ಕ್ರೈಂವೈರಲ್ ನ್ಯೂಸ್

ಕ್ಷಮಿಸಿಬಿಡು ಅಪ್ಪಾ… ಎಂದು ಬರೆದು ಕಾಲುವೆಗೆ ಹಾರಿದ್ದೇಕೆ ವಿದ್ಯಾರ್ಥಿ..? ಡೆತ್ ನೋಟ್ ನಲ್ಲಿತ್ತು ಶಾಲೆಯಲ್ಲಿ ನಡೆದ ಆ ಘಟನೆ..!

ನ್ಯೂಸ್ ನಾಟೌಟ್: ತನ್ನ ತಂದೆಯ ಬಳಿ ಕ್ಷಮೆಯಾಚಿಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಡೆತ್‌ ನೋಟ್‌ ಬರೆದಿದ್ದಾನೆ.

ಪರೀಕ್ಷೆಯು ಬೆಳಗ್ಗೆ 9 ರಿಂದ ಆರಂಭವಾಗಿ ಮಧ್ಯಾಹ್ನ 12 ರವರೆಗೆ ನಡೆಯುತ್ತದೆ. ಆದರೆ 17 ವರ್ಷದ ವಿದ್ಯಾರ್ಥಿ ಬೆಳಗ್ಗೆ 9.15 ಕ್ಕೆ ಪರೀಕ್ಷಾ ಕೇಂದ್ರವನ್ನು ತಲುಪಿದ್ದಾನೆ ಎಂದು ವರದಿಯಾಗಿದೆ. ಹೀಗಾಗಿ ಆತನಿಗೆ ಶಿಕ್ಷಕರು ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿ ಡೆತ್‌ ನೋಟ್‌ ಬರೆದಿಟ್ಟು ಕಾಲುವೆಗೆ ಹಾರಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.

ಪರೀಕ್ಷಾ ಕೇಂದ್ರ ತಡವಾಗಿ ತಲುಪಿದ್ದೇನೆ. ಹೀಗಾಗಿ ನನಗೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ನಿಮ್ಮಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ವಿದ್ಯಾರ್ಥಿ ತನ್ನ ತಂದೆಗೆ ಪತ್ರ ಬರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಒಂದು ನಿಮಿಷ ತಡವಾದರೂ ಪರೀಕ್ಷೆಗೆ ಅವಕಾಶ ನೀಡಬಾರದು ಎಂಬ ನಿಯಮವನ್ನು ಇಂಟರ್ ಮೀಡಿಯೇಟ್ ಬೋರ್ಡ್ ಜಾರಿಗೊಳಿಸಿದೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ವಿದೇಶಿ ಯೂಟ್ಯೂಬರ್‌ಗೆ ಕಿರುಕುಳ ನೀಡಿದ ನವಾಬ್‌..! ಕೃತ್ಯವೆಸಗಿದ ವರ್ತಕನ ಬಂಧಿಸಿದ ಪೊಲೀಸರು! ಇಲ್ಲಿದೆ ವೈರಲ್ ವಿಡಿಯೋ

ಗೂನಡ್ಕ: ಕಾರು ಅಪಘಾತದಲ್ಲಿ ಗಾಯಗೊಂಡು ಓಡುತ್ತಿದ್ದ ಹಸು ಕೆರೆಗೆ ಬಿದ್ದು ಸಾವು, ಕಾರಿನ ವೇಗಕ್ಕೆ 2 ಹಸು, 1 ಶ್ವಾನ ಬಲಿ

ಬೆಳ್ಳಾರೆ: ಎ.ಪಿ.ಎಂ.ಸಿ ಕಟ್ಟಡದಲ್ಲಿ ವ್ಯಕ್ತಿಯೋರ್ವರ ಶವ ಪತ್ತೆ