ಕೆವಿಜಿ ಕ್ಯಾಂಪಸ್‌

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎನ್. ಟಿ. ಇ. ಪಿ (NTEP) ಕೋರ್ ಕಮಿಟಿ ವತಿಯಿಂದ ವಿಶೇಷ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎನ್. ಟಿ. ಇ. ಪಿ ಕೋರ್ ಕಮಿಟಿ ವತಿಯಿಂದ ವಿಶೇಷ ಕಾರ್ಯಕ್ರಮ ಶನಿವಾರ (ಫೆ. 1) ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಡೀನ್ ಡಾ| ನೀಲಾಂಬಿಕೈ ನಟರಾಜನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ NTEP ನೋಡಲ್ ಅಧಿಕಾರಿ ಡಾ| ಪ್ರೀತಿರಾಜ್ ಬಲ್ಲಾಳ್ NTEP ಯ ಕಾರ್ಯವೈಖರಿ ಹಾಗೂ ವರದಿ ವಾಚಿಸಿದರು. ಈ ಸಂದರ್ಭ NTEP ಯ

ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಸಂಸ್ಥೆಗೆ ವಿಶೇಷ ಕೊಡುಗೆ ನೀಡಿದ ಡಾ| ನಾರಾಯಣ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ NTEP ನೋಡಲ್ ಆಫೀಸರ್ ಡಾ| ದಿನೇಶ್ ಪಿ ವಿ, ಕೋರ್ಡಿನೇಟರ್ ಡಾ| ಅನಿರುದ್ಧ, NTEP ಮೆಡಿಕಲ್ ಆಫೀಸರ್ ಡಾ| ನಿಹಾರಿಕ, ಎಲ್ಲಾ ವಿಭಾಗಗಳ ಮುಖ್ಯಸ್ಥರು, NTEP ಸೀನಿಯರ್ ಟ್ರೀಟ್ಮೆಂಟ್ ಸೂಪರ್‌ ವೈಸರ್ ಮತ್ತು ಟಿ. ಬಿ ಹೆಲ್ತ್ ವಿಸಿಟರ್ ಉಪಸ್ಥಿತರಿದ್ದರು.

Related posts

ಸುಳ್ಯ: ಅಂತರ್ ಕಾಲೇಜು ಮಟ್ಟದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎನ್ಎಂಸಿ ವಿದ್ಯಾರ್ಥಿನಿಗೆ ಬಹುಮಾನ, ಗಾನ ಬಿ ಡಿ. ಅವರಿಗೆ ತೃತೀಯ ಸ್ಥಾನ

ನ.24ರಂದು ಹರಿಹರ ಪಲ್ಲತಡ್ಕದಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ, ಕೆವಿಜಿ ಸುಳ್ಯ ಹಬ್ಬ ಸಮಾಜಸೇವಾ ಸಂಘದಿಂದ ಆಯೋಜನೆ

ಜ್ಞಾನಗಂಗೆಯನ್ನು ತಂದ ಭಗೀರಥ…