ನ್ಯೂಸ್ ನಾಟೌಟ್ :ಮಂಗಳೂರು ವಿಶ್ವವಿದ್ಯಾನಿಲಯ, ನೆಹರೂ ಮೆಮೋರಿಯಲ್ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ನಲವತ್ತೇಳನೇ ವರ್ಷದ ವಾರ್ಷಿಕ ವಿಶೇಷ ಶಿಬಿರ ನಡೆಯುತ್ತಿದೆ. ಫೆ. 22ನೇ ಶನಿವಾರದಂದು ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ಡಾ ಕೆವಿ ಚಿದಾನಂದ ಇವರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು.ಇದೀಗ ನಿರಂತರ 7 ದಿನಗಳ ಶಿಬಿರ ಪ್ರಾರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ಶಿಬಿರಾರ್ಥಿಗಳಿಗೆ ಗ್ರಾಮ ಸಮೀಕ್ಷೆ ಹಾಗೂ ಡಿಜಿಟಲ್ ಬಗ್ಗೆ ಮಾಹಿತಿ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಗಾರ ಫೆ.24 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಸುಳ್ಯ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಮಧುರಾ ಎಮ್ ಆರ್ ಗ್ರಾಮ ಸಮೀಕ್ಷೆ ಕುರಿತು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು. ಬಳಿಕ ದಕ ಸ.ಕಿ.ಪ್ರಾ.ಶಾಲೆ ಮುಖ್ಯ ಶಿಕ್ಷಕರಾದ ಸುನೀತಾ ಎಮ್ ಎನ್ ಹಾಗೂ ನ್ಯೂಸ್ ನಾಟೌಟ್ ಡಿಜಿಟಲ್ ಮಾಧ್ಯಮದ ಕೆವಿಜಿ ಕ್ಯಾಂಪಸ್ ಕೋರ್ಡಿನೇಟರ್ ಹರ್ಷಿತಾ ವಿನಯ್ ಡಿಜಿಟಲ್ ಕುರಿತಾದ ಸವಿವರವಾದ ಮಾಹಿತಿಯನ್ನು ನೀಡಿದರು.ನೆಹರೂ ಮೆಮೋರಿಯಲ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಕೃಷಿ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಕಸಿ ಕಟ್ಟುವಿಕೆ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
ಈ ಸಂಧರ್ಭ ಕಾರ್ಯಕ್ರಮದ ಅಧ್ಯಕ್ಷರಾಗಿ ಮಂಡೆಕೋಲು ಗ್ರಾಮಪಂಚಾಯತ್ ನ ಸದಸ್ಯರಾದ ನಾರಾಯಣ ಕೆದ್ಕರ್ ಅಥಿತಿಗಳಾಗಿ ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರಾದ ತಾರಾನಾಥ ಕೆ, ಅಂಗನವಾಡಿ ಸಹಾಯಕಿ ಪವಿತ್ರ, ಎನ್. ಎಸ್.ಎಸ್ ಘಟಕಾಧಿಕಾರಿಗಳಾದ ಚಿತ್ರಲೇಖ ಕೆ ಎಸ್, ಹರಿಪ್ರಸಾದ್ ಅತ್ಯಾಡಿ ಹಾಗೂ ನೆಹರೂ ಮೆಮೋರಿಯಲ್ ಕಾಲೇಜಿನ ಉಪನ್ಯಾಸಕ ವೃಂದದವರು ಸಾರ್ವಜನಿಕರು ಉಪಸ್ಥಿತರಿದ್ದರು.