ಕ್ರೈಂರಾಜಕೀಯರಾಜ್ಯ

ಪೋಕ್ಸೋ ಕೇಸ್ ರದ್ದು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಬಿ.ಎಸ್ ಯಡಿಯೂರಪ್ಪ..! ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ನೋಟಿಸ್ ನೀಡಿದ ಕೋರ್ಟ್..!

44
Spread the love

ನ್ಯೂಸ್ ನಾಟೌಟ್: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಪೋಕ್ಸೊ ಪ್ರಕರಣದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಕೋರಿ ಹೈಕೋರ್ಟ್ ಗೆ ಬಿ.ಎಸ್ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದಾರೆ.

ತಾವು ಯಾವುದೇ ಕಾನೂನು ಬಾಹಿರ ಕೃತ್ಯ ಎಸಗಿಲ್ಲ. ಪಿರ್ಯಾದಿದಾರ ಮಹಿಳೆಗೆ ದೂರು ನೀಡುವುದೇ ಹವ್ಯಾಸವಾಗಿದೆ. ಎಫ್ಐಆರ್ ದಾಖಲಾದ ನಂತರ ಏ.12 ರಂದು ಪೊಲೀಸರ ವಿಚಾರಣೆಗೆ ಹಾಜರಾಗಿದ್ದೇನೆ. ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳದೇ ಧ್ವನಿ ಮಾದರಿ ಸಂಗ್ರಹಿಸಿದರು. ದೂರಿನಲ್ಲಿ ಅಪರಾಧದ ಅಂಶಗಳಿಲ್ಲದಿರುವುದರಿಂದ ರದ್ದು ಪಡಿಸಲು ಅರ್ಜಿಯಲ್ಲಿ ಮನವಿ ಮಾಡಲಾಗಿದೆ ಎಂದು ಬಿಎಸ್‌ ವೈ ತಿಳಿಸಿದ್ದಾರೆ.

ಇದರ ಜೊತೆಗೆ ದೂರು ನೀಡಿದ್ದ ಮಹಿಳೆ ಇತ್ತೀಚೆಗೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಸಹಾಯ ಕೇಳಲು ತಮ್ಮ ಪುತ್ರಿಯೊಂದಿಗೆ ಬಿಎಸ್ ವೈ ಯನ್ನು ಭೇಟಿ ಮಾಡಿದಾಗ ಅನುಚಿತ ವರ್ತನೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಪೋಕ್ಸೊ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

Click 👇

https://newsnotout.com/2024/06/darshan-case-they-demands-a-lot-under-police-custody
https://newsnotout.com/2024/06/fir-on-darshan-forest-department-kannada-news
https://newsnotout.com/2024/06/anupam-agarwal-reacts-on-mangaluru-vijayothsava-issue
https://newsnotout.com/2024/06/darshan-pavithra-gowda-kannada-issue-renuka-swami-message
https://newsnotout.com/2024/06/vijaya-lakshmi-darshan-insta-unfollowed-by-wife
See also  ಗಣೇಶ ಹಬ್ಬದ ಸೆಕ್ಯುರಿಟಿಯಲ್ಲಿ ಪೊಲೀಸರು ಬ್ಯುಸಿ ..! ಕೈ, ಕಾಲು ಕಟ್ಟಿ ಮನೆ ದರೋಡೆ!
  Ad Widget   Ad Widget   Ad Widget   Ad Widget