್ತೆಯಲ್ಲಿದ್ದ ನೀರು ಯುವತಿಯ ಮೇಲೆ ಎರಚಿತ್ತು. ಫುಟ್‌ಪಾತ್ ಮೇಲೆ ನಡೆದುಕೊಂಡು ಹೋಗದೇ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಿದ್ದ ಯುವತಿಯು, ನೀರು ಎರಚಿರೋದನ್ನ ರೀಲ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾಳೆ. 

ಇದನ್ನೂ ಈ ರೀಲ್ಸ್‌ನಲ್ಲಿ ಬೆಂಗಳೂರಿನಲ್ಲಿ ಇರುವ ಜನರಿಗೆ ಶಿಕ್ಷಣ ಇದೆ. ಆದ್ರೆ ಅರ್ಥ ಮಾಡಿಕೊಳ್ಳುವ ಬುದ್ಧಿ ಇಲ್ಲ.ಇಷ್ಟು ಮಳೆ ಬರುತ್ತಿರುವಾಗ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ವೇಗವಾಗಿ ಕಾರು ಚಾಲನೆ ಮಾಡಿದ್ದರಿಂದ ರಸ್ತೆಯಲ್ಲಿದ್ದ ನೀರು ನನ್ನ ಬಾಯಿಗೆ ಹೋಯಿತು.  ಈ ಕಾರನ್ನು ನೋಡಿ. ನೀರು ಹೇಗೆ ನನ್ನ ಮೇಲೆ ಬಿದ್ದಿದೆ ನೋಡಿ. ನನಗೆ ಅಳು, ಸಿಟ್ಟು ಎರಡೂ ಬರುತ್ತಿದೆ. ಥೂ.. ಇಷ್ಟು ಅನಕ್ಷರಸ್ಥರು ಇದ್ದಾರೆ. ನಿಮ್ಮಿಂದ ನಾವು ರಸ್ತೆಯಲ್ಲಿ ನಡೆದಾಡಬಾರದಾ? ಛೀ.. ಎಂದು ರೀಲ್ಸ್‌ನಲ್ಲಿ ಬೆಂಗಳೂರಿಗರಿಗೆ ಬೈದು ಅವಮಾನ ಮಾಡಿದ್ದಾಳೆ.

ಸದ್ಯ  ಬೆಂಗಳೂರಿನಲ್ಲಿರೋರು ಅನಕ್ಷರಸ್ಥರೆಂದು ಯುವತಿ ಆರೋಪಿಸಿದ್ದು, ಆಕೆಯ ಮಾತಿಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ

 

 

See also  ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವಿಶ್ವ ಪರಿಸರ ದಿನಾಚರಣೆ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಪರಿಸರ ಉಳಿಸಿ : ಡಾ. ಕೆ.ವಿ. ಚಿದಾನಂದ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget