ಕರಾವಳಿ

ಕೊಡಗು ಸಂಪಾಜೆ: ಅಗಲಿದ ಗಾಂಧಿಪ್ರಸಾದ್, ರತ್ನಾಕರರಿಗೆ ನುಡಿನಮನ

ನ್ಯೂಸ್ ನಾಟೌಟ್: ಈ ಹಿಂದೆ ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಇದೀಗ ಅಕಾಲಿಕವಾಗಿ ನಿಧನ ಹೊಂದಿದ ದಿ. ಗಾಂಧಿ ಪ್ರಸಾದ್ ಬಂಗಾರಕೋಡಿ ಮತ್ತು ದಿ.ರತ್ನಾಕರ ದೊಡ್ಕಜೆ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ತಾ.10 ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಅದ್ಯಕ್ಷ ಅನಂತ್ ಊರುಬೈಲು ನುಡಿನಮನ ಸಲ್ಲಿಸಿದರು. ಸಂಘದ ಉಪಾಧ್ಯಕ್ಷ ರಾಜಾರಾಮ ಕಳಗಿ ,ಸಿಇಒ ಬಿ.ಕೆ.ಆನಂದ ,ಆಡಳಿತ ಮಂಡಳಿ ನಿರ್ದೇಶಕರು ,ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Related posts

ಆಗಸ್ಟ್‌ 13ರಂದು ಸುಳ್ಯದಲ್ಲಿ ಅದ್ಧೂರಿಯಾಗಿ ‘ಆಟಿಡೊಂಜಿ ದಿನ’, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದಿಂದ ಆಯೋಜನೆ

ಬಂಟ್ವಾಳ: ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್..! ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು

ಶ್ರೀ ಭಗವಾನ್ ಸಂಘದಿಂದ ಸಂಪಾಜೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ,ಗಣ್ಯರ ಉಪಸ್ಥಿತಿ